Wed, May 7, 2025

Wed, May 7, 2025


ಬೆಳ್ತಂಗಡಿ ಬಸದಿಯಲ್ಲಿ ಮಹಾವೀರ ಜಯಂತಿ ಆಚರಣೆ


Logo

Published Date: 10-Apr-2025

ಉಜಿರೆ: ಬೆಳ್ತಂಗಡಿ ಜೈನಪೇಟೆಯಲ್ಲಿರುವ ರತ್ನತ್ರಯ ತೀರ್ಥಕ್ಷೇತ್ರದಲ್ಲಿ ಭಗವಾನ್ ಮಹಾವೀರ ಜಯಂತಿ ಆಚರಣೆಯ ಅಂಗವಾಗಿ ಗುರುವಾರ ತೋರಣಮುಹೂರ್ತ , ವಿಮಾನಶುದ್ಧಿ, ಭಗವಾನ್ ಮಹಾವೀರ ಸ್ವಾಮಿಗೆ ನವಕಲಾಶಾಭಿಷೇಕ, ಭಗವಾನ್ ಶಾಂತಿನಾಥ ಸ್ವಾಮಿಗೆ ೧೦೮ ಕಲಶಗಳಿಂದ ಮಹಾಭಿಷೇಕ, ಪದ್ಮಾವತಿ ಅಮ್ಮನವರಿಗೆ ಅಲಂಕಾರ ಪೂಜೆ ಹಾಗೂ ಬ್ರಹ್ಮಯಕ್ಷ ದೇವರಿಗೆ ವಿಶೇಷ ಪೂಜೆ ನಡೆಯಿತು. ಬಸದಿಯ ಆಡಳಿತ ಮೊಕ್ತೇಸರ ಕೆ. ಜಯವರ್ಮರಾಜ ಬಳ್ಳಾಲ್ ನೇತೃತ್ವದಲ್ಲಿ ಪ್ರಧಾನ ಅರ್ಚಕ ಕೆ. ಜಯರಾಜ ಇಂದ್ರರು ಮತ್ತು ಸಹಪುರೋಹಿತರಯ ಧಾರ್ಮಿಕ ವಿಧಿ-ವಿಧಾನಗನ್ನು ನೆರವೇರಿಸಿದರು. ಬಳಿಕ ನಡೆದ ಶಾಂತಿಚಕ್ರ ಆರಾಧನೆಯಲ್ಲಿ 26 ಮಂದಿ ಶ್ರಾವಕರು, ಶ್ರಾವಕಿಯರು ಭಾಗವಹಿಸಿ ಪುಣ್ಯಭಾಗಿಗಳಾದರು. ಭಗವಾನ್ ಮಹಾವೀರ ತೀರ್ಥಂಕರರ ಜೀವನ-ಸಾಧನೆ ಬಗ್ಯೆ ಉಪನ್ಯಾಸ ನೀಡಿದ ಅಳದಂಗಡಿ ಮಿತ್ರಸೇನ ಜೈನ್, ಮಹಾವೀರ ತೀರ್ಥಂಕರರು ಬೋಧಿಸಿದ ಅಹಿಂಸೆ, ಅನೇಕಾಂತವಾದ, ಬದುಕು ಮತ್ತು ಬದುಕಲು ಬಿಡು ಮೊದಲಾದ ಉಪದೇಶಗಳು ಸಾರ್ವಜನಿಕ ಮೌಲ್ಯ ಹೊಂದಿವೆ. ಸಕಲ ಪ್ರಾಣಿಪಕ್ಷಿಗಳಿಗೂ ನಮ್ಮಂತೆಯೇ ಬದುಕುವ ಹಕ್ಕಿದೆ. ಮಹಾವೀರರು ಬೋಧಿಸಿದ ತತ್ವಗಳಿಂದ ವಿಶ್ವಶಾಂತಿಯೊಂದಿಗೆ ಸುಖ-ಶಾಂತಿ, ನೆಮ್ಮದಿಯ ಜೀವನ ಸಾಧ್ಯ ಎಂದು ಅವರು ಅಭಿಪ್ರಾಯಪಟ್ಟರು. ಕೆ. ಜಯವರ್ಮರಾಜ ಬಳ್ಳಾಲ್, ಡಾ. ಕೆ. ಜೀವಂಧರ ಬಳ್ಳಾಲ್, ಕೆ. ರಾಜವರ್ಮ ಬಳ್ಳಾಲ್, ಬೆಂಗಳೂರಿನ ವಕೀಲ ಕೆ.ಬಿ. ಯುವರಾಜ ಬಳ್ಳಾಲ್, ವಿಜಯಾ ಬ್ಯಾಂಕ್‌ನ ನಿವೃತ್ತ ಪ್ರಬಂಧಕ ಎಂ. ಜಿನರಾಜ ಶೆಟ್ಟಿ, ಸುಮತಿ ಕೆ.ಆರ್. ಬಳ್ಳಾಲ್ದ, ವಿನಯಾ ಜೆ. ಬಳ್ಳಾಲ್, ಡಾ. ಪ್ರಿಯಾ ಬಳ್ಳಾಲ್ ಮತ್ತು ಮಣಿಮಾಲ ಬಳ್ಳಾಲ್ ಹಾಗೂ ಬಳ್ಳಾಲ್ ಕುಟುಂಬಸ್ಥರು ಉಪಸ್ಥಿತರಿದ್ದರು.

Recomendatoion img Recomendatoion img Recomendatoion img Recomendatoion img Recomendatoion img Recomendatoion img Recomendatoion img Recomendatoion img Recomendatoion img Recomendatoion img Recomendatoion img Recomendatoion img Recomendatoion img Recomendatoion img