Tue, May 13, 2025

Tue, May 13, 2025


ಕುಪ್ಪೆಪದವು ಜೈನ್ ಮಿಲನ್-ಮಾಸಿಕ ಸಭೆ


Logo

Published Date: 25-Mar-2025

ಭಾರತೀಯ ಜೈನ್ ಮಿಲನ್ ನ ಕುಪ್ಪೆಪದವು ಶಾಖೆ -ಅನಂತಪಾರ್ಶ್ವ ಜೈನ್ ಮಿಲನ್ ನ ಮಾಸಿಕ ಸಭೆಯು ಇರುವೈಲ್ ಬಳಿಯ ಕನ್ನೆಪದವು ಗ್ರಾಮದ ಬಾವದಬೈಲುವಿನ ಕಲ್ಪವೃಕ್ಷ ಮನೆಯಲ್ಲಿ ದಿನಾಂಕ 23/3/2025 ನೇ ರವಿವಾರ ನಡೆಯಿತು. ಮುಖ್ಯ ಅತಿಥಿಯಾದ ಪ್ರೊ.ಅಕ್ಷಯ ಕುಮಾರ್ ರವರು ಜೈನ್ ಧರ್ಮದ ಕರ್ಮ ಸಿದ್ಧಾಂತದ ಮೋಹನೀಯ ಕರ್ಮದ ಬಗ್ಗೆ ವಿವರಿಸುತ್ತಾ "ಸಾಮ್ರಾಟ ಅಲೆಕ್ಸಾಂಡರ್ ಕೂಡಾ ಭಾರತಕ್ಕೆ ದಂಡೆತ್ತಿ ಸಂದರ್ಭದಲ್ಲಿ ಜೈನ ಧರ್ಮದ ತತ್ವ ಸಿದ್ಧಾಂತದಲ್ಲಿ ಆಸಕ್ತಿಯನ್ನು ವ್ಯಕ್ತಪಡಿಸಿದ್ದ ಮತ್ತು ಜೈನ ವಿದ್ವಾಂಸರನ್ನು ಗ್ರೀಕ್ ದೇಶಕ್ಕೆ ಕರೆದುಕೊಂಡು ಹೋಗಲು ಬಯಸಿದ್ದ" ಎಂದು ಇತಿಹಾಸದ ಪುಟಗಳಿಂದ ತಿಳಿದು ಬರುತ್ತದೆ ಎಂದರು. ಸ್ಥಾಪಕಾಧ್ಯಕ್ಷರಾದ ಭೋಜರಾಜ್ ಜೈನ್ ರವರು ದೈವೀ ಶಕ್ತಿ ಬಗ್ಗೆ ಮಾತನಾಡುತ್ತಾ "ಪಂಚ ನಮಸ್ಕಾರ" ನಮೋಕಾರ ಮಂತ್ರದ ಮಹತ್ವದ ಬಗ್ಗೆ ವಿವರಿಸಿದರು. ಸಭೆಯ ಅಧ್ಯಕ್ಷತೆಯನ್ನು ವಹಿಸಿದ್ದ ಸ್ವರ್ಣಲತಾ ಅಜಿತ್ ರವರು ಮುಂದಿನ ಮಿಲನ್ ಕಾರ್ಯಚಟುವಟಿಕೆಗಳ ವಿವರ ನೀಡಿದರು. ಪಂಚ ನಮಸ್ಕಾರ ಮಂತ್ರದೊಂದಿಗೆ ಕಾರ್ಯಕ್ರಮ ಪ್ರಾರಂಭಗೊಂಡಿತು. ಅತಿಥೇಯರ ಪರವಾಗಿ ಚರಣ್ ಅತಿಥಿಗಳನ್ನು ಸ್ವಾಗತಿಸಿ, ಕಾರ್ಯಕ್ರಮ ನಿರ್ವಹಿಸಿದರು. ಕಾರ್ಯದರ್ಶಿ ವರದಿ ಮಂಡಿಸಿದರು. ನಂತರ ಪ್ರಸ್ತುತ ತಿಂಗಳಲ್ಲಿ ಹುಟ್ಟುಹಬ್ಬ ಆಚರಿಸಿಕೊಂಡವರನ್ನು ಅಭಿನಂದಿಸಲಾಯಿತು. ವೇದಿಕೆಯಲ್ಲಿ ಹಿರಿಯ ಮಾರ್ಗದರ್ಶಕರಾದ ಪ್ರವೀಣ್ ಅಗರಿ, ಆತಿಥೇಯ ಭರತ್ ಕುಮಾರ್ ದಂಪತಿಗಳು, ಕೋಶಾಧಿಕಾರಿ ವನಿತಾ ಭೋಜರಾಜ್, ಉಪಸ್ಥಿತರಿದ್ದರು. ವಕೀಲ ಅತಿಶಯ ಜೈನ್ ಧನ್ಯವಾದ ಸಮರ್ಪಿಸಿದರು. ಕಾರ್ಯಕ್ರಮದ ಕೊನೆಯಲ್ಲಿ ಮಳಲಿ ಉದಯ ಕುಮಾರ್ ರವರು ಶಾಂತಿಮಂತ್ರ ಪಠಿಸಿದರು.

Recomendatoion img Recomendatoion img Recomendatoion img Recomendatoion img Recomendatoion img Recomendatoion img Recomendatoion img Recomendatoion img Recomendatoion img Recomendatoion img Recomendatoion img Recomendatoion img Recomendatoion img Recomendatoion img Recomendatoion img