ಎಸ್.ಡಿ.ಎಂ: ನವ ವಿದ್ಯಾರ್ಥಿಗಳ ಸ್ವಾಗತ ಕಾರ್ಯಕ್ರಮ


Logo

Published Date: 14-Oct-2026 Link-Copied

ಎಸ್.ಡಿ.ಎಂ. ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯ ಪ್ರಥಮ ವರ್ಷದ 150 ವೈದ್ಯಕೀಯ ವಿದ್ಯಾರ್ಥಿಗಳ (ಬ್ಯಾಚ್ 2026-27) ಸ್ವಾಗತಕೋರುವ ಕಾರ್ಯಕ್ರಮವನ್ನು ಏರ್ಪಡಿಸಲಾಗಿತ್ತು. ಎಸ್.ಡಿ.ಎಂ. ವಿಶ್ವವಿದ್ಯಾಲಯದ ಉಪ ಕುಲಪತಿಗಳಾದ ಡಾ. ನಿರಂಜನ್ ಕುಮಾರ್ ಮತ್ತು ಇತರ ಗಣ್ಯರು ಸ್ವಾಗತಕೋರುವ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಕೆ.ಎಲ್.ಇ. ಸಂಸ್ಥೆಯ ಆಸ್ಪತ್ರೆ ಅಭಿವೃದ್ಧಿ ಮತ್ತು ಹೊಸ ಯೋಜನೆಗಳ ನಿರ್ದೇಶಕರು ಮತ್ತು ಹೆಸರಾಂತ ಮಕ್ಕಳ ತಜ್ಞರಾದ ಡಾ. ವಿ. ಡಿ. ಪಾಟೀಲ್ ಅವರು ಮುಖ್ಯ ಅತಿಥಿಗಳಾಗಿದ್ದರು. ಗೌರವಾನ್ವಿತ ಕುಲಪತಿಗಳಾದ ಡಾ.ಡಿ. ವೀರೇಂದ್ರ ಹೆಗ್ಗಡೆ ಅವರು ವಿದ್ಯಾರ್ಥಿಗಳಿಗೆ ಶುಭಕೋರುತ್ತಾ ಆಶೀರ್ವಚನ ನೀಡಿದರು. ಈ ಸಂದರ್ಭದಲ್ಲಿ ಉಪ ಕುಲಪತಿಗಳಾದ ಡಾ. ನಿರಂಜನ್ ಕುಮಾರ ಅವರು ಸಮಯೋಚಿತವಾಗಿ ಹೊಸ ವಿದ್ಯಾರ್ಥಿಗಳಿಗೆ ಎಸ್.ಡಿ.ಎಂ. ವೈದ್ಯಕೀಯ ಕಾಲೇಜು ಮತ್ತು ಆಡಳಿತ ಮಂಡಳಿಯ ಮೌಲ್ಯಗಳನ್ನು ವಿವರಿಸಿದರು. ಮುಖ್ಯ ಅತಿಥಿಗಳಾದ ಡಾ. ವಿ. ಡಿ. ಪಾಟೀಲ್ ಅವರು ಎಸ್.ಡಿ.ಎಂ. ವೈದ್ಯಕೀಯ ಕಾಲೇಜಿನಲ್ಲಿ ಪ್ರವೇಶ ಪಡೆದ ವಿದ್ಯಾರ್ಥಿಗಳನ್ನು ಅಭಿನಂದಿಸಿ, ಮಾತನಾಡುತ್ತಾ: ಉತ್ತಮ ವಿದ್ಯಾರ್ಥಿಗಳಾಗಲು ಮಾನವೀಯ ಗುಣಗಳೊಂದಿಗೆ ಸರ್ವ ಪ್ರಯತ್ನ ಮಾಡಬೇಕು. ವೈದ್ಯಕೀಯ ಶಿಕ್ಷಣವು ಅತ್ಯುತ್ತಮ ಗೌರವಾನ್ವಿತ ವೃತ್ತಿಯಾಗಿರುವುದರಿಂದ ಸಮಗ್ರತೆ ಮತ್ತು ನೀತಿ ಶಾಸ್ತ್ರದಿಂದ ದ್ವಿಮುಖರಾಗಬಾರದು. ಭವಿಷ್ಯದಲ್ಲಿ ಉತ್ತಮ ವೈದ್ಯರಾಗಲು ಸದಾ ಶಿಸ್ತು, ಸಹಾನುಭೂತಿ ಮತ್ತು ಕಠಿಣ ಪರಿಶ್ರಮ ಅತ್ಯಗತ್ಯ. ಪೋಷಕರ, ಶಿಕ್ಷಕರು ಮತ್ತು ಮಾರ್ಗದರ್ಶಕರ ತ್ಯಾಗ ಮತ್ತು ವೈದ್ಯರ ಸಫಲತೆಗೆ ಕಾರಣರಾಗಿರುವ ರೋಗಿಗಳಿಗೆ ಸದಾ ವಿನಮ್ರರಾಗಿರಬೇಕು. ರೋಗಿಗಳ ಸಮಸ್ಯೆಗಳನ್ನು ಆಲಿಸಿ, ಅವರನ್ನು ಸಮಾಧಾನಪಡಿಸಿ, ರೋಗಗಳನ್ನು ಗುಣಪಡಿಸುವ ಉತ್ತಮ ಗುಣವನ್ನು ಅಳವಡಿಸಿಕೊಳ್ಳಬೇಕು. ಉತ್ತಮ ವೈದ್ಯರಾಗಲು ಶಿಸ್ತು ಬದ್ಧತೇಯ ದೈನಂದಿನ ಚಟುವಟಿಕೆಗಳು ಮತ್ತು ಉತ್ತಮ ಪರಿಸರ ಸಹಕಾರಿಯಾಗುತ್ತದೆ. ದಿನವು ವೈದ್ಯಕೀಯ ಶಿಕ್ಷಣವನ್ನು ಆನಂದಿಸುವ ಮೂಲಕ ವೈದ್ಯಕೀಯ ಶಿಕ್ಷಣದ ಸವಾಲುಗಳನ್ನು ನಿಭಾಯಿಸಬಹುದು ಎಂದು ಹೇಳಿದರು. ಕಾರ್ಯನಿರ್ವಾಹಕ ನಿರ್ದೇಶಕಿಯವರಾದ ಪದ್ಮಲತಾ ನಿರಂಜನ್, ಉಪ ವೈದ್ಯಕೀಯ ನಿರ್ದೇಶಕರಾದ ಸಾಕೇತ್ ಶೆಟ್ಟಿ, ಸಹ ಉಪ ಕುಲಪತಿಗಳಾದ ವಿ. ಜೀವಂಧರ್ ಕುಮಾರ್, ಹಣಕಾಸು ಅಧಿಕಾರಿಗಳಾದ ವಿ. ಜಿ. ಪ್ರಭು, ಪರೀಕ್ಷಾ ನಿಯಂತ್ರಕರಾದ ಡಾ. ಸತ್ಯಬೋಧ ಗುತ್ತಲ್, ವೈದ್ಯಕೀಯ ಅಧೀಕ್ಷಕರಾದ ಡಾ. ಕಿರಣ್ ಹೆಗ್ಡೆ, ವಿಶ್ವವಿದ್ಯಾಲಯದ ಅಧಿಕಾರಿಗಳು, ಅಂಗ ಸಂಸ್ಥೆಗಳ ಮುಖ್ಯಸ್ಥರು, ಅಧ್ಯಾಪಕರು, ವಿದ್ಯಾರ್ಥಿಗಳು ಮತ್ತು ಅವರ ಪೋಷಕರು ಈ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. ಎಸ್.ಡಿ.ಎಂ. ವೈದ್ಯಕೀಯ ಕಾಲೇಜಿನ ಪ್ರಾಂಶುಪಾಲರಾದ ಡಾ. ವಿಜಯ್ ಕೆ. ಕುಲಕರ್ಣಿ ಅವರು ಅತಿಥಿಗಳನ್ನು ಸ್ವಾಗತಿಸಿದರು. ಕುಲಸಚಿವರಾದ ಡಾ. ಚಿದೇಂದ್ರ ಶೆಟ್ಟರ ಮುಖ್ಯ ಅತಿಥಿಗಳನ್ನು ಪರಿಚಯಿಸಿದರು. ಉಪ ಪ್ರಾಂಶುಪಾಲರುಗಳಾದ ಡಾ. ವಿದ್ಯಾ ಪಾಟೀಲ ವಿಭಾಗಗಳ ಮುಖ್ಯಸ್ಥರನ್ನು ಪರಿಚಯಿಸಿದರು ಹಾಗೂ ಡಾ. ಕಿರಣ ಐತಾಳ ಪ್ರಮಾಣವಚನ ಬೋಧಿಸಿದರು. ಡಾ. ಸ್ಟೀವ್ ಫರ್ನಾಡಿಸ್ ಮತ್ತು ಡಾ. ಸ್ಮೀತಾ ಕಾರ್ಯಕ್ರಮವನ್ನು ನಿರೂಪಿಸಿದರು. ಡಾ. ಮಂಜುನಾಥ ಹೊಸಮನಿ ವಂದರ್ನಾಪಣೆ ಸಲ್ಲಿಸಿದರು.

Recomendatoion img Recomendatoion img Recomendatoion img Recomendatoion img Recomendatoion img Recomendatoion img Recomendatoion img Recomendatoion img Recomendatoion img Recomendatoion img Recomendatoion img Recomendatoion img Recomendatoion img Recomendatoion img