ಎಕ್ಸಲೆಂಟ್: ಸ್ಕೌಟ್ಸ್ ಗೈಡ್ಸ್ ನಾಲ್ಕು ದಿನದ ಬೇಸಿಗೆ ಶಿಬಿರ ಜ್ಞಾನ ರಶ್ಮಿ ಉದ್ಘಾಟನೆ
Published Date: 29-Mar-2025 Link-Copied
ಮೂಡುಬಿದಿರೆ: ಎಕ್ಸಲೆಂಟ್ ಶಿಕ್ಷಣ ಸಂಸ್ಥೆಯ ಆಶ್ರಯದಲ್ಲಿ ಸ್ಕೌಟ್ಸ್ ಗೈಡ್ಸ್ ನಾಲ್ಕು ದಿನದ ಬೇಸಿಗೆ ಶಿಬಿರ ಜ್ಞಾನ ರಶ್ಮಿ. ಇದರ ಉದ್ಘಾಟನೆಯನ್ನು ಖ್ಯಾತ ರಂಗಕರ್ಮಿ ರಾಷ್ಟ್ರಪ್ರಶಸ್ತಿ ವಿಜೇತ ಡಾಕ್ಟರ್ ಜೀವನ್ ರಾಮ್ ಸುಳ್ಯ ಉದ್ಘಾಟಿಸಿ, ಸಮಾಜದಲ್ಲಿ ಸಾಧಕ ನೆನೆಸಿಕೊಳ್ಳಲು ಹಲವು ದಿನಗಳ ನಿದ್ದೆ ಹಸಿವು ಸಮಯ ಇತ್ಯಾದಿಗಳ ಪರಿವೇ ಇಲ್ಲದೆ ಪರಿಶ್ರಮ ಪಟ್ಟರೆ ಯಶಸ್ಸು ಕಟ್ಟಿಟ್ಟ ಬುತ್ತಿ. ವಿದ್ಯಾರ್ಥಿಗಳಲ್ಲಿ ಸುಪ್ತ ಪ್ರತಿಭೆಗಳಿದ್ದು ಹೊರತೆಗೆಯಲು ಈ ತರದ ಶಿಬಿರಗಳು ಅನುಕೂಲಕರವಾಗುತ್ತದೆ ಎಂದು ಅಭಿಪ್ರಾಯ ಪಟ್ಟರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ ಸಂಸ್ಥೆಯ ಅಧ್ಯಕ್ಷರಾದ ಯುವರಾಜ್ ಜೈನ್ ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಬದುಕಬೇಕು ಅಂದರೆ ಜ್ಞಾನ ದೊಂದಿಗೆ ಈಜಬೇಕು. ತಾಂತ್ರಿಕ ಯುಗದಲ್ಲಿ ಜ್ಞಾನಕ್ಕೆ ಬೆಲೆ ಬರುವುದು ಸಕಲ ವಿದ್ಯೆಯಿಂದ. ಮಕ್ಕಳು ಸಾಧ್ಯವಾದಷ್ಟು ಸಿಗುವ ಅವಕಾಶಗಳನ್ನು ಸದುಪಯೋಗಪಡಿಸಿಕೊಂಡು ಪ್ರತಿಭೆಯನ್ನು ಹೊರೆಸು ಚೆಲ್ಲಬೇಕು. ಆಗ ಸಮಾಜದ ಆಸ್ತಿಯಾಗುತ್ತಾರೆ ಮತ್ತು ಅತ್ಯುತ್ತಮ ಗೌರವ ಸಿಗುತ್ತದೆ ಎಂದರು. ವೇದಿಕೆಯ ಮೇಲೆ ಎಕ್ಸಲೆಂಟ್ ಸಿಬಿಎಸ್‌ಸಿ ಸಂಸ್ಥೆಯ ಪ್ರಾಂಶುಪಾಲರಾದ ಸುರೇಶ, ಸ್ಕೌಟ್ ಮತ್ತು ಗೈಡ್ಸ್ ಶಿಕ್ಷಕರು ಉಪಸ್ಥಿತರಿದ್ದರು. ಕಲಾ ಶಿಕ್ಷಕ ಭಾಸ್ಕರ್ ನೆಲ್ಯಾಡಿಯವರು ಅತಿಥಿ ಪರಿಚಯಿಸಿ, ಸುಧೀಕ್ಷಾ ಸ್ವಾಗತಿಸಿ, ಮಾನಿತಾ ವಂದಿಸಿ, ಕಾರ್ಯಕ್ರಮವನ್ನು ಲಕ್ಷ್ಮೀ ನಿರೂಪಿಸಿದರು.