ಬೆಂಗಳೂರು: ಕರ್ನಾಟಕ ಜೈನ ಅಸೋಸಿಯೇಷನ್ ವತಿಯಿಂದ ನಡೆದ ಸಮಸ್ತ ಕರ್ನಾಟಕ ಜೈನ ಸಮುದಾಯ ಸಭೆ


Logo

Published Date: 20-Mar-2025 Link-Copied

ರಾಜ್ಯದಲ್ಲಿ ಜೈನ ಅಭಿವೃದ್ಧಿ ನಿಗಮ ಸ್ಥಾಪನೆಗೆ ಸರ್ಕಾರ ಬದ್ಧವಾಗಿದ್ದು ಶೀಘ್ರದಲ್ಲಿ ನಿರ್ಧಾರ ತೆಗೆದುಕೊಳ್ಳಲಾಗುವುದು ಎಂದು ಕರ್ನಾಟಕ ಅಲ್ಪಸಂಖ್ಯಾತರ ಇಲಾಖೆ ಸಚಿವ ಜಮೀರ್ ಅಹ್ಮದ್ ಖಾನ್ ತಿಳಿಸಿದರು. ಅವರಿಂದು ಇಲ್ಲಿನ ಕರ್ನಾಟಕ ಜೈನ ಅಸೋಸಿಯೇಷನ್ ವತಿಯಿಂದ ನಡೆದ ಸಮಸ್ತ ಕರ್ನಾಟಕ ಜೈನ ಸಮುದಾಯ ಸಭೆಯಲ್ಲಿ ಸಮುದಾಯದ ಪರವಾಗಿ ಮನವಿ ಪತ್ರ ಸ್ವೀಕರಿಸಿ ಮಾತನಾಡಿದರು. ರಾಜ್ಯದ 44 ಅಲ್ಪಸಂಖ್ಯಾತರ ವಿದ್ಯಾರ್ಥಿ ನಿಲಯಗಳಲ್ಲಿ ಪ್ರತಿ ಜಿಲ್ಲೆಯಲ್ಲಿ ಒಂದು ಅಥವಾ ಜೈನ ಜನಸಂಖ್ಯೆಗೆ ಅನುಗುಣವಾಗಿ ಜೈನರಿಗೆ ಪ್ರತ್ಯೇಕ ವಿದ್ಯಾರ್ಥಿ ನಿಲಯ ಮೀಸಲಿಡಬೇಕು, ಇಲ್ಲಿಯವರೆಗೆ ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮ ಸ್ಥಾನ ಜೈನ ಸಮಾಜಕ್ಕೆ ಸಿಕ್ಕಿಲ್ಲ ನಿಗಮದಲ್ಲಿ ಜೈನ ನಿರ್ದೇಶಕರು ಆಗಿಲ್ಲ ಸರ್ಕಾರ ಜೈನ ಶಿಕ್ಷಣ ಸಂಸ್ಥೆಗಳಲ್ಲಿ ಮೊಟ್ಟೆ ಕೊಡುವ ನಿರ್ಧಾರ ಸರ್ಕಾರ ಹಿಂತೆಗೆದ್ದುಕೊಳ್ಳಬೇಕೆಂದು ಪತ್ರದಲ್ಲಿ ತಿಳಿಸಲಾಗಿದೆ ಎಂದರು. ಮಾಜಿ ಮುಖ್ಯಮಂತ್ರಿ ಹಾಗೂ ಅಥಣಿ ಕ್ಷೇತ್ರದ ಶಾಸಕ ಲಕ್ಷ್ಮಣ್ ಸವದಿ ಮಾತನಾಡಿ ವರೂರು ಶ್ರೀ ಕ್ಷೇತ್ರದ ಗುಣದರ ನoದಿ ಮಹಾರಾಜರು ಸರ್ಕಾರ ಮೂರು ಬೇಡಿಕೆಗಳ ಈಡೇರಿಕೆಗೆ ತಿಳಿಸಿದ್ದು , ಈ ಬೇಡಿಕೆಗಳ ಈಡೇರಿಕೆಗೆ ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ. ಪ್ರತ್ಯೇಕ ಹಾಸ್ಟೆಲ್‌ಗಳನ್ನು ನಿರ್ಮಿಸಲು ತಿಳಿಸಿದ್ದು, ಈ ಕಾರ್ಯಕ್ಕೆ ಸಚಿವರು ಉತ್ಸುಕರಾಗಿದ್ದಾರೆ ಎಂದರು. ಬೇರೆ ಸರ್ಕಾರಗಳಿಂದ ಉತ್ತರ ಸಿಗುತ್ತಿತ್ತು ಆದರೆ ಕಾರ್ಯಗತವಾಗುತ್ತಿರಲಿಲ್ಲ ಆದರೆ ಸಚಿವರಾದ ಜಮೀರ್ ಅಹಮದ್ ರವರಿಂದ ಇಂದು ಕಾರ್ಯಾಗತವಾಗಿದೆ ಎಂದು ಸಂತಸ ವ್ಯಕ್ತಪಡಿಸಿದರು. ಕೂಅಧಿವೇಶನಕ್ಕೆ ಮುನ್ನ ಒಂದು ಪ್ರಾಯೋಗಿಕ ಶಾಲೆ ಜೈನರಿಗಾಗಿ ನಿರ್ಮಿಸಲು ತಿಳಿಸಲಾಗಿತ್ತು ಆದರೆ ಪ್ರಾಯೋಗಿಕವಾಗಿ ಎರಡು ಶಾಲೆಗಳನ್ನು ಸರ್ಕಾರ ಮಂಜೂರು ಮಾಡಿದೆ ಎಂದರು. ಕರ್ನಾಟಕ ಜೈನ್ ಅಸೋಸಿಯೇಷನ್ ಅಧ್ಯಕ್ಷ ಎಸ್. ಜಿತೇಂದ್ರ ಕುಮಾರ್ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ಶ್ರೀ ಕ್ಷೇತ್ರ ಕಂಬದಹಳ್ಳಿ ಜೈನಮಠದ ಸ್ವಸ್ತಿಶ್ರೀ ಬಾನುಕೀರ್ತಿ ಭಟ್ಟಾರಕ ಪಟ್ಟಾಚಾರ್ಯ ಮಹಾಸ್ವಾಮಿಗಳವರು ಪಾವನ ಸಾನ್ನಿಧ್ಯ ಆಶೀರ್ವಚನ ನೀಡಿದರು. ಪುರೋಹಿತ ರತ್ನ ದಿವ್ಯ ಪಂಡಿತ್ ಧಾರ್ಮಿಕ ವಿಧಿ ವಿಧಾನಗಳನ್ನು ನೆರವೇರಿಸಿದರು. ಕಾರ್ಯಕ್ರಮದಲ್ಲಿ ಯೋಜನಾ ಹಾಗೂ ಸಂಖ್ಯೆಕ ಸಚಿವರಾದ ಡಿ. ಸುಧಾಕರ್, ಮಾಜಿ ಸಚಿವ ವೀರ್ ಕುಮಾರ್ ಪಾಟೀಲ್, ಕರ್ನಾಟಕ ಜೈನ್ ಅಸೋಸಿಯೇಷನ್ ಪದಾಧಿಕಾರಿಗಳಾದ ರಾಜಕೀರ್ತಿ ಕಲಾ ಗೌಡ, ಶೀತಲ್ ಗೌಡ ಪಾಟೀಲ್, ಆಶಾ ಪ್ರಭು, ಡಾ ನೀರಜಾ ನಾಗೇಂದ್ರ ಕುಮಾರ್, ಧರಣಿಂದ್ರ ಕುಮಾರ್ ಪ್ರಶಾಂತ್, ಎಂ. ಎಂ. ಜಿನೇಂದ್ರ, ಶೀತಲ ಕುಮಾರ್, ಮಾಳ ಹರ್ಷೇಂದ್ರ ಜೈನ್, ವಿ ಜೇ. ಬ್ರಹ್ಮಯ್ಯ, ಪದ್ಮಶ್ರೀ, ಪದ್ಮಿನಿ, ಅಜಿತ್ ಕುಮಾರ್, ಮಹಾವೀರ್, ಸ್ವರೂಪ್, ಜಿನೇಂದ್ರ, ಅನಿಲ್ ಕುಮಾರ್, ಕೋಮಲ ಬ್ರಹ್ಮದೇವಯ್ಯ, ಪ್ರಕಾಶ್ ಜೆ. ಪಿ. ರಾಜೇಶ್, ಅಶೋಕ್ ಕುಮಾರ್ ಸೇರಿದoತೆ ಕರ್ನಾಟಕದ ವಿವಿಧ ಭಾಗಗಳಿಂದ ಕಾರ್ಯಕಾರಿ ಸಮಿತಿಯ ಸದಸ್ಯರುಗಳು ಭಾಗವಹಿಸಿದ್ದರು. ಕರ್ನಾಟಕ ಜೈನ್ ಅಸೋಸಿಯೇಷನ್ ಸಹಕಾರ್ಯದರ್ಶಿ, ರತ್ನತ್ರಯ ಕ್ರಿಯೇಷನ್ ಡಾ. ನೀರಜಾ ನಾಗೇಂದ್ರ ಕುಮಾರ್ ಕಾರ್ಯಕ್ರಮ ನಿರೂಪಿಸಿದರು .

Recomendatoion img Recomendatoion img Recomendatoion img Recomendatoion img Recomendatoion img Recomendatoion img Recomendatoion img Recomendatoion img Recomendatoion img Recomendatoion img Recomendatoion img Recomendatoion img Recomendatoion img Recomendatoion img Recomendatoion img