Mon, May 5, 2025

Mon, May 5, 2025


ಮೈಸೂರು: ಬೇಸಿಗೆ ಧಾರ್ಮಿಕ ಶಿಬಿರ


Logo

Published Date: 31-Mar-2025

ಮೈಸೂರು ಜಿಲ್ಲೆ, ಸರಗೂರು ತಾಲೂಕಿನ ಶ್ರೀಕ್ಷೇತ್ರ ಕನಕಗಿರಿ, ದಿಗಂಬರ ಜೈನ ಮಠದ ಪೀಠಾಧ್ಯಕ್ಷರಾದ ಪ.ಪೂಜ್ಯ ಸ್ವಸ್ತಿಶ್ರೀ ಭುವನಕೀರ್ತಿ ಭಟ್ಟಾರಕ ಪಟ್ಟಾಚಾರ್ಯವರ್ಯ ಮಹಾಸ್ವಾಮೀಜಿಯವರ ಆಶೀರ್ವಾದ, ಪ್ರೇರಣೆ ಹಾಗೂ ಮಾರ್ಗದರ್ಶನದಲ್ಲಿ, ಭಾರತೀಯ ಜೈನ್ ಮಿಲನ್, ಮೈಸೂರು ವಿಭಾಗದ ನಿರ್ದೇಶಕರಾದ ಸರಗೂರಿನ ಎಸ್‌. ಎಸ್. ಸೋಮಪ್ರಭರವರು, ಅವರ ಸ್ವಗೃಹ "ಕನಕಾದ್ರಿ" ಯಲ್ಲಿ ಹಿಂದಿನ ವರ್ಷಗಳಂತೆ ಯಥಾಪ್ರಕಾರವಾಗಿ ಮಕ್ಕಳಿಗೆ ಬೇಸಿಗೆ ಧಾರ್ಮಿಕ ಶಿಬಿರವನ್ನು ಆಯೋಜಿಸಿದ್ದಾರೆ. ಬೇಸಿಗೆ ರಜೆಯ ಸಂದರ್ಭದಲ್ಲಿ ಮಕ್ಕಳು ಉತ್ತಮ ಸಂಸ್ಕಾರ ಪಡೆಯಲು ಈ ಧಾರ್ಮಿಕ ಶಿಬಿರ ಅತ್ಯಂತ ಉಪಯುಕ್ತವಾಗಿದೆ. ದಿ:01-04-2025 ರ ಮಂಗಳವಾರದಿಂದ 8.ದಿನಗಳ ಕಾಲ ಈ ಶಿಬಿರ ನಡೆಯಲಿದೆ. ಈ ಶಿಬಿರದಲ್ಲಿ ಅನುಭವಿ ಹಾಗೂ ಪ್ರಬುದ್ಧ ವಿದ್ವಾಂಸರು, ಉಪನ್ಯಾಸಕರುಗಳು, ಪಂಡಿತರುಗಳಿಂದ ಮಕ್ಕಳ ಅಭಿರುಚಿಗೆ ತಕ್ಕಂತೆ, ಅತ್ಯಂತ ಸರಳವಾಗಿ ಹಾಗೂ ಆಕರ್ಷಣೀಯವಾಗಿ ಧಾರ್ಮಿಕ ಪಾಠ ಪ್ರವಚನಗಳ ಜೊತೆಗೆ ಮನರಂಜನಾತ್ಮಕ ಹಾಗೂ ಭಕ್ತಿರಸ ಪ್ರಧಾನವಾದ ಭಕಿಗೀತೆಗಳು, ರೂಪಕಗಳು, ಕಥೆಗಳು, ಇತ್ಯಾದಿ ಜ್ಞಾನವರ್ಧನೆಯ ಪೂರಕ ಅಂಶಗಳು ಸಂಪನ್ಮೂಲ ವ್ಯಕ್ತಿಗಳಿಂದ ಕಲಿಕೆಯಾಗಲಿದೆ. ಶಿಬಿರದ ಉದ್ಘಾಟನೆ ದಿ:: 01-04-2025ರ ಮಂಗಳವಾರ ಬೆಳಿಗ್ಗೆ 9-30 ಕ್ಕೆ ಶುಭಾಶೀರ್ವಾದ, ಮಾರ್ಗದರ್ಶನ: ಸ್ವಸ್ತಿಶ್ರೀ ಭುವನಕೀರ್ತಿ ಭಟ್ಟಾರಕ ಮಹಾಸ್ವಾಮೀಜಿಯವರು ಶ್ರೀಕ್ಷೇತ್ರ ಕನಕಗಿರಿ. ಗೌರವ ಉಪಸ್ಥಿತಿ : ಶ್ರೀ ಬಾಹುಬಲಿ ಬಯ್ಯಾಜಿ ತ್ಯಾಗಿಗಳು/ಬಾಲ ಬ್ರಹ್ಮಚಾರಿಗಳು,ಆಚಾರ್ಯಶ್ರೀ 108 ವಿದ್ಯಾಸಾಗರ ಮಹಾರಾಜರ ಶಿಷ್ಯರು, 5ನೇ ಪ್ರತಿಮಾಧಾರಿಗಳು. ಮುಖ್ಯ ಅತಿಥಿಗಳು: ಶೀಲಾ ಅನಂತರಾಜ್,ಮೈಸೂರು. ಗೌರವ ಉಪಾಧ್ಯಕ್ಷರು, ಭಾರತೀಯ ಜೈನ್ ಮಿಲನ್, ಕರ್ನಾಟಕ ರಾಜ್ಯ. ಬ್ರಹ್ಮದೇವಯ್ಯ ಜೈನ ಸಮಾಜದ ಹಿರಿಯ ಮುಖಂಡರು ಸರಗೂರು. ಪ್ರಥಮ ದಿನದ ಬೆಳಗ್ಗೆ ಅವಧಿ: ಪಾಠ ಪ್ರವಚನಗಳ ಬೋಧನೆ: ಮೈಸೂರು ವಿಶ್ವವಿದ್ಯಾನಿಲಯದ ಜೈನ ಶಾಸ್ತ್ರ ಮತ್ತು ಪ್ರಾಕೃತ ವಿಭಾಗದ ಉಪನ್ಯಾಸಕರಾದ ಡಾ. ಅರುಣಾಪ್ರಕಾಶ್ ರವರು ನಡೆಸಿಕೊಡಲಿದ್ದಾರೆ. ಮಧ್ಯಾಹ್ನದ ಅವಧಿ: ಶ್ರೀ ಬಾಹುಬಲಿ ಬಯ್ಯಾಜಿ ರವರಿಂದ, 5.ನೇ ತರಗತಿಯಿಂದ ಪಿ.ಯೂ.ಸಿ ತನಕ ಓದುತ್ತಿರುವ ವಿದ್ಯಾರ್ಥಿಗಳು ಈ ಶಿಬಿರದಲ್ಲಿ ಭಾಗವಹಿಸಬಹುದಾಗಿದೆ. ಶಿಬಿರ ಪ್ರತಿದಿನ ಬೆಳಿಗ್ಗೆ10-00 ಗಂಟೆಗೆ ಪ್ರಾರಂಭವಾಗಿ ಸಂಜೆ 4-00 ಗಂಟೆಗೆ ಮುಕ್ತಾಯವಾಗುತ್ತದೆ. ಮಕ್ಕಳಿಗೆ ಲೇಖನ ಸಾಮಗ್ರಿಗಳ ಜೊತೆಗೆ ಬಹುಮಾನಗಳನ್ನು ನೀಡಲಾಗುತ್ತದೆ. ಪಾಲಕರು/ಪೋಷಕರು ಮಕ್ಕಳನ್ನು ಬೆಳಿಗ್ಗೆ 9-30 ಗಂಟೆಗೆ ಶಿಬಿರಕ್ಕೆ ಕರೆತಂದು ಬಿಟ್ಟು, ಸಂಜೆ 4-00 ಗಂಟೆ ನಂತರ ಕರೆದುಕೊಂಡು ಹೋಗುವ ಜವಾಬ್ದಾರಿ ಅವರಿಗೆ ಸೇರಿರುತ್ತದೆ. ಶಿಬಿರದಲ್ಲಿ ಮಕ್ಕಳಿಗೆ ಬೆಳಿಗ್ಗೆ 11-00 ಗಂಟೆಗೆ ಕಾಫಿ/ ಟೀ/ ಬಿಸ್ಕತ್ತು, ಮಧ್ಯಾಹ್ನ ಊಟದ ವ್ಯವಸ್ಥೆ, ಸಂಜೆ ಸ್ನಾಕ್ಸ್ ವ್ಯವಸ್ಥೆ ಮಾಡಲಾಗಿದೆ. ಸರಗೂರು ಹಾಗೂ ಹೆಚ್.ಡಿ.ಕೋಟೆ ತಾ. ವ್ಯಾಪ್ತಿಯ ಗ್ರಾಮಾಂತರದ ಮಕ್ಕಳುಗಳು ಈ ಸದಾವಕಾಶವನ್ನು ಬಳಸಿಕೊಳ್ಳಬೇಕೆಂದು ಎಸ್‌. ಎಸ್. ಸೋಮಪ್ರಭರವರು ತಿಳಿಸಿರುತ್ತಾರೆ. .ರಜಾ-ಮಜಾ ಜೊತೆಗೆ ಉತ್ತಮ ಸಂಸ್ಕಾರ, ಜ್ಞಾನಾರ್ಜನೆಯ, ಸದಭಿರುಚಿಯ ಬಾಲ್ಯದ ಶಿಕ್ಷಣ ಮಕ್ಕಳ ಪ್ರತಿಭಾ ಅನಾವರಣಕ್ಕೆ ಪೂರಕವಾಗಲಿದೆ ಈ ಧಾರ್ಮಿಕ ಶಿಬಿರದಲ್ಲಿ ಭಾಗವಹಿಸಲು ಹಾಗೂ ಹೆಚ್ಚಿನ ಮಾಹಿತಿಗೆ ಈ ಕೆಳಕಂಡವರನ್ನು ಸಂಪರ್ಕಿಸಲು ಕೋರಿದೆ. ಎಸ್.ಎಸ್. ಸೋಮಪ್ರಭ, ಸರಗೂರು: ಮೊ: 94487 93649 ಸಿ.ಎಸ್. ನಾಗರಾಜು, ಚಕ್ಕೂರು: ಮೊ: 94489 58024 ಜಿ. ಬಿ.ಚಂದ್ರಪ್ರಕಾಶ್, ಗುಜ್ಜಪ್ಪನಹುಂಡಿ: ಮೊ: 99452 59709

Recomendatoion img Recomendatoion img Recomendatoion img Recomendatoion img Recomendatoion img Recomendatoion img Recomendatoion img Recomendatoion img Recomendatoion img Recomendatoion img Recomendatoion img Recomendatoion img Recomendatoion img Recomendatoion img