ಶಾಲೆಗಳ ಉನ್ನತೀಕರಣಕ್ಕೆ ಅರ್ಜಿ ಆಹ್ವಾನ
Published Date: 17-Feb-2024 Link-Copied
ಬೆಂಗಳೂರು: 2024-25ನೇ ಸಾಲಿಗೆ ಸರಕಾರಿ ಪ್ರಾಥಮಿಕ ಮತ್ತು ಪ್ರೌಢಶಾಲೆಗಳಲ್ಲಿ ಹೊಸದಾಗಿ 6ರಿಂದ 10ನೇ ತರಗತಿವರೆಗೆ ಉನ್ನತೀಕರಣ, ಆಂಗ್ಲ ಮಾಧ್ಯಮ ಆರಂಭಿಸುವ ಶಾಲೆಗಳ ಬಲವರ್ಧನೆ ಸಂಬಂಧ ಪ್ರಸ್ತಾವನೆ ಸಲ್ಲಿಸಲು ಶಿಕ್ಷಣ ಇಲಾಖೆಯು ಶಿಕ್ಷಣ ಸಂಸ್ಥೆಗಳಿಗೆ ಸೂಚಿಸಿದೆ. ಪ್ರತಿ ಶಾಲೆಗಳ ಉನ್ನತೀಕರಣಕ್ಕೆ ಇಲಾಖೆಯು ಪ್ರತ್ಯೇಕ ಮಾರ್ಗಸೂಚಿ ಹೊರಡಿಸಿದೆ. ಇದರ ಅನ್ವಯ ಶಾಲೆಗಳು ಪ್ರಸ್ತಾವನೆಯನ್ನು ಸಲ್ಲಿಸಬಹುದಾಗಿದೆ. ಹಾಲಿ ಚಾಲ್ತಿಯಲ್ಲಿರುವ 1ರಿಂದ 5ನೇ ತರಗತಿ ಆಂಗ್ಲಮಾಧ್ಯಮ ವಿಭಾಗವನ್ನು 6ನೇ ತರಗತಿ ಸ್ವಾಭಾವಿಕ ಬೆಳವಣಿಗೆ ಅಡಿಯಲ್ಲಿ ಮುಂದುವರಿಸಲು ಉಪ ನಿರ್ದೇಶಕರು ಪ್ರಾಧಿಕಾರವಾಗಿರುತ್ತಾರೆ. ಇನ್ನು 1 ರಿಂದ 7 ಹಾಗೂ 8ನೇ ತರಗತಿ ಆಂಗ್ಲ ಮಾಧ್ಯಮ ವಿಭಾಗಗಳಿರುವ ಶಾಲೆಗಳು 8, 9ನೇ ತರಗತಿಯಿಂದ ಆಂಗ್ಲ ಮಾಧ್ಯಮ ವಿಭಾಗ ಮುಂದುವರಿಸಲು ನಿರ್ದೇಶಕರು ಪ್ರಾಧಿಕಾರಗಳಾಗಿರುತ್ತಾರೆ. ಪ್ರತಿ ಪ್ರಸ್ತಾವನೆಗೂ ದಿನಾಂಕ ನಿಗದಿ ಮಾಡಿದೆ. ಹೆಚ್ಚಿನ ಮಾಹಿತಿಯನ್ನು : https://schooleducation. karnataka.gov.in/ ಈ ಲಿಂಕ್ ಮೂಲಕ ತಿಳಿದುಕೊಳ್ಳಬಹುದು.