ಮೂಡಬಿದಿರೆ: ಎಕ್ಸಲೆಂಟ್ ಗುಣಸಾಗರ್ ಜಿಲ್ಲೆಗೆ ಪ್ರಥಮ
Published Date: 14-Apr-2024 Link-Copied
ಮೂಡಬಿದಿರೆ: ಎಕ್ಸಲೆಂಟ್ ವಿಜ್ಞಾನ ಮತ್ತು ವಾಣಿಜ್ಯಪದವಿಪೂರ್ವ ಕಾಲೇಜಿನ ವಿದ್ಯಾರ್ಥಿ ಗುಣಸಾಗರ್ ಡಿ. ದ್ವಿತೀಯ ಪದವಿಪೂರ್ವ ವಾರ್ಷಿಕ ಪರೀಕ್ಷೆಯಲ್ಲಿ 597 ಅಂಕವನ್ನು ಗಳಿಸುವುದರ ಮೂಲಕ ಜಿಲ್ಲೆಗೆ ಪ್ರಥಮ ಸ್ಥಾನ ಹಾಗೂ ರಾಜ್ಯಕ್ಕೆ ಎರಡನೇ ಸ್ಥಾನ ಪಡೆದಿದ್ದಾರೆ. ತಿಪಟೂರಿನ ಪತ್ರಕರ್ತರಾದ ದಯಾನಂದ ಟಿ. ಎಸ್. ಮತ್ತು ಸವಿತಾ ದಂಪತಿಗಳ ಪುತ್ರ. ಇವರು ಹತ್ತನೇ ತರಗತಿಯಲ್ಲಿ 91% ಅಂಕವನ್ನು ಪಡೆದಿದ್ದು ಪದವಿಪೂರ್ವ ಪರೀಕ್ಷೆಯಲ್ಲಿ 99.5% ಅಂಕವನ್ನು ಪಡೆಯುವುದರ ಮೂಲಕ ಸತತ ಪರಿಶ್ರಮದಿ0ದ ಅತ್ಯುನ್ನತ ಸಾಧನೆ ಸಾಧ್ಯ ಎಂದು ಸಾಬೀತು ಪಡಿಸಿದ್ದಾರೆ.