Wed, May 14, 2025

Wed, May 14, 2025


ಪೆನಕೊಂಡ ಶ್ರೀ ಪಚ್ಚೆ ಪ್ರತಿಷ್ಠಾನದ ವತಿಯಿಂದ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ಮತ್ತು ಪ್ರತಿಭಾ ಪುರಸ್ಕಾರ


Logo

Published Date: 23-Mar-2025

ಪೆನಕೊಂಡ ಶ್ರೀ ಪಚ್ಚೆ ಪ್ರತಿಷ್ಠಾನದ ವತಿಯಿಂದ ಪ್ರತಿವರ್ಷ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ಮತ್ತು ಪ್ರತಿಭಾ ಪುರಸ್ಕಾರವನ್ನು ಮಾಡಿಕೊಂಡು ಬರುತ್ತಿದೆ. ಕಳೆದ 10 ವರ್ಷಗಳಿಂದ ಈ ವಿದ್ಯಾರ್ಥಿ ವೇತನವನ್ನು ನೀಡಲಾಗುತ್ತಿದೆ. 11ನೆಯ ವರ್ಷದಲ್ಲಿ ಕೀರ್ತಿಶೇಷ‌ ಆರ್.‌ ಜೆ. ಅನಂತರಾಜಯ್ಯ ಸಂಸ್ಕರಣೆ ವಿದ್ಯಾರ್ಥಿ ವೇತನ ವಿತರಣಾ ಸಮಾರಂಭವನ್ನು ದಿನಾಂಕ 09-03-2025 ನೇ ಬುಧವಾರ ಮಧ್ಯಾಹ್ನ ತುಮಕೂರಿನ "ಸ್ನೇಹ ಸಂಗಮ ಕನ್ವೆನ್‌ಷನ್ ಹಾಲ್", ಶಿರಾ ರಸ್ತೆ, ತುಮಕೂರು ಇಲ್ಲಿ ಏರ್ಪಡಿಸಿ ವಿತರಣೆ ಮಾಡಲಾಯಿತು. ವೇದಿಕೆಯ ಗಣ್ಯರೆಲ್ಲಾ ಕಾರ್ಯಕ್ರಮವನ್ನು ಜ್ಯೋತಿ ಬೆಳಗುವುದರ ಮುಖಾಂತರ ಹಾಗೂ ಪಚ್ಚೆ ಪಾರ್ಶ್ವನಾಥ ಸ್ವಾಮಿ ಮತ್ತು ಆರ್.ಜೆ. ಅನಂತರಾಜಯ್ಯನವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡುವುದರ ಮುಖಾಂತರ ಉದ್ಘಾಟನೆ ಮಾಡಿದರು. ಕಾರ್ಯಕ್ರಮವನ್ನು ಉದ್ಘಾಟನೆ ಮಾಡಿದ ಪೆನುಗೊಂಡ ಪಚ್ಚೆ ಪಾರ್ಶ್ವನಾಥಸ್ವಾಮಿ ದೇವಸ್ಥಾನ ಟ್ರಸ್ಟ್ ಅಧ್ಯಕ್ಷರಾದ ಆರ್.ಪಿ. ಚಂದ್ರಕೀರ್ತಿರವರು ಮಾತನಾಡುತ್ತಾ ವಿದ್ಯಾರ್ಥಿ ವೇತನ ಪಡೆದ ವಿದ್ಯಾರ್ಥಿಗಳು ಈ ಟ್ರಸ್ಟ್‌ನ ಕೆಲಸವನ್ನು ಗಮನಿಸಿರುವುದರಿಂದ ನೀವು ಗಳಿಸುವಂತಾದಾಗ ಅದರಲ್ಲಿ ಒಮ್ಮೆಯಾದರೂ ಈ ಟ್ರಸ್ಟ್‌ಗೆ ಸಹಾಯ ಮಾಡಿದಲ್ಲಿ ಇನ್ನು ಹೆಚ್ಚು ವಿದ್ಯಾರ್ಥಿಗಳಿಗೆ ಸಹಾಯ ಮಾಡಲು ಅನುಕೂಲವಾಗುತ್ತದೆ ಎಂದು ತಿಳಿಸಿದರು. ವಿಶೇಷ ಆಹ್ವಾನಿತರಾಗಿ ಆಗಮಿಸಿದ್ದ ವಿದ್ವಾಂಸರು ವಿದ್ಯೋದಯ ಸಂಸ್ಥೆಯ ಕಾರ್ಯನಿರ್ವಾಹಕ ಅಧಿಕಾರಿಗಳು ಆದ ಪ್ರೊ. ಕೆ. ಚಂದ್ರಣ್ಣನವರು ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತಾನಾಡುತ್ತಾ ಅನಂತರಾಜಯ್ಯನವರು ವ್ಯಾಪಾರ ಧರ್ಮ, ಸಹಾಯ ಧರ್ಮ ಇವರೆಡನ್ನು ಮೈಗೂಡಿಸಿಕೊಂಡು ಇಷ್ಟು ದೊಡ್ಡ ಪ್ರತಿಷ್ಠಾನವನ್ನು ಕಟ್ಟಿ ಬೆಳೆಸಿದರು. ಅವರು ಮಾಡಿದ ಸಂಪಾದನೆಯಲ್ಲಿ ಕಿಂಚಿತ್ ಹಣ ಉಳಿಸಿ ಇವತ್ತು ನಿಮಗೆಲ್ಲಾ ವಿದ್ಯಾರ್ಥಿ ವೇತನವನ್ನು ನೀಡಲು ಕಾರಣ ಕರ್ತರಾಗಿದ್ದಾರೆ. ಅವರ ವೈಯಕ್ತಿಕ ಜೀವನವನ್ನು ಮಾದರಿ ಜೀವನವಾಗಿತ್ತು. ಅವರನ್ನು ಬಲ್ಲ ಎಲ್ಲರೂ ಅವರ ಗುಣಗಳಿಗೆ ತಲೆಬಾಗುತ್ತಿದ್ದರು. ಅಂತಹವರು ಇಂದು ನಮ್ಮ ಮುಂದೆ ದೈಹಿಕವಾಗಿ ಇಲ್ಲ ಮಾನಸಿಕವಾಗಿ ಉಳಿದಿದ್ದಾರೆ. ಅವರ ಆಸೆ ಕೈಗೂಡಬೇಕಾದರೆ ಈ ವಿದ್ಯಾರ್ಥಿ ವೇತನ ಪಡೆದ ವಿದ್ಯಾರ್ಥಿಗಳು ಶ್ರಮವಹಿಸಿ ಅಧ್ಯಯನ ಮಾಡಿ ಒಳ್ಳೆಯ ಪದವಿ ಪಡೆದು ಒಳ್ಳೆಯ ಕೆಲಸವನ್ನು ಪಡೆಯಬೇಕೆಂದು ಈ ಮೂಲಕ ಅವರ ಆತ್ಮಕ್ಕೆ ಶಾಂತಿ ನೀಡಿದಂತಾಗುತ್ತದೆ ಹಾಗೂ ನಿಮ್ಮ ತಂದೆ ತಾಯಿಗಳಿಗೂ ಗೌರವ ಸಿಗುತ್ತದೆ. ಈ ಕೆಲಸವನ್ನು ನೀವು ಮಾಡಬೇಕು ಎಂದು ಕಿವಿಮಾತು ಹೇಳಿದರು. ಆರ್.ಜೆ. ಅನಂತರಾಜಯ್ಯನವರ ಈ ಟ್ರಸ್ಟ್‌ನ ಸದಸ್ಯರುಗಳೆಲ್ಲಾ ಒಬ್ಬೊಬ್ಬರು ಒಂದು ಶಕ್ತಿಯಾಗಿ ಕೆಲಸ ಮಾಡುತ್ತಿದ್ದಾರೆ. ಅವರ ಮಕ್ಕಳಾದ ನಾಗರಾಜು ಮತ್ತು ಪಾರ್ಶ್ವನಾಥ್ ಇವರುಗಳು ಕೂಡ ಆರ್.ಎ. ಸುರೇಶ್ ಕುಮಾರ್‌ರವರ ಜೊತೆ ಸೇರಿ ಟ್ರಸ್ಟ್‌ನ ಕೆಲಸವನ್ನು ಅಚ್ಚುಕಟ್ಟಾಗಿ ಮಾಡಿಕೊಂಡು ಬರುತ್ತಿದ್ದಾರೆ ಅದಕ್ಕೆ ಅವರ ತಾಯಿಯವರಾದ ಸಾದ್ವಿ ಸರೋಜಮ್ಮನವರ ಪೂರ್ಣ ಬೆಂಬಲ ಆಶೀರ್ವಾದವಿದೆ ಎಂದು, ಈ 11 ನೇ ವರ್ಷದಲ್ಲಿ 19 ವಿದ್ಯಾರ್ಥಿನಿಯರು 14 ಹುಡುಗರು ಒಟ್ಟು 33 ವಿದ್ಯಾರ್ಥಿಗಳಿಗೆ ರೂ. 7,20,000-00 ರೂಪಾಯಿಗಳನ್ನು ವಿತರಣೆ ಮಾಡಲಾಯಿತು. ಎ. ಎನ್. ರಾಜೇಂದ್ರಪ್ರಸಾದ್‌ರವರು ಕೀರ್ತಿಶೇಷ ಆರ್.ಜೆ. ಅನಂತರಾಜಯ್ಯನವರ ಸಮಗ್ರ ಜೀವನ ಚರಿತ್ರೆಯನ್ನು ಸಭೆಗೆ ವಿವರವಾಗಿ ಪರಿಚಯ ಮಾಡಿಕೊಟ್ಟರು. ಪ್ರೊ.ಪಿ.ಪಾರ್ಶ್ವನಾಥ್ ಸಪ್ತಗಿರಿ ಇಂಜಿನಿಯರಿಂಗ್ ಕಾಲೇಜಿನ ಗಣಿತ ಶಾಸ್ತ್ರದ ವಿಭಾಗದ ಮುಖ್ಯಸ್ಥರು ಇವರು ಸಭೆಯಲ್ಲಿ ಆಗಮಿಸಿದ ಮಕ್ಕಳಿಗೆ ಹಿತ ನುಡಿಯನ್ನು ತಿಳಿಸಿದರು. ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಖ್ಯಾತ ನೇತ್ರ ತಜ್ಞರಾದ ಡಾ. ಕೆ. ಆರ್. ರಂಗನಾಥ್ ರವರು ಮಕ್ಕಳಿಗೆ ಶ್ರೇಯಸ್ಸು ಬರಲೆಂದು ಹಾಗೂ ಆರ್.ಜೆ. ಅನಂತರಾಜಯ್ಯನವರ ಕುಟುಂಬದವರು ಈ ಕಾರ್ಯಕ್ರಮವನ್ನು ಅನುಚಾನವಾಗಿ ನಡೆಸಿಕೊಂಡು ಬರುತ್ತಿರುವುದು ನಿಮಗೆಲ್ಲಾ ಒಂದು ಬೆಂಬಲವಾಗಿದೆ ಎಂದು ಆಶೀರ್ವಚನ ನೀಡಿದರು. ಜೈನ ಸಮಾಜದ ಹಿರಿಯರಾದ ಶ್ರೇಯಾಂಶ ಕುಮಾರ್‌ರವರು ಮಕ್ಕಳಿಗೆ ಹಿತ ವಚನ ನುಡಿದರು. ಪ್ರೇರಣಾ ಜೈನ್ ರವರು ಪ್ರಾರ್ಥಿಸಿ, ಪೆನಕೊಂಡ ಶ್ರೀ ಪಚ್ಚೆ ಪ್ರತಿಷ್ಠಾನದ ಅಧ್ಯಕ್ಷರಾದ ಆರ್.ಎ. ಸುರೇಶ್‌ ಕುಮಾರ್ ರವರು ಸ್ವಾಗತಿಸಿದರು. ಹಾಗೂ ಇದೇ ಸಂದರ್ಭದಲ್ಲಿ ಪಚ್ಚೆ ಪ್ರತಿಷ್ಠಾನದ ಉದ್ದೇಶ ಮತ್ತು ನಿಯಮಗಳಂತೆ ನಾವು ಪ್ರತಿವರ್ಷ ಈ ವಿದ್ಯಾರ್ಥಿ ವೇತನವನ್ನು ಪುರಸ್ಕರಿಸಿ ಕೊಡುತ್ತಲಿದ್ದೇವೆ. ಇದಕ್ಕೆ ಸಾಕ್ಷಿಭೂತರಾಗಿ ಆಗಮಿಸಿರುವ ಎಲ್ಲರಿಗೂ ಸ್ವಾಗತ ಬಯಸಿದರು. ಅಲ್ಲದೇ ಎಲ್ಲರೂ ನಮ್ಮ ತಂದೆಯವರ ಉದ್ದೇಶವನ್ನು ಈಡೇರಿಸಲು ಸಹಕರಿಸಬೇಕೆಂದು ಸಭೆಯಲ್ಲಿ ವಿನಂತಿಸಿಕೊಂಡರು. ಕಾರ್ಯಕ್ರಮದಲ್ಲಿ ಆರ್.‌ ಎಸ್. ಜ್ವಾಲನಪ್ಪನವರು ವಂದನಾರ್ಪಣೆ ಸಲ್ಲಿಸಿದರು. ಟ್ರಸ್ಟಿಗಳಾದ ಆರ್. ಎ. ಪಾರ್ಶ್ವನಾಥ, ಆರ್. ಎ. ನಾಗಾರಾಜುರವರು ಕಾರ್ಯಕ್ರಮ ನಿರ್ವಹಣೆಯನ್ನು ಮಾಡಿಕೊಟ್ಟರು. ಆರ್.ಎನ್. ಮಹಾವೀರ್ ಮತ್ತು ಆರ್.ಪಿ. ಮೋನಿಕಾರವರು ವೇದಿಕೆಯ ಮೇಲೆ ಉಪಸ್ಥಿತರಿದ್ದರು.

Recomendatoion img Recomendatoion img Recomendatoion img Recomendatoion img Recomendatoion img Recomendatoion img Recomendatoion img Recomendatoion img Recomendatoion img Recomendatoion img Recomendatoion img Recomendatoion img Recomendatoion img Recomendatoion img Recomendatoion img