ದಂತ ಮಹಾವಿದ್ಯಾಲಯದ ಹಳೆಯ ವಿದ್ಯಾರ್ಥಿಗಳ ಸಮ್ಮಿಲನ 2025


Logo

Published Date: 09-Oct-2025 Link-Copied

ಸತ್ತೂರ, ಧಾರವಾಡ: ಎಸ್.ಡಿ.ಎಂ. ದಂತ ಮಹಾವಿದ್ಯಾಲಯದ ಹಳೆಯ ವಿದ್ಯಾರ್ಥಿಗಳ ಸಮ್ಮಿಲನ - 2025 ಎಸ್.ಡಿ.ಎಂ. ದಂತ ಮಹಾವಿದ್ಯಾಲಯದಲ್ಲಿ ದಿನಾಂಕ, ಅಕ್ಟೊಬರ್ 3 ಮತ್ತು 4, 2025ರಂದು “ಸ್ಪಂದನ” - ಹಳೆಯ ವಿದ್ಯಾರ್ಥಿಗಳ ಸಮ್ಮಿಲನವನ್ನು ಹಮ್ಮಿಕೋಳ್ಳಲಾಯಿತು. ಈ ಕಾರ್ಯಕ್ರಮದಲ್ಲಿ ದೇಶದ ವಿವಿಧ ಭಾಗಗಳಿಂದ 200ಕ್ಕೂ ಅಧಿಕ ಹಳೆಯ ವಿದ್ಯಾರ್ಥಿಗಳು ಭಾಗವಹಿಸಿದ್ದರು. ಈ ಕಾರ್ಯಕ್ರಮವನ್ನು ಮುಖ್ಯ ಅತಿಥಿಗಳಾದ ಶ್ರೀ ಅರವಿಂದ ಬೆಲ್ಲದ, ವಿರೋಧ ಪಕ್ಷದ ಉಪ ನಾಯಕರು, ಕರ್ನಾಟಕ ವಿಧಾನಸಭಾ, ಡಾ. ನಿರಂಜನ್ ಕುಮಾರ, ಉಪ ಕುಲಪತಿಗಳು, ಎಸ್.ಡಿ.ಎಂ. ವಿಶ್ವವಿದ್ಯಾಲಯ ಮತ್ತು ಡಾ. ತಿಮ್ಮಪ್ಪ ಹೆಗ್ಡೆ, ನಿರ್ದೇಶಕರು ಹಾಗೂ ಹಿರಿಯ ತಜ್ಞರು, ನಾರಾಯಣ ನರರೋಗ ಸಂಸ್ಥೆ, ಬೆಂಗಳೂರು ಕಾರ್ಯಕ್ರಮವನ್ನು ಉದ್ಘಾಟಿಸಿದರು. ಡಾ. ಬಲರಾಮ ನಾಯ್ಕ, ಪ್ರಾಂಶುಪಾಲರು ಮತ್ತು ಗೌರವ ಅಧ್ಯಕ್ಷರು, ಸ್ಪಂದನ ಹಳೆ ವಿದ್ಯಾರ್ಥಿಗಳ ಸಂಘ, ವಿ. ಜೀವಂಧರ ಕುಮಾರ, ಕಾರ್ಯದರ್ಶಿಗಳು, ಎಸ್.ಡಿ.ಎಂ. ಶಿಕ್ಷಣ ಸಂಸ್ಥೆ, ಧಾರವಾಡ ಈ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. ಗೌರವ ಅತಿಥಿಗಳಾದ ಡಾ. ನಿರಂಜನ್ ಕುಮಾರ ಅವರು ಮಾತನಾಡುತ್ತಾ: ಹಳೆಯ ವಿದ್ಯಾರ್ಥಿಗಳು ತಮ್ಮ ಶಿಕ್ಷಣ ಸಂಸ್ಥೆಗಳನ್ನು ಶ್ರೇಷ್ಠವನ್ನಾಗಿ ಮಾಡಬೇಕು. ಹಳೆಯ ವಿದ್ಯಾರ್ಥಿಗಳ ಸಮಾಜ ಸೇವೆಯು ಅವರ ವಿದ್ಯಾಭ್ಯಾಸದ ಸಂಸ್ಥೆಯ ಮೌಲ್ಯವನ್ನು ಹೆಚ್ಚಿಸುತ್ತದೆ. ಕೈಗೆಟುಕುವ ಬೆಲೆಯಲ್ಲಿ ಉತ್ತಮ ಚಿಕಿತ್ಸೆ ಮತ್ತು ಅತ್ಯುತ್ತಮ ತರಬೇತಿಯನ್ನು ಒದಗಿಸುವುದು ನಮ್ಮ ಕುಲಪತಿಗಳ ಗುರಿಯಾಗಿದೆ. ಎಸ್.ಡಿ.ಎಂ. ಸಂಸ್ಥೆಗಳು ನಮ್ಮ ಎಲ್ಲಾ ಹಳೆಯ ವಿದ್ಯಾರ್ಥಿಗಳನ್ನು “ಎಸ್.ಡಿ.ಎಂ. ಕುಟುಂಬ” ಎಂದು ಪರಿಗಣಿಸುತ್ತವೆ. ಉತ್ತಮ ಶಿಕ್ಷಣದ ಉದ್ದೇಶವು ಯಾವುದೇ ವೃತ್ತಿಪರರ ವಯಕ್ತಿಕ ಗುರಿಗಿಂತ ಹೆಚ್ಚಾಗಿರಬೇಕು. ಪ್ರತಿಯೊಬ್ಬ ಹಳೆಯ ವಿದ್ಯಾರ್ಥಿಯೂ ತಮ್ಮ ವಿದ್ಯಾರ್ಥಿಗಳಿಗೆ ಸ್ಫೂರ್ತಿಯಾಗಿರಬೇಕು. ಅರವಿಂದ್ ಬೆಲ್ಲದ್ ಅವರು ತಮ್ಮ ಸ್ಪೂರ್ತಿದಾಯಕ ಮತ್ತು ಪ್ರೇರಿತ ಮಾತುಗಳೊಂದಿಗೆ ಹಳೆಯ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿದರು. ಡಾ. ತಿಮ್ಮಪ್ಪ ಹೆಗ್ಡೆ ದಿಕ್ಸೂಚಿ ಭಾಷಣ ಮಾಡಿದರು. ಡಾ. ರೋಶನ ಶೆಟ್ಟಿ, ಅಧ್ಯಕ್ಷರು, ಹಳೆಯ ವಿದ್ಯಾರ್ಥಿಗಳ ಸಂಘ, ಅತಿಥಿಗಳನ್ನು ಸ್ವಾಗತಿಸಿದರು. ಡಾ. ಅಪೂರ್ವಾ ಮತ್ತು ಡಾ. ಮೇಘನಾ ಕಾರ್ಯಕ್ರಮವನ್ನು ನಿರೂಪಿಸಿದರು. ಡಾ. ರವಿ ಶಿರಹಟ್ಟಿ ಮತ್ತು ಡಾ. ಕಿರಣ ರೆಡ್ಡೆರ ಅವರು ಅರವಿಂದ ಬೆಲ್ಲದ ಮತ್ತು ಡಾ. ತಿಮ್ಮಪ್ಪ ಹೆಗ್ಡೆ ಅವರನ್ನು ಪರಿಚಯಿಸಿದರು. ಡಾ. ಮಹಿಮಾ ದಂಡ, ಕಾರ್ಯದರ್ಶಿ, ಸ್ಪಂದನ ಹಳೆಯ ವಿದ್ಯಾರ್ಥಿಗಳ ಸಂಘ, ವಂದನಾರ್ಪಣೆ ಸಲ್ಲಿಸಿದರು.

Recomendatoion img Recomendatoion img Recomendatoion img Recomendatoion img Recomendatoion img Recomendatoion img Recomendatoion img Recomendatoion img Recomendatoion img Recomendatoion img Recomendatoion img Recomendatoion img Recomendatoion img Recomendatoion img