Wed, May 14, 2025
ಕವನ ಸಂಕಲನ ಮಣಿ ಮುಕುಟ ಬಿಡುಗಡೆ
ದಿನಾಂಕ 23/3/2025 ಆದಿತ್ಯವಾರದಂದು ನಡೆದ ಜೈನ್ ಮಿಲನ್ ಕಾರ್ಕಳ, ಇದರ ಮಾಸಿಕ ಸಭೆಯಲ್ಲಿ ಮಾಲತಿ ವಸಂತರಾಜ್‌ರವರ ಕವನ ಸಂಕಲನ ಮಣಿ ಮುಕುಟವನ್ನು ಎಸ್.ವಿ.ಟಿ.ಪದವಿ ಕಾಲೇಜಿನ ನಿವೃತ್ತ ಪ್ರಾಂಶುಪಾಲೆಯಾದ ಮಿತ್ರಪ್ರಭಾ ಹೆಗ್ಡೆಯವರು ಲೋಕಾರ್ಪಣೆ ಮಾಡಿದರು.ಜೈನ್ ಮಿಲನಿನ ನಿರ್ದೇಶಕರು, ಅಧ್ಯಕ್ಷರು,ಕಾರ್ಯದರ್ಶಿಯವರು, ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ನಿರಂಜನ ಜೈನ್, ಕುದ್ಯಾಡಿ, ನೇರೆಂಕಿ ಪಾರ್ಶ್ವನಾಥ ಜೈನ್, ವಸಂತರಾಜ್ ಜೈನ್ ರವರು ಉಪಸ್ಥಿತರಿದ್ದರು. ಶ್ರೀವರ್ಮ ಜೈನ್, ಯುವರಾಜ್ ಆರಿಗರವರು ಉಪಸ್ಥಿತರಿದ್ದರು.