Sun, May 11, 2025
ತುಮಕೂರು: ಉಚಿತ ಬೇಸಿಗೆ ಶಿಬಿರ
ತುಮಕೂರು: ಇಲ್ಲಿಯ ಶ್ರೀ ಪದ್ಮಾಂಬ ಜೈನ ಮಹಿಳಾ ಸಮಾಜವು ಹಲವಾರು ವರ್ಷಗಳಿಂದ ಬೇಸಿಗೆ ಶಿಬಿರ ಏರ್ಪಡಿಸುತ್ತಿದ್ದು, ಈ ವರ್ಷವು ಸಹ ಉಚಿತ ಬೇಸಿಗೆ ಶಿಬಿರ ಆಯೋಜಿಸಿರುತ್ತಾರೆ ರಜಾ ದಿನಗಳಲ್ಲಿ ಮಕ್ಕಳಿಗೆ ಉತ್ತಮ ಮಾರ್ಗದರ್ಶನ ನೀಡುವ ಸದುದ್ದೇಶದಿಂದ ಈ ಸಂಸ್ಕಾರ ಶಿಬಿರದಲ್ಲಿ ನಿರ್ಯಾಪಕ ಮುನಿಗಳಾದ ಪರಮ ಪೂಜ್ಯ 108 ನಿಯಮಸಾಗರ ಮಹಾರಾಜರಿಂದ ತರಬೇತಿ ಹೊಂದಿ, ಅನೇಕ ಧಾರ್ಮಿಕ ಶಿಬಿರಗಳನ್ನು ಯಶಸ್ವಿಯಾಗಿ ನಡೆಸಿರುವ ಬೆಳಗಾವಿಯ ಸಂಪನ್ಮೂಲ ವ್ಯಕ್ತಿ ಸುಮನ್‌ಪತ್ರಾವಳಿಯವರು 5 ದಿನಗಳ ಕಾಲ ಮಕ್ಕಳ ಜೊತೆಯಲ್ಲಿದ್ದು ಅವರುಗಳ ಶ್ರೇಯೋಭಿವೃದ್ಧಿಗೆ ತಮ್ಮ ಅಮೂಲ್ಯ ಸಮಯವನ್ನು ಮೀಸಲಿಡುವರು. ಇದರೊಂದಿಗೆ ಚಿತ್ರಕಲೆ, ಆಟೋಟ, ನಾಟಕ ವಿವಿಧ ಮನೋರಂಜನೆಯಿಂದಲೂ ಸಹ ಹಲವು ಸಂಪನ್ಮೂಲ ವ್ಯಕ್ತಿಗಳು ಮಕ್ಕಳ ಸರ್ವತೋಮುಖ ಅಭಿವೃದ್ಧಿಗೆ ಶ್ರಮಿಸುವರು. ಈ ವರ್ಷ ದಿನಾಂಕ: 11/04/2025 ರಿಂದ 20/04/2025ರ ವರೆಗೆ 10 ದಿನಗಳ ಶಿಬಿರದಲ್ಲಿ ಉಚಿತ ಊಟ, ವಸತಿ ಸೌಕರ್ಯ ಏರ್ಪಡಿಸಲಾಗಿದೆ. ಹೆಚ್ಚಿನ ಮಾಹಿತಿಗೆ ಸಂಪರ್ಕಿಸಿ: ಕವಿತಾ ಅತ್ತಿಮಬ್ಬೆ ವಿದ್ಯಾಮಂದಿರ, ಚಿಕ್ಕಪೇಟೆ, ತುಮಕೂರು. ಮೊ. 8618408638