‘’ಒನ್ ಟೀಮ್, ಒನ್ ಡ್ರೀಮ್’’- ಸಾಮೂಹಿಕ ಯಶಸ್ಸಿನ ಹಾದಿ
Published Date: 28-Aug-2024 Link-Copied
ಮೂಡುಬಿದಿರೆ: ಎಲ್ಲರೂ ಒಂದೇ ಮನಸ್ಸಿನಿಂದ ಒಂದು ನಿಗದಿತ ಗುರಿಯೆಡೆಗೆ ಹೆಜ್ಜೆ ಹಾಕಿದಾಗ ಯಶಸ್ಸು ನಮ್ಮದಾಗುತ್ತದೆ ಎಂದು ಮಾಜಿ ವಿಧಾನ ಪರಿಷತ ಸದಸ್ಯ ಗಣೇಶ್ ಕಾರ್ಣಿಕ್ ತಿಳಿಸಿದರು. ಅವರು ಸೋಮವಾರ, ಆಳ್ವಾಸ್‌ನ ಶಿವರಾಮ್ ಕಾರಂತ ವೇದಿಕೆಯಲ್ಲಿ ಆಳ್ವಾಸ್ ಪದವಿ ಕಾಲೇಜಿನ- ದಿ ಮ್ಯಾಟ್ರಿಕ್ಸ್ ಗ್ರೂಪ್ ಆಯೋಜಿಸಿದ್ದ- ‘’ಒನ್ ಟೀಮ್, ಒನ್ ಡ್ರೀಮ್’’- ಸಾಮೂಹಿಕ ಯಶಸ್ಸಿನ ಹಾದಿ ವಿಷಯದ ಕುರಿತು ಮಾತನಾಡಿದರು. ಪ್ರತಿಯೊಬ್ಬರು ತಮ್ಮ ಸಾಮಾರ್ಥ್ಯ ಹಾಗೂ ದೌರ್ಬಲ್ಯಗಳನ್ನು ಅರಿತು, ತಮ್ಮಲ್ಲಿರುವ ನ್ಯೂನತೆಗಳನ್ನು ಮಣಿಸಲು ಆರಂಬಿಸಿದಾಗ ಸಾಧಿಸಲು ಹೊರಟ ಕೆಲಸದಲ್ಲಿ ಜಯ ಲಭಿಸಲು ಸಾಧ್ಯ. ಇದರ ಜೊತೆಗೆ ಪ್ರತಿಯೊಬ್ಬರು ತಂಡದಲ್ಲಿ ಕೆಲಸಮಾಡುವ ಅಗತ್ಯತೆಯನ್ನು ಅರಿಯಬೇಕು. ಇಲ್ಲಿ ವೈಯಕ್ತಿಕ ಹಿತಾಸಕ್ತಿಗಳಿಗೆ ಪ್ರಾಶಸ್ತö್ಯವಿರುವುದಿಲ್ಲ. ತಂಡದ ಶ್ರೇಯಸ್ಸೇ ಪ್ರತಿಯೊಬ್ಬರ ಗುರಿಯಾಗಿರುತ್ತದೆ. ಈ ಹಂತದಲ್ಲಿ ನಾವು ಪಡೆಯುತ್ತಿರುವ ಶಿಕ್ಷಣ ಈ ಪ್ರಕ್ರಿಯೆಗೆ ಎಷ್ಟು ಪರಿಣಾಮಕಾರಿಯಾಗಿ ಸ್ಪಂದಿಸುತ್ತಿದೆ ಎಂಬುದು ಮುಖ್ಯ. ಶಿಕ್ಷಣ ನಮ್ಮನ್ನು ಜವಾಬ್ದಾರಿಯುತ ಹಾಗೂ ಉತ್ತರದಾಯಿತ್ವದ ವಿದ್ಯಾರ್ಥಿಗಳನ್ನಾಗಿಬೇಕು. ಈ ಹಂತದಲ್ಲಿ ಹೆಚ್ಚಿನ ಜವಾಬ್ದಾರಿಗಳನ್ನು ವಹಿಸಿಕೊಂಡು ಬೆಳವಣಿಗೆ ಹೊಂದುವತ್ತಾ ಶ್ರಮಿಸಬೇಕು ಎಂದರು. ಮ್ಯಾಟ್ಟಿಕ್ಸ್ ಟೀಮ್‌ನ ಸಂಯೋಜಕ ಆದಿತ್ಯ ಟೀಮ್ ಬೆಳೆದುಬಂದ ಹಾದಿ ಹಾಗೂ ತೊಡಿಗಿಕೊಂಡಿರುವ ಚಟುವಟಿಕೆಗಳ ಕುರಿತು ಪ್ರಾಸ್ತಾವಿಕವಾಗಿ ಮಾತನಾಡಿದರು. ಆಳ್ವಾಸ್ ಕಾಲೇಜಿನ ಪ್ರಾಚರ‍್ಯ ಡಾ ಕುರಿಯನ್, ಆಡಳಿತಾಧಿಕಾರಿ ಬಾಲಕೃಷ್ಣ ಶೆಟ್ಟಿ, ಕುಲಸಚಿವರು ಮೌಲ್ಯಮಾಪನ ಡಾ. ನಾರಾಯಣ ಶೆಟ್ಟಿ ಇದ್ದರು. ಸನ್ವಿತ್ ಕಾರ‍್ಯಕ್ರಮ ನಿರ್ವಹಿಸಿ, ಆದರ್ಶ ಸ್ವಾಗತಿಸಿ, ವೆಂಕಟೇಶ್ ಮಲ್ಯ ಹಾಗೂ ತಂಡ ಪ್ರಾರ್ಥಿಸಿ, ಕಾರ್ತಿಕ್ ಅತಿಥಿಯನ್ನು ಪರಿಚಯಿಸಿ, ಆದಿ ಎಸ್ ರೈ ವಂದಿಸಿದರು.