Thu, May 1, 2025
ಮಹಾವೀರ ತೀರ್ಥಂಕರರ ಬಗ್ಗೆ ಭಾಷಣ ಸ್ಪರ್ಧೆ
ರಾಜ್ಯ ಜೈನ ಜಾಗೃತಿ ಸಂಘ (ರಿ) ಕರ್ನಾಟಕ ಬೆಳಗಾವಿ ಇದರ ವತಿಯಿಂದ ಶ್ರೀ ಭಗವಾನ್ ಮಹಾವೀರ ತೀರ್ಥಂಕರರ 2624ನೇಯ ಜನ್ಮ ಕಲ್ಯಾಣದ ಮಹೋತ್ಸವದ ಅಂಗವಾಗಿ 5 ರಿಂದ 16 ವರ್ಷದೊಳಗಿನ ಮಕ್ಕಳಿಗೆ ಮಹಾವೀರ ತೀರ್ಥಂಕರರ ಬಗ್ಗೆ ಭಾಷಣ ಸ್ಪರ್ಧೆಯನ್ನು ಏರ್ಪಡಿಸಲಾಗಿದೆ. ವಿಷಯ: ಭಗವಾನ್ ಮಹಾವೀರ ತೀರ್ಥಂಕರರ ಜೀವನ ಹಾಗೂ ಧರ್ಮೋಪದೇಶಗಳ ಕುರಿತು. 1) 5 ರಿಂದ 16 ವರ್ಷದೊಳಗಿನ ಮಕ್ಕಳು ಭಾಗವಹಿಸಬಹುದು (ಜೈನ ಧರ್ಮಿಯರು ಮಾತ್ರ) (ಜನನ ಪ್ರಮಾಣ ಪತ್ರ ಕಳುಹಿಸಬೇಕು) 2) ಸದರಿ ಭಾಷಣದ 5 ನಿಮಿಷಗಳ ವಿಡಿಯೋ ಮಾಡಿ ಈ ಕೆಳಗೆ ತಿಳಿಸಿದ ಮೊ: 9916176515 ಹಾಗೂ ಮೊ: 9448644206 ನಂಬರಗಳಿಗೆ ಕಳಿಸಿಕೊಡಬೇಕು 3) ಭಾಷಣದ ವಿಡಿಯೋಗಳನ್ನು ದಿನಾಂಕ 6-04-2025ರೊಳಗಾಗಿ ಕಳಿಸಿಕೊಡಬೇಕು 4) ಸದರಿ ವಿಡಿಯೋಗಳನ್ನು ತಜ್ಞ ವಿದ್ವಾಂಸರು ಹಾಗೂ ಸ್ವಾಮೀಜಿಗಳವರೊಂದಿಗೆ ಪರಿಶೀಲಿಸಿ ನೋಡಿ, ಅದರಲ್ಲಿ ಅತೀ ಉತ್ತಮ ವಿಡಿಯೋ ಮಾಡಿದ ಮಕ್ಕಳ ಭಾಷಣದ ವಿಡಿಯೋಗಳಲ್ಲಿ ಪ್ರಥಮ, ದ್ವಿತೀಯ, ತೃತೀಯ ಎಂದು ಆಯ್ಕೆ ಮಾಡಲಾಗುವುದು. 5) ಸದರಿ ಭಾಷಣದ ಫಲಿತಾಂಶವನ್ನು ದಿನಾಂಕ 10-04-2025 ರಂದು ಪ್ರಕಟಿಸಲಾಗುವುದು 6) ವಿಜೇತರಿಗೆ : ಪ್ರಥಮ ಬಹುಮಾನ ರೂ 1008, ದ್ವಿತೀಯ ಬಹುಮಾನ ರೂ 751, ತೃತೀಯ ಬಹುಮಾನ ರೂ 501ಗಳನ್ನು ನಗದು ರೂಪದಲ್ಲಿ ಕೊಡಲಾಗುವುದು. ವಿಜೇತ ಮಕ್ಕಳು ಅವರ ಬ್ಯಾಂಕಿನ ಅಥವಾ ಅವರ ಪಾಲಕರ ಬ್ಯಾಂಕಿನ ಖಾತೆ ಸಂಖ್ಯೆ ಹಾಗೂ ಐ ಎಫ್ ಎಸ್ ಸಿ ಕೋಡ್ ಹಾಗೂ ಬ್ಯಾಂಕಿನ ಹೆಸರನ್ನು ಮೇಲ್ದಂಡ ಮೊಬೈಲ್ ವಾಟ್ಸಾಪ್‌ಗೆ ಕಳಿಸಬೇಕು. 7) ಭಾಗವಹಿಸಿದ ಮಕ್ಕಳೆಲ್ಲರಿಗೂ ರಾಜ್ಯ ಜೈನ ಜಾಗೃತಿ ಸಂಘ (ರಿ) ವತಿಯಿಂದ ಪ್ರಶಸ್ತಿ ಪತ್ರಗಳನ್ನು ಕೊಡಲಾಗುವುದು.