ಬೆಳ್ತಂಗಡಿ: ಸುದರ್ಶನ ಕ್ರಿಯಾ ಯೋಗ ಶಿಬಿರ
Published Date: 03-May-2024 Link-Copied
ಗುರುದೇವ್ ಶ್ರೀ ರವಿಶಂಕರ್ ಅವರ ಆನಂದೋತ್ಸವ ಸುದರ್ಶನ ಕ್ರಿಯಾ ಯೋಗ ಶಿಬಿರ ಉಜಿರೆಯ ಅರಿಪ್ಪಾಡಿ ಮಠ ಸಭಾಂಗಣದಲ್ಲಿ ಮೇ 15 ರಿಂದ 20ರ ವರೆಗೆ ಪ್ರತೀ ಸಂಜೆ 5.30 ರಿಂದ 8ರ ವರೆಗೆ ನಡೆಯಲಿದೆ. ಶಿಬಿರದಲ್ಲಿ ಯೋಗ, ಧ್ಯಾನ, ಪ್ರಾಣಾಯಾಮ, ಸುದರ್ಶನ ಕ್ರಿಯಾ ಮತ್ತು ಜೀವನಕ್ಕೆ ಸಂಬಂಧಿಸಿದ ಜ್ಞಾನ ಒದಗಿಸಲಾಗುವುದು. ವಿಶ್ವದ ಮಿಲಿಯಾಂತರ ಜನರ ಜೀವನವನ್ನು ಪರಿವರ್ತಿಸಿದ ಸರಳವಾದ ಉಸಿರಾಟ ಪ್ರಕ್ರಿಯೆ ಸುದರ್ಶನ ಕ್ರಿಯೆ ಕಲಿಯುವ ಸುವರ್ಣಾವಕಾಶವಿದ್ದು ಒತ್ತಡ ರಹಿತ, ಶಾಂತವಾದ ಮನಸ್ಸು ಸಂತೋಷ ಉತ್ಸಾಹ ಮತ್ತು ಕ್ರಿಯಾಶೀಲತೆ, ಮಾನಸಿಕ ಖಿನ್ನತೆ, ಚಿಂತೆ ಮತ್ತು ಆತಂಕಗಳಿಂದ ಮುಕ್ತಿ, ಆರೋಗ್ಯಕರವಾದ ದೇಹ ಮತ್ತು ಉತ್ತಮ ನಿದ್ದೆಗೆ ಸುದರ್ಶನ ಕ್ರಿಯಾ ಯೋಗ ಉಪಯುಕ್ತವಾಗಿದ್ದು ಆಸಕ್ತರು ಭಾಗವಹಿಸುವಂತೆ ಪ್ರಕಟಣೆಯಲ್ಲಿ ತಿಳಿಸಿದೆ.