ಸತ್ತೂರು, ಧಾರವಾಡ: ನಾಯಕತ್ವ ತರಬೇತಿ ಶಿಬಿರ
Published Date: 03-Sep-2025 Link-Copied
ಎಸ್.ಡಿ.ಎಂ. ವಿಶ್ವವಿದ್ಯಾಲಯವು ತನ್ನ ಅಂಗ ಸಂಸ್ಥೆಗಳ ಆಯ್ದ ವಿದ್ಯಾರ್ಥಿಗಳಿಗಾಗಿ ಸೆಪ್ಟೆಂಬರ್ 1 ಮತ್ತು 2, 2025ರಂದು ಎರಡು ದಿನಗಳ ನಾಯಕತ್ವ ತರಬೇತಿ ಶಿಬಿರವನ್ನು ಏರ್ಪಡಿಸಲಾಗಿತ್ತು. ಎಸ್.ಡಿ.ಎಂ. ವಿಶ್ವವಿದ್ಯಾಲಯದಲ್ಲಿ ಸತತ ನಾಲ್ಕು ವರ್ಷಗಳಿಂದ ಮುಂಬೈನ, ಎಂ. ಆರ್. ಪೈ ಫೌಂಡೇಶನ್‌ನ ಸಹಯೋಗದೊಂದಿಗೆ ಈ ನಾಯಕತ್ವ ತರಬೇತಿ ಶಿಬಿರವನ್ನು ನಡೆಸಲಾಗುತ್ತಿದೆ. ಇಬ್ಬರು ತಜ್ಞ ನಾಯಕತ್ವ ತರಬೇತುದಾರರಾದ ಸಚಿನ್ ಕಾಮತ್ ಮತ್ತು ಸುಧೀರ್ ಪೈ ಅವರು ನಮ್ಮ ವಿದ್ಯಾರ್ಥಿಗಳಿಗೆ ತರಬೇತಿ ನೀಡಲು ಮುಂಬೈನ ಎಂ. ಆರ್. ಪೈ ಫೌಂಡೇಶನ್‌ನಿಂದ ಬಂದಿದ್ದರು. ಸುಮಾರು 100ಕ್ಕೂ ಹೆಚ್ಚು ವಿದ್ಯಾ ಗೀತಾ ಪೈ ಮತ್ತು ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳಾದ ಸ್ವಾತಿ ಕಪಾಡಿಯಾ ಅವರು ಈ ಕಾರ್ಯಕ್ರಮಕ್ಕೆ ವಿಶೇಷ ಅತಿಥಿಗಳಾಗಿ ಆಗಮಿಸಿದ್ದರು. ಗುರಿ ನಿಗದಿ ಮತ್ತು ಸಾಧನೆ-ಯಶಸ್ಸಿಗೆ ಮಾರ್ಗಸೂಚಿ, ಸಂವಹನ ಕೌಶಲ್ಯಗಳನ್ನು ತೀಕ್ಷ್ಣಗೊಳಿಸುವುದು, ಅಭ್ಯಾಸಗಳನ್ನು ಕರಗತ ಮಾಡಿಕೊಳ್ಳುವುದು-ವೈಯಕ್ತಿಕ ಸಾಮರ್ಥ್ಯವನ್ನು ಹೆಚ್ಚಿಸಿಕೊಳ್ಳುವುದು, ಸರಿಯಾದ ನಿರ್ಧಾರ ತೆಗೆದುಕೊಳ್ಳುವುದು ಮತ್ತು ಸಮಸ್ಯೆ ಪರಿಹರಿಸುವುದು, ಅಗತ್ಯ ತಂಡದ ಕೆಲಸ ಕೌಶಲ್ಯಗಳನ್ನು ಹೆಚ್ಚಿಸುವುದು, ತನ್ನಲ್ಲಿ ನಂಬಿಕೆ ಇಡುವುದು, ಅರ್ಥಪೂರ್ಣ ಸಂಪರ್ಕಗಳನ್ನು ನಿರ್ಮಿಸುವುದು ಎಂಬ ವಿಷಯಗಳು ಮೇಲೆ ಎರಡು ದಿನಗಳ ತರಬೇತಿಯನ್ನು ನೀಡಲಾಯಿತು. ಗೀತಾ ಪೈ ಅವರು ವಿದ್ಯಾಥಿಗಳನ್ನುದ್ದೇಶಿಸಿ ಮಾತನಾಡುತ್ತಾ: ವಿದ್ಯಾರ್ಥಿಗಳು ವೃತ್ತಿಪರ ನೀತಿ ಶಾಸ್ತ್ರವನ್ನು ನಿಕಟವಾಗಿ ಗಮನಿಸುತ್ತಾ ತಮ್ಮ ಜೀವನದಲ್ಲಿ ಅನುಸರಿಸಬೇಕು. ಆರೋಗ್ಯ ವೃತ್ತಿಪರರು ಅತೀ ಕಾಳಜಿಯಿಂದ ಉತ್ತಮ ಚಿಕಿತ್ಸೆ ನೀಡಬೇಕು. ಪ್ರತಿಯೊಬ್ಬ ವಿದ್ಯಾರ್ಥಿಯು ತಮ್ಮಲ್ಲಿ ನಾಯಕತ್ವ ಗುಣಗಳನ್ನು ಬೆಳೆಸಿಕೊಳ್ಳಬೇಕು. ಲಭ್ಯವಿರುವ ಅವಕಾಶಗಳನ್ನು ಸರಿಯಾಗಿ ಬಳಸಿ, ಉತ್ತಮ ನಾಯಕರಾಗಬೇಕು. ಎಸ್.ಡಿ.ಎಂ. ದಂತ ಕಾಲೇಜಿನ ಪ್ರಾಂಶುಪಾಲರಾದ ಡಾ. ಬಲರಾಮ್ ನಾಯಕ್ ಅವರು ಮಾತನಾಡುತ್ತಾ, ನಾವು ಉತ್ತಮ ಅಭ್ಯಾಸಗಳನ್ನು ಅನುಸರಿಸಿ ದೀರ್ಘಕಾಲದವರೆಗೆ ಉಳಿಸಿಕೊಳ್ಳಬೇಕು. ಆರೋಗ್ಯ ಸೇವಾ ಸಿಬ್ಬಂದಿಗಳು ಸರಿಯಾದ ಸಂವಹನ ಮತ್ತು ಕೌಶಲ್ಯಗಳು ಅವಶ್ಯಕವಾಗಿದೆ. ಎಸ್.ಡಿ.ಎಂ. ವಿಶ್ವವಿದ್ಯಾಲಯವು ನಾಯಕತ್ವ ಗುಣಗಳನ್ನು ಅಭಿವೃದ್ಧಿಪಡಿಸಲು ಅನೇಕ ಅವಕಾಶಗಳನ್ನು ಒದಗಿಸುತ್ತದೆ. ಉಪ ಕುಲಪತಿಗಳಾದ ಡಾ. ನಿರಂಜನ್ ಕುಮಾರ್ ಅವರು ಗೀತಾ ಪೈ ಮತ್ತು ಸ್ವಾತಿ ಕಪಾಡಿಯಾ ಅವರನ್ನು ಸನ್ಮಾನಿಸಿದರು. ಸಹ ಉಪ ಕುಲಪತಿಗಳಾದ ಜೀವಂಧರ್ ಕುಮಾರ್, ಗೀತಾ ಎಂ.ಆರ್. ಪೈ ವಿದ್ಯಾರ್ಥಿಗಳಿಗೆ ಪ್ರಮಾಣಪತ್ರಗಳನ್ನು ವಿತರಿಸಿದರು. ಉದ್ಘಾಟನಾ ಕಾರ್ಯಕ್ರಮದ ಸಂದರ್ಭದಲ್ಲಿ ಸಂಶೋಧನಾ ನಿರ್ದೇಶಕರಾದ ಡಾ. ಕೆ. ಸತ್ಯಮೂರ್ತಿ ಅವರು ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿದರು. ಎಸ್.ಡಿ.ಎಂ. ವಿಶ್ವವಿದ್ಯಾಲಯದ ಮುಖ್ಯ ಸಾರ್ವಜನಿಕ ಸಂಪರ್ಕಾಧಿಕಾರಿಗಳಾದ ಬಾಬಣ್ಣ ಶೆಟ್ಟಿಗಾರ್ ಅವರು ಕಾರ್ಯಕ್ರಮವನ್ನು ನಿರೂಪಿಸಿ, ವಂದನಾರ್ಪಣೆ ಸಲ್ಲಿಸಿದರು.