Sun, May 4, 2025
ಪ್ರವಕ್ತಾ ಜಿನಭಜನಾ ಕಲಿಕಾ ಕೇಂದ್ರದ ಉದ್ಘಾಟನಾ ಸಮಾರಂಭ
ವೇಣೂರು: ಪ್ರವಕ್ತಾ ಜಿನಭಜನಾ ಕಲಿಕಾ ಕೇಂದ್ರದ ಉದ್ಘಾಟನಾ ಸಮಾರಂಭವು ಯಾತ್ರಿ ನಿವಾಸದಲ್ಲಿ ಮಾ.3೦ರಂದು ನಡೆಯಿತು. ಕಾರ್ಯಕ್ರಮದ ಉದ್ಘಾಟನೆಯನ್ನು ವೇಣೂರಿನ ಶ್ರೀ ದಿಗಂಬರ ಜೈನ ತೀರ್ಥಕ್ಷೇತ್ರ ಸಮಿತಿಯ ಕಾರ್ಯದರ್ಶಿಯವರಾದ ವಿ. ಪ್ರವೀಣ್ ಕುಮಾರ್ ಇಂದ್ರರವರು ನೆರವೇರಿಸಿ, ಶುಭ ಹಾರೈಸಿದರು. ಮುಖ್ಯ ಅತಿಥಿಗಳಾಗಿ ಬ್ರಾಹ್ಮೀ ಜೈನ ಮಹಿಳಾ ಸಂಘದ ಸ್ಥಾಪಕಾಧ್ಯಕ್ಷರಾದ ಪ್ರಸನ್ನ ಆರ್.ಹೆಗ್ಡೆ , ಅಖಿಲ ಕರ್ನಾಟಕ ಜೈನ ಮಹಿಳಾ ಒಕ್ಕೂಟದ ದ.ಕ. ಜಿಲ್ಲಾ ವಿಭಾಗದ ನಿರ್ದೇಶಕಿ ಮತ್ತು ಬ್ರಾಹ್ಮೀ ಜೈನ ಮಹಿಳಾ ಸಂಘದ ಅಧ್ಯಕ್ಷರು ಆದ ಸರೋಜಾ ಗುಣಪಾಲ್ ಜೈನ್ ಅಗಮಿಸಿ, ಶುಭ ಹಾರೈಸಿದರು. ಸಂಗೀತಾ ಶಿಕ್ಷಕರಾದ ಮೂಡುಬಿದಿರೆಯ ಭಗೀರಥ ಮಣಕೋಣ್ ರವರು ಸಂಗೀತ ಕಲಿಕೆಯ ಬಗ್ಗೆ ಮಾಹಿತಿ ನೀಡಿದರು. ನಂತರ ಸುಮಧುರ ಗಾಯನವನ್ನು ಪ್ರಸ್ತುತ ಪಡಿಸಿದರು. ವೇದಿಕೆಯಲ್ಲಿ ಸುನೀತಾ ಎನ್.ಸಿ.ಬಲ್ಲಾಳ್ ಉಪಸ್ಥಿತರಿದ್ದರು. ಸುನೀತಾ ಎನ್.ಸಿ. ಬಲ್ಲಾಳ್, ಸುಜಯಭರತ್, ದೀಪಶ್ರಿ ಪ್ರಾರ್ಥಿಸಿದರು. ಚಂದ್ರಪ್ರಭ ಜೈನ್ ರವರು ಸ್ವಾಗತಿಸಿ, ವಂದಿಸಿ, ಕಾರ್ಯಕ್ರಮವನ್ನು ನಿರೂಪಿಸಿದರು. ಅತೀ ಹೆಚ್ಚಿನ ಸಂಖ್ಯೆಯಲ್ಲಿ ಸಮಾಜದ ಶ್ರಾವಕ- ಶ್ರಾವಕಿಯರು , ಮಕ್ಕಳು ಭಾಗವಹಿಸಿದ್ದರು. .ಕಾರ್ಯಕ್ರಮವು ಶಾಂತಿ ಮಂತ್ರದೊಂದಿಗೆ ಮುಕ್ತಾಯವಾಯಿತು.