Sun, May 4, 2025
ನೆಲ್ಲಿಕಾರು ಮಹಾರಥಯಾತ್ರಾ ಮಹೋತ್ಸವ
ಮೂಡುಬಿದಿರೆ: ಅತಿಶಯ ಶ್ರೀ ಕ್ಷೇತ್ರ ನೆಲ್ಲಿಕಾರಿನಲ್ಲಿ ಪ್ರತೀ ವರ್ಷದಂತೆ ಈ ವರ್ಷವೂ ಭಗವಾನ್ ೧೦೦೮ ಶ್ರೀ ಅನಂತನಾಥ ಸ್ವಾಮಿ ಮತ್ತು ಶ್ರೀ ಬ್ರಹ್ಮಯಕ್ಷ ದೇವರ ಮಹಾರಥಯಾತ್ರಾ ಮಹೋತ್ಸವವು 30-03-2025ನೇ ಆದಿತ್ಯವಾರ ಮೊದಲ್ಗೊಂಡು ದಿನಾಂಕ 05-04-2025ನೇ ಶನಿವಾರ ಪರ್ಯಂತ ಜರಗಲಿರುವುದು. ದಿನಾಂಕ 04-04-2025ನೇ ಶುಕ್ರವಾರ ಮಹಾರಥಯಾತ್ರಾ ಮಹೋತ್ಸವವು ಕಾರ್ಕಳ ದಾನಶಾಲೆ ಶ್ರೀ ಜೈನ ಮಠದ ಪರಮಪೂಜ್ಯ ರಾಜಗುರು ಧ್ಯಾನಯೋಗಿ ಸ್ವಸ್ತಿಶ್ರೀ ಲಲಿತಕೀರ್ತಿ ಭಟ್ಟಾರಕ ಪಟ್ಟಾಚಾರ್ಯವರ್ಯ ಮಹಾಸ್ವಾಮೀಜಿಯವರ ದಿವ್ಯ ಉಪಸ್ಥಿತಿಯಲ್ಲಿ ಬೆಳಿಗ್ಗೆ ಗಂಟೆ 8-15ರಿಂದ ಭಗವಾನ್ ಶ್ರೀ ಅನಂತನಾಥ ಸ್ವಾಮಿಗೆ ಪಂಚಾಮೃತ ಅಭಿಷೇಕ, ಭಗವಾನ್ ಶ್ರೀ ಚಂದ್ರನಾಥ ಸ್ವಾಮಿಗೆ ಕ್ಷೀರಾಭಿಷೇಕ, ಶ್ರೀ ಬ್ರಹ್ಮದೇವರಿಗೆ ಪಂಚಾಮೃತ ಅಭಿಷೇಕ. ಶ್ರೀಬಲಿ ವಿಧಾನ, ರಥ ಸಂಪ್ರೋಕ್ಷಣೆ, ಲಕ್ಷ ಹೂವಿನ ಪೂಜೆ, ರಥಾರೋಹಣಕ್ಕೆ ಪ್ರಸಾದ ಬೇಡಿಕೆ. ಮಧ್ಯಾಹ್ನ ಗಂಟೆ 12-00ಕ್ಕೆ ಮಹಾನೈವೇದ್ಯ ಪೂಜೆ, ಮಹಾಮಂಗಳಾರತಿ, ಶ್ರೀ ಸರ್ವಾಹ್ಣಯಕ್ಷರ ಶ್ರೀವಿಹಾರ, ಗ್ರಾಮ ಬಲಿ ಮಧ್ಯಾಹ್ನ ಗಂಟೆ 12-35ಕ್ಕೆ ಶ್ರೀ ಬ್ರಹ್ಮಯಕ್ಷ ದೇವರ ದರ್ಶನ ಪಾತ್ರಿಯೊಂದಿಗೆ ಭಗವಾನ್ ಶ್ರೀ ಅನಂತನಾಥ ಸ್ವಾಮಿಯ ರಥಾರೋಹಣ. ನಂತರ ಸಂಘಸಂತರ್ಪಣೆ ಹಾಗೂ ಸಾರ್ವಜನಿಕ ಅನ್ನ ಸಂತರ್ಪಣೆ. ರಾತ್ರಿ ಗಂಟೆ 7-00ಕ್ಕೆ ಸಮವಸರಣ ಪೂಜೆ. ರಾತ್ರಿ ಗಂಟೆ 10-00ಕ್ಕೆ ರಥೋತ್ಸವ. ನಂತರ ಭಗವಾನ್ ಶ್ರೀ ಅನಂತನಾಥ ಸ್ವಾಮಿಗೆ ೧೦೮ ಕಲಶಗಳಿಂದ ಮಹಾಭಿಷೇಕ, ಉತ್ಸವ. ದಿನಾಂಕ 04-04-2025ನೇ ಶುಕ್ರವಾರ ಸಂಗೀತ ಪೂಜಾಷ್ಟಕ ಶರ್ಮಿಳಾ ಜಿನೇಶ್ ಹಾಸನ ಮತ್ತು ಬಳಗದವರಿಂದ ದಿನಾಂಕ 04-04-2025ನೇ ಶುಕ್ರವಾರ ರಾತ್ರಿ ಗಂಟೆ 11.00ರಿಂದ ತುಳು ತೆಲಿಕೆದ ನಾಟಕ ಕಾಪಿಕಾಡ್ ವಾಮಂಜೂರು ಸಾಯಿ ಅಭಿನಯದ ಚಾಪರ್ಕ ಕಲಾವಿದರಿಂದ ತೆಲಿಕೆದ ಬೊಳ್ಳಿ ಡಾ|| ದೇವದಾಸ್ ಕಾಪಿಕಾಡ್‌ರವರ ವಿನೂತನ ಶೈಲಿಯ ತುಳು ಹಾಸ್ಯಮಯ ನಾಟಕ ಏರ್ಲಾ ಗ್ಯಾರಂಟಿ ಅತ್ತ್.