ಶ್ರೀನಿವಾಸ ತಾಂತ್ರಿಕ ಮಹಾವಿದ್ಯಾಲಯ: ಪಿಯುಸಿಯವರಿಗೆ ಸಿಇಟಿ ಆನ್ ಲೈನ್ ಅಣಕು ಪರೀಕ್ಷೆ
Published Date: 09-Apr-2024 Link-Copied
ಮಂಗಳೂರು, ಎ. 8: ಪಿಯುಸಿ ವಿದ್ಯಾರ್ಥಿಗಳು ಸಿಇಟಿ ಪರೀಕ್ಷೆಯನ್ನು ಎದುರಿಸುವ ಬಗ್ಗೆ ಆನ್ ಲೈನ್ ಮೂಲಕ ಅಣಕು ಪರೀಕ್ಷೆಯನ್ನು ಬರೆಯುವ ವಿಶೇಷ ಅವಕಾಶವನ್ನು ಶ್ರೀನಿವಾಸ ತಾಂತ್ರಿಕ ಮಹಾವಿದ್ಯಾಲಯ ವಿದ್ಯಾರ್ಥಿಗಳಿಗೆ ಒದಗಿಸುತ್ತಿದೆ. ಭೌತಶಾಸ್ತ್ರ ಗಣಿತ, ರಸಾಯನಶಾಸ್ತ್ರ ಮತ್ತು ಜೀವಶಾಸ್ತ್ರ ವಿಷಯದಲ್ಲಿ ಪ್ರತ್ಯೇಕವಾಗಿ 60 ನಿಮಿಷಗಳ ಅವಧಿಯಲ್ಲಿ ಪರೀಕ್ಷೆ ನಡೆಯುತ್ತದೆ. ಎ. 10ರಂದು ಭೌತಶಾಸ್ತ್ರ, 11ರಂದು ಗಣಿತ, 12ರಂದು ರಸಾಯನಶಾಸ್ತ್ರ ಮತ್ತು 13ರಂದು ಜೀವಶಾಸ್ತ್ರ ವಿಷಯಗಳಲ್ಲಿ ಸಂಜೆ 7 ರಿಂದ 8 ಗಂಟೆಯವರೆಗೆ ಪರೀಕ್ಷೆ ತೆಗೆದುಕೊಳ್ಳಬಹುದಾಗಿದೆ. ಸಿಇಟಿ ಬರೆಯುವ ಎಲ್ಲ ವಿದ್ಯಾರ್ಥಿಗಳು ಈ ಅಣಕು ಪರೀಕ್ಷೆಯಲ್ಲಿ ಭಾಗವಹಿಸಿ ಪ್ರಯೋಜನ ಪಡೆಯುವುದಲ್ಲದೇ ಪರೀಕ್ಷಾ ಪ್ರಶ್ನೆ ಪತ್ರಿಕೆಯ ವಿಶಿಷ್ಟತೆ ಹಾಗೂ ಕ್ಲಿಷ್ಟತೆಯ ಮಟ್ಟವನ್ನು ತಿಳಿದುಕೊಂಡು ತಮ್ಮ ತಮ್ಮ ಕಲಿಕಾ ವಿಧಾನವನ್ನು ವಿಶ್ಲೇಷಿಸಿ, ತಾವು ನಡೆಸುವ ಕಲಿಕೆಯಲ್ಲಿ ಯಾವ ಬದಲಾವಣೆಯನ್ನು ಮಾಡಿಕೊಂಡು ಅಭ್ಯಾಸ ಮಾಡಬಹುದೆಂದು ತಿಳಿದುಕೊಂಡು ಮುಂದಿನ ಪರೀಕ್ಷೆಯಲ್ಲಿ ಉತ್ತಮ ಅಂಕಗಳನ್ನು ಗಳಿಸಲು ಒಂದು ಉತ್ತಮ ಅವಕಾಶ ಇದಾಗಿದೆ ಎಂದು ಕಾಲೇಜಿನ ಪ್ರಾಂಶುಪಾಲ ಡಾ| ಶ್ರೀನಿವಾಸ ಮಯ್ಯ ಡಿ. ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಪರೀಕ್ಷೆ ಬರೆಯಲು ಸಮಯಕ್ಕೆ ಸರಿಯಾಗಿ https://sitmng.ac.in/ SIT/About/Mock-Cet2024 ಅಥವಾ www.sitmng.ac.in ಗೆ ಭೇಟಿ ನೀಡಿ ಪರೀಕ್ಷೆ ಬರೆಯಬಹುದಾಗಿದೆ. ಹೆಚ್ಚಿನ ವಿವರ ಹಾಗೂ ಮಾಹಿತಿಗಳಿಗೆ ಡಾ| ಧೀರಜ್ ಹೆಬ್ರಿ ಅವರನ್ನು ಸಂಪರ್ಕಿಸಬಹುದು (dheeraj.h7 @sitmng.ac.in).