ಫೆ. 25: ಪೊಲೀಸ್ ಕಾನ್ ಸ್ಟೇಬಲ್ ಪರೀಕ್ಷೆ
Published Date: 10-Feb-2024 Link-Copied
ಬೆಂಗಳೂರು: ಕರ್ನಾಟಕ ರಾಜ್ಯ ಪೊಲೀಸ್ ಇಲಾಖೆಯಲ್ಲಿ ಖಾಲಿ ಇರುವ ಪೊಲೀಸ್ ಕಾನ್ಸ್ಟೆಬಲ್ (ಸಿವಿಲ್) (ಪುರುಷ, ಮಹಿಳಾ) (ತೃತೀಯ ಲಿಂಗ ಪುರುಷ ಮತ್ತು ಮಹಿಳಾ), ಸೇವಾನಿರತ ಹಾಗೂ ಬ್ಯಾಕ್ ಲಾಗ್-1137 ಹುದ್ದೆಗಳಿಗೆ ಫೆ. 25ರಂದು ಬೆಳಗ್ಗೆ 11ರಿಂದ 12.30ರ ವರೆಗೆ ರಾಜ್ಯಾದ್ಯಂತ ಲಿಖಿತ ಪರೀಕ್ಷೆ ನಡೆಸಲಾಗುವುದು ಎಂದು ರಾಜ್ಯ ಪೊಲೀಸ್ ಇಲಾಖೆ ಪ್ರಕಟಣೆ ಹೊರಡಿಸಿದೆ. ಅರ್ಹ ಅಭ್ಯಥಿ೯ಗಳಿಗೆ ಕರೆಪತ್ರದ ಬಗ್ಗೆ ಎಸ್ಎಂಎಸ್ ಮೂಲಕ ಮಾಹಿತಿ ನೀಡಲಾಗುವುದು. ಕರೆಪತ್ರದ ಲಿಂಕ್ ಕಳುಹಿಸಲಾಗುವುದು. ಇನ್ನೂ ಅಭ್ಯಥಿ೯ಗಳಿಗೆ ಕರೆಪತ್ರವನ್ನು ಡೌನ್ಲೋಡ್ ಮಾಡಿಕೊಂಡು ನಿಗದಿಪಡಿಸಿದ ದಿನಾಂಕದಂದು ಲಿಖಿತ ಪರೀಕ್ಷೆಗೆ ಹಾಜರಾಗಲು ಸೂಚಿಸಿದೆ. ವಸ್ತ್ರಸಂಹಿತೆ: ಪುರುಷ ಮತ್ತು ತೃತೀಯಲಿಂಗ ಪುರುಷ ಅಭ್ಯರ್ಥಿಗಳಿಗೆ ಅರ್ಧ ತೋಳಿನ ಶರ್ಟ್ ಕಡ್ಡಾಯವಾಗಿ ಧರಿಸುವುದು, ಸಾಧ್ಯವಾದಷ್ಟು ಕಾಲರ್ ರಹಿತ ಶಟ್೯ಗಳನ್ನು ಧರಿಸುವುದು, ಝಿಪ್ ಪ್ಯಾಕೆಟ್‌ಗಳು, ದೊಡ್ಡ ಬಟನ್‌ಗಳಿರುವ ಶರ್ಟ್ ಧರಿಸುವಂತಿಲ್ಲ. ಜೀನ್ಸ್ ಹಾಗೂ ಹೆಚ್ಚಿನ ಜೇಬುಗಳಿರುವ ಪ್ಯಾಂಟ್ ಧರಿಸತಕ್ಕದ್ದಲ್ಲ, ತೆಳುವಾದ ಅಡಿಭಾಗವಿರುವ ಪಾದರಕ್ಷೆ (ಚಪ್ಪಲಿ) ಧರಿಸುವುದು. ಕುತ್ತಿಗೆ ಸುತ್ತ ಲೋಹದ ಆಭರಣ ಅಥವಾ ಉಂಗುರ, ಕಡಗಗಳನ್ನು ಧರಿಸುವುದು ನಿಷೇಧ. ಮಹಿಳಾ ಮತ್ತು ತೃತೀಯಲಿಂಗ ಮಹಿಳಾ ಅಭ್ಯರ್ಥಿಗಳಿಗೆ: ವಿಸ್ತಾರವಾದ ಕಸೂತಿ, ಹೂ, ಬೂಚ್ ಅಥವಾ ಬಟನ್‌ಗಳು ಹೊಂದಿರುವ ಉಡುಗೆ, ಪರ್ಣ ತೋಳಿನ ಬಟ್ಟೆ/ ಜೀನ್ಸ್ ಪ್ಯಾಂಟ್ ಧರಿಸಬಾರದು. ಅರ್ಧ ತೋಳಿನ ಬಟ್ಟೆಗಳನ್ನು ಮುಜುಗರವಾಗದಂತೆ ಧರಿಸಬೇಕು. ಎತ್ತರವಾದ ಹಿಮ್ಮಡಿಯ ಶೂ/ಚಪ್ಪಲಿ ಮತ್ತು ದಪ್ಪವಾದ ಅಡಿ ಭಾಗ ಹೊಂದಿರುವ ಶೂ/ ಚಪ್ಪಲಿ ಧರಿಸಬಾರದು. ಮಂಗಳಸೂತ್ರ ಮತ್ತು ಕಾಲುಂಗುರ ಹೊರತುಪಡಿಸಿ ಯಾವುದೇ ಲೋಹದ ಆಭರಣ ಧರಿಸುವಂತಿಲ್ಲ.