ಫೆ. 1ರಿಂದ : ಮೂಡುಬಿದಿರೆ ಉತ್ಸವ ಮತ್ತು ಮ್ಯೂಸಿಕಲ್ ಡ್ಯಾನ್ಸಿಂಗ್ ವಾಟರ್ ಕೌಂಟರ್
Published Date: 01-Feb-2024 Link-Copied
ಮೂಡುಬಿದಿರೆಯ ಶಾಲಿಮಾರ್ ಹಾಲ್ ಬಳಿ ನ್ಯಾಷನಲ್ ಅಮ್ಯೂಸ್‌ಮೆಂಟ್ ಪಾರ್ಕ್ ಇವರಿಂದ ಮೂಡುಬಿದಿರೆ ಉತ್ಸವ ಮತ್ತು ಮ್ಯೂಸಿಕಲ್ ಡ್ಯಾನ್ಸಿಂಗ್ ವಾಟರ್ ಕೌಂಟರ್ ಇಂದಿನಿಂದ (ಫೆ. 1) ಪ್ರಾರಂಭಗೊಳ್ಳಲಿದೆ. ಮೂಡುಬಿದಿರೆಯಲ್ಲಿ ಪ್ರಪ್ರಥಮ ಬಾರಿಗೆ ಈ ಉತ್ಸವ ನಡೆಯುತ್ತಿದ್ದು, ಶಾಪಿಂಗ್, ಗೃಹೋಪಯೋಗಿ ವಸ್ತುಗಳು, ಸಿದ್ಧ ಉಡುಪುಗಳು, ಮಹಿಳೆಯರ ಇಮಿಟೇಷನ್ ಜ್ಯುವೆಲ್ಲರಿಗಳು, ಮಕ್ಕಳ ಆಟದ ಸಾಮಾಗ್ರಿಗಳು, ಶುಚಿ ರುಚಿಯಾದ ತಿಂಡಿ ತಿನಿಸುಗಳು, ಪುಟಾಣಿಗಳಿಗಾಗಿ ಕಿಡ್ಸ್ ರೈಡ್ಸ್, ಬೃಹತ್ ಅಮ್ಯೂಸ್‌ಮೆಂಟ್ ಪಾರ್ಕ್ ಹಾಗೂ ಇನ್ನೂ ಅನೇಕ ಮನರಂಜನೆಗಳು ಅಭ್ಯವಿರುತ್ತದೆಯೆಂದು ಸಂಘಟಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.