ಇಂಡಿಯನ್ ಆರ್ಥೊಡಾಂಟಿಕ್ ಸೊಸೈಟಿಯ ರಾಷ್ಟ್ರೀಯ ಕಾರ್ಯಕ್ರಮ
Published Date: 18-Aug-2026 Link-Copied
ಎಸ್.ಡಿ.ಎಂ. ದಂತ ಮಹಾವಿದ್ಯಾಲಯದ ಕೃತಕ ದಂತ ವಿಭಾಗ ಮತ್ತು ಹುಬ್ಬಳ್ಳಿ-ಧಾರವಾಡ ಕೃತಕ ದಂತ ತಜ್ಞರ ಅಧ್ಯಯನ ಕೇಂದ್ರದ ಸಹಯೋಗದಲ್ಲಿ ಇಂಡಿಯನ್ ಆರ್ಥೊಡಾಂಟಿಕ್ ಸೊಸೈಟಿಯ ರಾಷ್ಟ್ರೀಯ ಕಾರ್ಯಕ್ರಮವಾದ ಐ.ಓ.ಎಸ್.- ಎಸ್.ಡಿ.ಎಂ. ಆರ್ಥೋಟೆಕ್ -2026 ಅನ್ನು ಆಗಸ್ಟ್ 17 ಮತ್ತು 18 ರಂದು ಎರಡು ದಿನಗಳ ಡಿಜಿಟಲ್ ಆರ್ಥೊಡಾಂಟಿಕ್ ಸಮ್ಮೇಳನವನ್ನು ಆಯೋಜಿಸಲಾಗಿತ್ತು. ಈ ಕಾರ್ಯಾಗಾರದಲ್ಲಿ ಭಾರತದಾದ್ಯಂತ ಸುಮಾರು 100ಕ್ಕೂ ಹೆಚ್ಚು ಹಿರಿಯ ದಂತ ವೈದ್ಯರು, ಶಿಕ್ಷಕರು ಮತ್ತು ಸ್ನಾತಕೋತ್ತರ ವಿದ್ಯಾರ್ಥಿಗಳು ಭಾಗವಹಿಸಿದ್ದರು. ಈ ಕಾರ್ಯಕ್ರಮವನ್ನು ಮುಖ್ಯ ಅತಿಥಿಗಳಾದ ಡಾ. ಶ್ರೀದೇವಿ ಪದ್ಮನಾಭನ್, ಅಧ್ಯಕ್ಷರು, ಇಂಡಿಯನ್ ಆರ್ಥೊಡಾಂಟಿಕ್ ಸೊಸೈಟಿ ಮತ್ತು ಗೌರವಾನ್ವಿತ ಅತಿಥಿಗಳಾದ ವಿ. ಜೀವಂಧರ್ ಕುಮಾರ್, ಸಹ ಉಪ ಕುಲಪತಿಗಳು, ಎಸ್.ಡಿ.ಎಂ. ವಿಶ್ವವಿದ್ಯಾಲಯ ಮತ್ತಿತರ ಗಣ್ಯರು ಉದ್ಘಾಟಿಸಿದರು. ಈ ಕಾರ್ಯಕ್ರಮದಲ್ಲಿ ಡಾ. ಬಲರಾಮ್ ನಾಯ್ಕ್, ಪ್ರಾಂಶುಪಾಲರು, ಎಸ್.ಡಿ.ಎಂ. ಡೆಂಟಲ್ ಕಾಲೇಜು, ಡಾ. ರೂಪಕ್ ನಾಯಕ್, ಮುಖ್ಯಸ್ಥರು, ಆರ್ಥೊಡಾಂಟಿಕ್ಸ್ ವಿಭಾಗ ಮತ್ತು ಸಂಘಟನಾ ಕಾರ್ಯದರ್ಶಿ ಡಾ. ಅನುಪಮಾ ವಿ. ಅವರು ಉಪಸ್ಥಿತರಿದ್ದರು. ವೈಜ್ಞಾನಿಕ ಸಮಿತಿಯ ಅಧ್ಯಕ್ಷರಾದ ಡಾ. ಹರ್ಷವರ್ಧನ್ ಕಿದಿಯೂರ್ ಅತಿಥಿಗಳನ್ನು ಸ್ವಾಗತಿಸಿದರು. ಹುಬ್ಬಳ್ಳಿ-ಧಾರವಾಡ ಕೃತಕ ದಂತ ತಜ್ಞರ ಅಧ್ಯಯನ ಕೇಂದ್ರದ ಸಂಚಾಲಕರಾದ ಡಾ. ಸಂಗಮೇಶ್ ಬಿ. ಅವರು ವಂದನಾರ್ಪಣೆ ಸಲ್ಲಿಸಿದರು.