Sun, May 11, 2025
ರಾಜಧಾನಿ ದೆಹಲಿಯಲ್ಲಿ ಸನ್ಮಾನ
ಬೆಳಗಾವಿ: ಇತ್ತೀಚೆಗೆ ಗ್ರೀನ್ ಪಾರ್ಕ್ ದಿಲ್ಲಿಯಲ್ಲಿ ಆಚಾರ್ಯ ಶ್ರೀ ಸೌಭಾಗ್ಯ ಸಾಗರಜಿ ನೇತೃತ್ವದಲ್ಲಿ ಜರುಗಿದ ಜೈನ ಜೋತಿಷಾಚಾರ್ಯರ ಸಮ್ಮೇಳನದಲ್ಲಿ ಭಾರತದ ವಿವಿಧ ರಾಜ್ಯಗಳಿಂದ ಆಗಮಿಸಿದ್ದ ಐವತ್ತಕ್ಕೂ ಹೆಚ್ಚು ಜೋತಿಷಿಗಳು ಭಾಗವಹಿಸಿ, ತಮ್ಮ ಪ್ರಬಂಧಗಳನ್ನು ಮಂಡಿಸಿದರು. ಕರ್ನಾಟಕದ-ಬೆಳಗಾವಿಯಿಂದ ಮುಹೂರ್ತ ಸಾಧನೆ ವಿಷಯದ ಪ್ರಬಂಧ ಮಂಡಿಸಿದ ಡಾ. ಪ್ರತಿಷ್ಠಾಚಾರ್ಯ ಶಾಂತಿನಾಥ ಪಾರ್ಶ್ವನಾಥ ಉಪಾಧ್ಯೆ ಇವರು ಎಲ್ಲರ ಗಮನಸೆಳೆದರು. ಕನ್ನಡದಲ್ಲಿ ಮಾಡಿದ ಮಂಗಲಾಚರಣೆಗೆ ಎಲ್ಲರೂ ದನಿಗೂಡಿಸಿದ್ದು ವಿಶೇಷ. ಶ್ವೇತಪಿಚ್ಛಾಚಾರ್ಯ ವಿದ್ಯಾನಂದಜಿ ತಪೋಭೂಮಿ ಕುಂದ ಕುಂದ ಭಾರತೀಯ ಸಭಾಗೃಹದಲ್ಲಿ ಪಟ್ಟಾಚಾರ್ಯ ಶ್ರೀ ಶೃತಸಾಗರಜಿ ಮಹಾರಾಜರ ಕುಶಲ ಮಾರ್ಗದರ್ಶನದಲ್ಲಿ ನಡೆದ ಸಮ್ಮಾನ ಕಾರ್ಯಕ್ರಮದಲ್ಲಿ ಪಂ. ಶಾಂತಿನಾಥ ಅವರನ್ನು ವಿಶೇಷ ಸಾಧನೆಗಾಗಿ ಶೃತಪುರೋಹಿತ ಬಿರುದಿನೊಂದಿಗೆ ಸನ್ಮಾನಿಸಲಾಯಿತು. ಸಂಸ್ಥೆಯ ಅಧ್ಯಕ್ಷರು ರವೀಂದ್ರ ಗುರೂಜಿ ಮತ್ತು ಪದಾಧಿಕಾರಿಗಳು ಮುತುವರ್ಜಿ ವಹಿಸಿ ಕಾರ್ಯಕ್ರಮ ಆಯೋಜಿಸಿದ್ದರು. ಬಳಿಕ ಎರಡೂ ದಿವಸ ದೆಹಲಿಯ ಪ್ರಮುಖ ಪರ್ಯಟಣ ಸ್ಥಳಗಳ ವಾಸ್ತು ವೀಕ್ಷಣೆಯ ವ್ಯವಸ್ಥೆಯನ್ನು ಮಾಡಲಾಗಿತ್ತು.