ಜೆಇಇ ಮೈನ್ಸ್ ಪರೀಕ್ಷೆ: ಮೂಡುಬಿದಿರೆಯ ಎಕ್ಸಲೆಂಟ್ ವಿದ್ಯಾರ್ಥಿಗಳ ಸಾಧನೆ
Published Date: 26-Apr-2024 Link-Copied
ಮೂಡುಬಿದಿರೆ: ಇತ್ತೀಚೆಗೆ ನಡೆದ ರಾಷ್ಟçಮಟ್ಟದ ಜೆಇಇ ಮೈನ್ಸ್ ಪರೀಕ್ಷೆಯಲ್ಲಿ ಮೂಡುಬಿದಿರೆಯ ಎಕ್ಸಲೆಂಟ್ ವಿಜ್ಞಾನ ಮತ್ತು ವಾಣಿಜ್ಯ ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿಗಳು ಅತ್ಯುತ್ತಮ ಅಂಕಗಳನ್ನು ಪಡೆದು ಉತ್ಕ್ರಷ್ಟ ಸಾಧನೆಗೈದಿದ್ದಾರೆ. ಎರಡು ಹಂತಗಳಲ್ಲಿ ನಡೆದ ಜೆಇಇ ಮೈನ್ಸ್ ಪರೀಕ್ಷೆಯಲ್ಲಿ ಒಟ್ಟು 130 ವಿದ್ಯಾರ್ಥಿಗಳು ಹಾಜರಾಗಿದ್ದು 78 ವಿದ್ಯಾರ್ಥಿಗಳು ಉತ್ತಮ ಪರ್ಸೆಂಟೆಜ್ ಪಡೆದು ಜೆಇಇ ಅಡ್ವಾನ್ಸ್ ಗೆ ಅರ್ಹತೆ ಪಡೆದಿರುತ್ತಾರೆ. ನಿಶಾಂತ್ ಪಿ. ಹೆಗಡೆ (99.5545), ಸಂಜಯ್ ಬಿರಾದಾರ್ (99.4222), ಸಚಿನ್ ವಿ. ನಾಗರೆಡ್ಡಿ(99.3426), ಸೃಜನ್ ಎಂ. ಆರ್. (99.0462) 99 ಪರ್ಸೆಂಟೆಜ್‌ಗಿ0ತ ಅಧಿಕ ಅಂಕವನ್ನು ಗಳಿಸಿ ಸಂಸ್ಥೆಗೆ ಕೀರ್ತಿ ತಂದಿರುತ್ತಾರೆ. ವಿ. ಚಿರಾಗ್ ಕಂಚಿರಾಯ ರಾಷ್ಟ್ರಮಟ್ಟದಲ್ಲಿ 1106ನೇ ರ‍್ಯಾಂಕ್(ಎಸ್.ಸಿ), ಸಂಜಯ್ ಬಿರಾದಾರ್ 1321 ನೇ ರ‍್ಯಾಂಕ್(ಇ.ಡಬ್ಲು.ಎಸ್), ಸಚಿನ್ ವಿ. ನಾಗರೆಡ್ಡಿ 1517 ನೇ ರ‍್ಯಾಂಕ್(ಇ.ಡಬ್ಲು.ಎಸ್), ಮತ್ತು ಸಾನ್ವಿ ಟಿ. ಎಸ್. 3022ನೇ ರ‍್ಯಾಂಕ್(ಎಸ್.ಟಿ), ಶ್ರೀಶೈಲ್ ಬಿ. ಪಾಟೀಲ್ 4590ನೇ ರ‍್ಯಾಂಕ್(ಇ.ಡಬ್ಲು.ಎಸ್), ರೋಹನ್ 4803 ನೇ ರ‍್ಯಾಂಕ್(ಇ.ಡಬ್ಲು.ಎಸ್), ಮತ್ತು ನಿಶಾಂತ್ ಪಿ. ಹೆಗಡೆ 7251 ನೇ ರ‍್ಯಾಂಕ್(ಸಿ.ಆರ್.ಎಲ್) ಪಡೆದಿರುತ್ತಾರೆ. ಎರಡನೇ ಹಂತದ ಪ್ರವೇಶ ಪರೀಕ್ಷೆಯಲ್ಲಿ ನಿಖಿಲ್ ಬಿ. ಗೌಡ ಮತ್ತು ಭಾರ್ಗವಿ ಭೌತಶಾಸ್ತ್ರ ವಿಷಯದಲ್ಲಿ 100 ಪರ್ಸೆಂಟೆಜ್‌ನ್ನು ಪಡೆದಿರುತ್ತಾರೆ. ಭೌತಶಾಸ್ತ್ರದಲ್ಲಿ 11 ವಿದ್ಯಾರ್ಥಿಗಳು, ರಸಾಯನಶಾಸ್ತ್ರದಲ್ಲಿ 6 ವಿದ್ಯಾರ್ಥಿಗಳು ಮತ್ತು ಗಣಿತಶಾಸ್ತ್ರದಲ್ಲಿ 4 ವಿದ್ಯಾರ್ಥಿಗಳು 99 ಪರ್ಸೆಂಟೆಜ್‌ಗಿ0ತ ಅಧಿಕ ಅಂಕವನ್ನು ಪಡೆದಿರುತ್ತಾರೆ.