ಮ್ಯಾಪ್ಸ್ ಶಿಕ್ಷಣ ಸಂಸ್ಥೆ: ಸ್ಕಾಲರ್‌ಶಿಪ್‌ನೊಂದಿಗೆ ಪ್ರವೇಶಕ್ಕೆ ಅರ್ಜಿ ಆಹ್ವಾನ
Published Date: 10-Apr-2024 Link-Copied
ಮಂಗಳೂರು: ಕಳೆದ 18 ವರ್ಷಗಳಿಂದ ಮಂಗಳೂರಿನ ಬಂಟ್ಸ್ ಹಾಸ್ಟೆಲ್ - ಕದ್ರಿ ರಸ್ತೆಯಲ್ಲಿ ಕಾರ್ಯಾಚರಿಸುತ್ತಿರುವ ಮ್ಯಾಪ್ಸ್ ಕಾಲೇಜು ಪಿಯುಸಿ, ಬಿ.ಕಾಂ.ನೊಂದಿಗೆ ಸಿ.ಎ, ಎಸಿಸಿಎ, ಸಿಎಸ್, ಸಿಎಂಎ ವಿಷಯದಲ್ಲಿ ಪ್ರೊಫೆಶನಲ್ ಕೋಚಿಂಗ್ ನೀಡುತ್ತಿದೆ. ಈ ಕೋರ್ಸುಗಳಿಗೆ (ಸ್ಕಾಲರ್‌ಶಿಪ್ ಸೌಲಭ್ಯದೊಂದಿಗೆ) ವಿದ್ಯಾರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ಮ್ಯಾಪ್ಸ್ ಕಾಲೇಜಿನಲ್ಲಿ ವಿಶಿಷ್ಟ ರೀತಿಯ ಬಿಸಿಎ ಪದವಿ ಶಿಕ್ಷಣ ಒದಗಿಸಲಾಗುತ್ತಿದ್ದು, ವಿ.ವಿ. ನಿಗದಿ ಮಾಡಿದ ಪದವಿ ಶಿಕ್ಷಣದ ಜತೆಗೆ ಹೆಚ್ಚುವರಿಯಾಗಿ ಡಾಟಾ ಅನಾಲಿಟಿಕ್ಸ್, ವೆಬ್ ಡಿಸೈನಿಂಗ್, ಆ್ಯನಿಮೇಶನ್ ಆ್ಯಂಡ್ ಗ್ರಾಫಿಕ್ಸ್, ಸೈಬರ್ ಸೆಕ್ಯೂರಿಟಿ, ಆರ್ಟಿಫೀಶಿಯಲ್ ಇಂಟೆಲಿಜೆನ್ಸ್ ಮುಂತಾದ ವಿಷಯಗಳಲ್ಲಿ ತರಬೇತಿ ಉದ್ಯೋಗಳಿಗೆ ಸಜ್ಜುಗೊಳಿಸಲಾಗುತ್ತದೆ. ಅರ್ಹ ವಿದ್ಯಾರ್ಥಿಗಳು ಈ ಮೇಲಿನ ಕೋರ್ಸುಗಳಿಗೆ ಸ್ಕಾಲರ್‌ಶಿಪ್ ಸೌಲಭ್ಯ ಪಡೆದುಕೊಳ್ಳಲು ಕೂಡಲೇ ಅರ್ಜಿ ಸಲ್ಲಿಸುವಂತೆ ತಿಳಿಸಿದೆ. ಆಸಕ್ತರು ಹೆಚ್ಚಿನ ಮಾಹಿತಿಗಾಗಿ ಕಾಲೇಜಿನ ಕಚೇರಿಯನ್ನು ಸಂಪರ್ಕಿಸಬಹುದು. ವೆಬ್‌ಸೈಟ್: https://www.mapsmangalore.com/.