ಎಸ್.ಡಿ.ಎಂ. ಯುನಿವರ್ಸಿಟಿ ಚೆಸ್ ಕಪ್
Published Date: 03-Oct-2024 Link-Copied
ಎಸ್.ಡಿ.ಎಂ. ವೈದ್ಯಕೀಯ ಕಾಲೇಜಿನ ಚರ್ಮರೋಗ ಮತ್ತು ದೈಹಿಕ ಶಿಕ್ಷಣ ವಿಭಾಗ, ಧಾರವಾಡ ಜಿಲ್ಲಾ ಚೆಸ್ ಅಸೋಸಿಯೇಷನ್‌ನ ಮತ್ತು ಇಂಟರ್‌ನ್ಯಾಶನಲ್ ಆರ್ಬಿಟರ್, ಪ್ರಮೋದ್ ಮೋರೆ ಅವರ ಸಹಯೋಗದೊಂದಿಗೆ ಎಸ್.ಡಿ.ಎಂ. ಡೆಂಟಲ್ ಕಾಲೇಜಿನಲ್ಲಿ ಅಕ್ಟೋಬರ್ 02, 2024 ರಂದು “ಅಖಿಲ ಭಾರತ ಮುಕ್ತ ಫಿಡೆ ಚೆಸ್ ಪಂದ್ಯಾವಳಿಯನ್ನು” ಆಯೋಜಿಸಲಾಗಿತ್ತು. ಈ ಪಂದ್ಯಾವಳಿಯಲ್ಲಿ ದೇಶದಾದ್ಯಂತ 12 ಟೈಟಲ್ಡ್ ಮತ್ತು 2 ಅಂತರಾಷ್ಟ್ರೀಯ ಆಟಗಾರರು ಸೇರಿದಂತೆ ಒಟ್ಟು 277 ಆಟಗಾರರು ಭಾಗವಹಿಸಿದ್ದರು. ಎಸ್.ಡಿ.ಎಂ. ವಿಶ್ವವಿದ್ಯಾಲಯದ ಉಪ ಕುಲಪತಿಗಳಾದ ಡಾ. ನಿರಂಜನ ಕುಮಾರ್. ಮುಖ್ಯ ಅತಿಥಿಯಾಗಿದ್ದರು. ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು ಆರೋಗ್ಯಕರ ಮತ್ತು ಏಕಾಗ್ರತೆಯ ಮನಸ್ಸಿಗೆ ಚೆಸ್ ಆಟವು ಉತ್ತಮವಾಗಿದೆ ಎಂದರು. ಪಂದ್ಯಾವಳಿಯ ನಿರ್ದೇಶಕರಾದ ಡಾ. ನವೀನ್ ಕೆ.ಎನ್, ಸಹ ನಿರ್ದೇಶಕಿಯಾದ ಡಾ. ಶ್ವೇತಾ ಪ್ರಭು, ಸಂಘಟನಾ ಕಾರ್ಯದರ್ಶಿ ಅನುರಾಗ ಖನ್ನೂರ್, ಎಸ್.ಡಿ.ಎಂ ವಿಶ್ವವಿದ್ಯಾಲಯದ ದೈಹಿಕ ಶಿಕ್ಷಣ ನಿರ್ದೇಶಕರಾದ ಡಾ. ಎಸ್. ಜಿ. ಕೊಪ್ಪದ್, ಡಾ. ಶರದ್ ಜವಳಿ, ಎಸ್.ಡಿ.ಎಂ ದಂತ ಮಹಾವಿದ್ಯಾಲಯದ ಪ್ರಾಂಶುಪಾಲರಾದ ಡಾ. ಬಲರಾಮ್ ನಾಯ್ಕ್ ಮತ್ತಿತರರು ಈ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. ಮಹಾರಾಷ್ಟ್ರದ ಶ್ರೀ ಆಕಾಶ್ ದಳವಿ 8 ಅಂಕಗಳೊಂದಿಗೆ ಪ್ರಥಮ, ನವಲಗುಂದ ನಿರಂಜನ್ 8 ಅಂಕಗಳೊಂದಿಗೆ ದ್ವಿತಿಯ ಮತ್ತು 7.5 ಅಂಕಗಳೊಂದಿಗೆ ಮೊಹಮ್ಮದ ನುಬೇರಷಾ ಶೇಖ್ ತೃತೀಯ ಸ್ಥಾನ ಪಡೆದಿದ್ದಾರೆ. ಎಸ್.ಡಿ.ಎಂ ವೈದ್ಯಕೀಯ ಮಹಾವಿದ್ಯಾಲಯದ ಉಪ ಪ್ರಾಂಶುಪಾಲರಾದ ಡಾ. ದೀಪಕ ಕಣಬೂರ ಅವರ ಉಪಸ್ಥಿತಿಯಲ್ಲಿ ಎಲ್ಲಾ ವಿಜೇತರಿಗೆ ಟ್ರೋಫಿ ಮತ್ತು ಪ್ರಮಾಣಪತ್ರಗಳನ್ನು ನೀಡಲಾಯಿತು. ಹಾರ್ದಿಕ್ ರಾಣೆ ಅತಿಥಿಗಳನ್ನು ಸ್ವಾಗತಿಸಿದರು. ಆದಿತ್ಯ ಟಿ ಕಾರ್ಯಕ್ರಮ ನಿರೂಪಿಸಿದರು. ಪಂಚಮಿ ಸರ್ಪಂಗಳ ವಂದನಾರ್ಪಣೆ ಸಲ್ಲಿಸಿದರು.