ಡ್ರೋನ್ಸ್ ಫಾರ್ ಅಗ್ರಿಕಲ್ಚರ್: ತರಬೇತಿ ಕಾರ್ಯಾಗಾರ
Published Date: 06-May-2024 Link-Copied
ಉಡುಪಿ: ರಾಜ್ಯ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ, ಕರ್ನಾಟಕ ವಿಜ್ಞಾನ ಮತ್ತು ತಂತ್ರಜ್ಞಾನ ಅಕಾಡೆಮಿ, ರಾಷ್ಟ್ರೀಯ ಕೃಷಿ ವಿಸ್ತರಣೆ ನಿರ್ವಹಣೆ ಸಂಸ್ಥೆ ಕೇಂದ್ರ ಕೃಷಿ ಮತ್ತು ರೈತ ಕಲ್ಯಾಣ ಇಲಾಖೆ ಸಹಯೋಗದಲ್ಲಿ ‘ಅಪ್ಲಿಕೇಶನ್ಸ್ ಆಫ್ ಯುಎವಿ ಆ್ಯಂಡ್ ಡ್ರೋನ್ಸ್ ಫಾರ್ ಅಗ್ರಿಕಲ್ಚರ್' ಮೇ 14 ರಿಂದ 16ರ ವರೆಗೆ ಆನ್‌ಲೈನ್ ಮೂಲಕ ತರಬೇತಿ ಕಾರ್ಯಾಗಾರ ಆಯೋಜಿಸಲಾಗುತ್ತಿದೆ. ಪ್ರತಿಷ್ಠಿತ ಸಂಸ್ಥೆಗಳ ನುರಿತ ವಿಜ್ಞಾನಿಗಳು ವಿಷಯಾಧಾರಿತ ಉಪನ್ಯಾಸಗಳನ್ನು ನೀಡಲಿದ್ದಾರೆ. ಸ್ನಾತಕೋತ್ತರ ವಿಜ್ಞಾನ ವಿದ್ಯಾರ್ಥಿಗಳು, ಸಂಶೋಧನ ವಿದ್ಯಾರ್ಥಿಗಳು, ಪ್ರಾಧ್ಯಾಪಕರು ಹಾಗೂ ಯುವ ವಿಜ್ಞಾನಿಗಳು ಮೇ 10ರ ಒಳಗಾಗಿ https://forms.gle/LwxDoR5sktBVHktf9 ನೋಂದಾಯಿಸಿಕೊಂಡು ತರಬೇತಿ ಕಾರ್ಯಾಗಾರದಲ್ಲಿ ಭಾಗವಹಿಸಬಹುದು. ಮಾಹಿತಿಗೆ 9743084194 ಪ್ರಕಟಣೆ ತಿಳಿಸಿದೆ.