ಸತ್ತೂರು, ಧಾರವಾಡ: ನಾನ್ ಇನ್ವ್ಸಿವ್ ವೆಂಟಿಲೇಷನ್ ಕುರಿತು ಒಂದು ದಿನದ ಕಾರ್ಯಾಗಾರ
Published Date: 27-May-2025 Link-Copied
ಎಸ್.ಡಿ.ಎಂ. ವೈದ್ಯಕೀಯ ಕಾಲೇಜಿನ ತುರ್ತು ಚಿಕಿತ್ಸಾ ವಿಭಾಗದಿಂದ 25 ಮೇ 2025 ರಂದು “ಆಮ್ಲಜನಕ ವಿತರಣಾ ಸಾಧನಗಳು” ಎಂಬ ವಿಷಯದೊಂದಿಗೆ “ನಾನ್ ಇನ್ವ್ಸಿವ್ ವೆಂಟಿಲೇಷನ್” ಕುರಿತು ಒಂದು ದಿನದ ಕಾರ್ಯಾಗಾರವನ್ನು ಏರ್ಪಡಿಸಲಾಗಿತ್ತು. ಈ ಕಾರ್ಯಾಗಾರದಲ್ಲಿ ಉತ್ತರ ಕರ್ನಾಟಕದ ವಿವಿಧ ವೈದ್ಯಕೀಯ ಕಾಲೇಜುಗಳಿಂದ ಸುಮಾರು 170ಕ್ಕೂ ಹೆಚ್ಚು ಅಧ್ಯಾಪಕರು ಮತ್ತು ವೈದ್ಯಕೀಯ ವಿದ್ಯಾರ್ಥಿಗಳು ಭಾಗವಹಿಸಿದ್ದರು. ಎಸ್.ಡಿ.ಎಂ. ವೈದ್ಯಕೀಯ ಕಾಲೇಜಿನ ಶ್ವಾಸಕೋಶ ವಿಭಾಗದ ಮುಖ್ಯಸ್ಥರಾದ ಡಾ. ಸಂಜಯ್, ಹುಬ್ಬಳ್ಳಿಯ ಕರ್ನಾಟಕ ವೈದ್ಯಕೀಯ ವಿಜ್ಞಾನ ಸಂಸ್ಥೆಯ ಅರವಳಿಕೆ ವಿಭಾಗದ ಮುಖ್ಯಸ್ಥರಾದ ಡಾ. ಮಾಧುರಿ ಕುರ್ದಿ, ಕೆ.ಎಲ್.ಇ ಬೆಳಗಾವಿಯ ತುರ್ತು ಚಿಕಿತ್ಸಾ ವಿಭಾಗದ ಮುಖ್ಯಸ್ಥರಾದ ಡಾ. ಶ್ರೀನಿವಾಸ್ ಕುಲಕರ್ಣಿ, ಹುಬ್ಬಳ್ಳಿಯ ಜೆಜಿಎಂಎಂ ವೈದ್ಯಕೀಯ ಕಾಲೇಜಿನ ಸಹಾಯಕ ಪ್ರಾಧ್ಯಾಪಕರಾದ ಡಾ. ಶ್ರೀಕಾಂತ್ ಹಿರೇಮಠ, ಬಿಜಾಪುರದ ಬಿ.ಎಲ್.ಡಿ.ಇ. ತುರ್ತು ಚಿಕಿತ್ಸಾ ವಿಭಾಗದ ಡಾ. ಉದಯಕುಮಾರ್ ಜೆ ಖಾಸಗೆ, ಕೆ.ಎಲ್.ಇ. ಬೆಳಗಾವಿಯ ಡಾ. ಗುರುಪ್ರಸಾದ್ ಆಂಟಿನ್ ಕಾರ್ಯಾಗಾರದ ಕುರಿತು ವಿಶೇಷ ತಜ್ಞ ಉಪನ್ಯಾಸ ನೀಡಿದರು. ಡಾ. ಸುಚಿತಾ ಹಾಗೂ ಡಾ. ನರೇಂದ್ರ ರೆಡ್ಡಿ ಅವರು ಅತಿಥಿಗಳನ್ನು ಸ್ವಾಗತಿಸಿ, ಕಾರ್ಯಕ್ರಮವನ್ನು ನಿರೂಪಿಸಿದರು. ಎಸ್.ಡಿ.ಎಂ. ವೈದ್ಯಕೀಯ ಕಾಲೇಜಿನ ತುರ್ತು ಚಿಕಿತ್ಸಾ ವಿಭಾಗದ ಮುಖ್ಯಸ್ಥರಾದ ಡಾ. ವಿಜಯಲಕ್ಷ್ಮೀ ಕಾರ್ಯಗಾರದ ಪ್ರಾಸ್ತಾವಿಕ ಭಾಷಣವನ್ನು ನೀಡಿದರು. ಡಾ. ರಜನಿಕಾಂತ ವಂದನಾರ್ಪಣೆ ಸಲ್ಲಿಸಿದರು.