Sun, May 11, 2025
ಸೌಟ್ಸ್ - ಗೈಡ್ಸ್ ಬೇಸಿಗೆ ಶಿಬಿರದ ಉದ್ಘಾಟನಾ ಸಮಾರಂಭ
ದಿಗಂಬರ ಜೈನ ವಿದ್ಯಾ ವರ್ಧಕ ಸಂಘ (ರಿ) ಮೂಡಬಿದ್ರೆ ಇದರ ಆಡಳಿತಕ್ಕೆ ಒಳಪಟ್ಟ ದಿಗಂಬರ ಜೈನ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆ ಮತ್ತು ದಿಗಂಬರ ಜೈನ ಆಂಗ್ಲ ಮಾಧ್ಯಮ ಶಾಲೆಯ ಜಂಟಿ ಆಶ್ರಯದಲ್ಲಿ 2025ನೇ ಸಾಲಿನ ಸ್ಕೌಟ್-ಗೈಡ್ಸ್ ಮತ್ತು ಕಬ್ಸ್- ಬುಲ್ ಬುಲ್ಸ್ ಐದು ದಿನಗಳ ಬೇಸಿಗೆ ಶಿಬಿರವು ದಿನಾಂಕ 24/03/25 ರಂದು ದಿಗಂಬರ ಜೈನ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಆರಂಭಗೊಂಡಿತು. ಶಿಬಿರದ ಉದ್ಘಾಟನೆಯನ್ನು ಶಾಲಾ ತಾಯಂದಿರ ಸಮಿತಿಯ ಅಧ್ಯಕ್ಷರಾದ ಆರತಿ ಜೈನ್ ರವರು ದೀಪ ಬೆಳಗಿಸುವುದರ ಮೂಲಕ ನೆರವೇರಿಸಿದರು. ಹಾಗೂ ಎಸ್ ಡಿ ಎಂ ಸಿ ಅಧ್ಯಕ್ಷರಾದ ಪವನ್ ಕುಮಾರ್ ಇವರು ಧ್ವಜಾರೋಹಣ ಮಾಡುವುದರ ಮೂಲಕ ಶಿಬಿರಕ್ಕೆ ಚಾಲನೆಯನ್ನು ನೀಡಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಶಾಲಾ ಮುಖ್ಯೋಪಾಧ್ಯಾಯರಾದ ಶಶಿಕಾಂತ್ ವೈ ಜೈನ್ ಇವರು ತಮ್ಮ ಅಧ್ಯಕ್ಷೀಯ ಭಾಷಣದಲ್ಲಿ ಶಿಬಿರದ ಯಶಸ್ಸಿಗೆ ಸಂಪೂರ್ಣ ಸಹಕಾರ ನೀಡುವುದೆಂದು ತಿಳಿಸಿದರು. ದಿಗಂಬರ ಜೈನ ಆಂಗ್ಲ ಮಾಧ್ಯಮ ಶಾಲೆಯ ಮುಖ್ಯೋಪಾಧ್ಯಾಯಿನಿ ವೀಣಾ ಪ್ರಮೋದ್ ಕಾರ್ಯಕ್ರಮಕ್ಕೆ ಶುಭ ಹಾರೈಸಿದರು. ಕಾರ್ಯಕ್ರಮದಲ್ಲಿ ಗೈಡ್ ಕ್ಯಾಪ್ಟನ್ ಮಂಜುಳಾ ಜೈನ್, ಬುಲ್ ಬುಲ್ ಕ್ಯಾಪ್ಟನ್ ಸಾಕ್ಷಿ ಉಪಸ್ಥಿತರಿದ್ದರು. ಸ್ಕೌಟ್ ಮಾಸ್ಟರ್ ಪದ್ಮಶ್ರೀ ಸ್ವಾಗತಿಸಿದರು. ಗೈಡ್ಸ್ ಕ್ಯಾಪ್ಟನ್ ಜಯಲಕ್ಷ್ಮಿ ಕಾರ‍್ಯಕ್ರಮ ನಿರೂಪಿಸಿದರು. ಶಿಬಿರದಲ್ಲಿ ಸುಮಾರು 100 ಕ್ಕೂ ಹೆಚ್ಚು ಮಕ್ಕಳು ಪಾಲ್ಗೊಂಡಿದ್ದರು.