ಧರ್ಮಸ್ಥಳ, ಜ.30: ಹಸ್ತಪ್ರತಿಗಳ ಸಂಶೋಧನೆ ಕುರಿತು ಒಡಂಬಡಿಕೆ ಪತ್ರ ಹಸ್ತಾಂತರ
Published Date: 31-Jan-2024 Link-Copied
ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಶಿಕ್ಷಣ ಸಂಸ್ಥೆಗಳ ಆಡಳಿತ ಮಂಡಳಿ ಅಧ್ಯಕ್ಷರಾದ ಧರ್ಮಸ್ಥಳದ ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆಯವರ ಗೌರವ ಉಪಸ್ಥಿತಿಯಲ್ಲಿ ಮಂಗಳವಾರ ಧರ್ಮಸ್ಥಳದಲ್ಲಿ ಹಾಸನದ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಆಯುರ್ವೇದ ಮಹಾವಿದ್ಯಾಲಯ ಮತ್ತು ಆಸ್ಪತ್ರೆ ಹಾಗೂ ಕೇಂದ್ರ ಸರ್ಕಾರದ ರಾಷ್ಟ್ರೀಯ ಭಾರತೀಯ ಆಯುರ್ವಿಜ್ಞಾನ ಸಂಪದ ಸಂಸ್ಥಾನ, ಹೈದರಾಬಾದ್ ಮಧ್ಯೆ ಹಸ್ತಪ್ರತಿಗಳ ಸಂಶೋಧನೆ ಕುರಿತು ಒಡಂಬಡಿಕೆ ಪತ್ರಕ್ಕೆ ಸಹಿ ಮಾಡಿ ಒಪ್ಪಿಗೆ ಸೂಚಿಸಲಾಯಿತು. ಆಯುರ್ವಿಜ್ಞಾನ ಸಂಪದ ಸಂಸ್ಥಾನದ ಹೈದರಾಬಾದ್‌ನ ಸಹಾಯಕ ನಿರ್ದೇಶಕ ಡಾ. ಗೋಲಿ ಪೆಂಚಲ ಪ್ರಸಾದ ಮತ್ತು ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಆಯುರ್ವೇದ ಮಹಾವಿದ್ಯಾಲಯ ಮತ್ತು ಆಸ್ಪತ್ರೆ ಹಾಸನದ ಪ್ರಾಂಶುಪಾಲರಾದ ಡಾ. ಪ್ರಸನ್ನ ಎನ್. ರಾವ್ ಮತ್ತಿತರರು ಉಪಸ್ಥಿತರಿದ್ದರು.