ಕಾಲೇಜುಗಳ ಸಂಯೋಜನೆ: ಅರ್ಜಿ ಆಹ್ವಾನ
Published Date: 18-May-2024 Link-Copied
ಮಂಗಳೂರು: ಮಂಗಳೂರು ವಿವಿ ಸಂಯೋಜನೆಗಳ ಪಟ್ಟಿರುವ ಎಲ್ಲ ಕಾಲೇಜು, ವಿದ್ಯಾಸಂಸ್ಥೆಗಳಿಂದ 2024-25ನೇ ಸಾಲಿಗೆ ಸಂಯೋಜಿತ ಕಾಲೇಜುಗಳಿಗೆ ಹೊಸ ವ್ಯಾಸಂಗ ಕ್ರಮ ಮತ್ತು ಹೊಸ ವಿಷಯಗಳು, ಮುಂದುವರಿಕೆ, ವಿಸ್ತರಣೆ ಸಂಯೋಜನೆ, ವಿದ್ಯಾರ್ಥಿ ಪ್ರಮಾಣ ಹೆಚ್ಚಳ, ಕಾಲೇಜಿನ ಹೆಸರು ಬದಲಾವಣೆ, ಮ್ಯಾನೇಜ್‌ಮೆಂಟ್ ಬದಲಾವಣೆ ಮತ್ತು ಆಸಕ್ತ ವಿದ್ಯಾಸಂಸ್ಥೆಗಳಿಂದ ಹೊಸ ಸಂಯೋಜನೆ ನೀಡುವ ಬಗ್ಗೆ ಪೋರ್ಟಲ್ www.uucms.karnataka.gov.in ಮೂಲಕ 2000 ರೂ. ಶುಲ್ಕ ಪಾವತಿಸಿ ಮೇ 25ರೊಳಗೆ ಅರ್ಜಿ ಸಲ್ಲಿಸಬೇಕು. ಹೆಚ್ಚಿನ ಮಾಹಿತಿಗೆ www.mangloreuniversity.ac.in ವೆಬ್ ಸೈಟ್ ನೋಡುವಂತೆ ವಿಶ್ವವಿದ್ಯಾನಿಲಯದ ಕುಲಸಚಿವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.