ಜ. 11, 12: ಮಂಗಳೂರಿನಲ್ಲಿ ಬೀಚ್ ಉತ್ಸವ
Published Date: 07-Jan-2025 Link-Copied
ಮಂಗಳೂರು, ಜ.6: ಕರಾವಳಿ ಉತ್ಸವದ ಅಂಗವಾಗಿ ನಡೆಯುವ ಬಹುನಿರೀಕ್ಷಿತ ಬೀಚ್ ಉತ್ಸವವು ಜ. 11 ಮತ್ತು 12ರಂದು ಪಣಂಬೂರು ಸಮೀಪದ ತಣ್ಣೀರುಬಾವಿ ಬೀಚ್‌ನಲ್ಲಿ ನಡೆಯಲಿದೆ. ರೋಹನ್ ಕಾರ್ಪೊರೇಷನ್ ಸಹಯೋಗದೊಂದಿಗೆ ನಡೆಯುವ ಬೀಚ್ ಉತ್ಸವದಲ್ಲಿ ಎರಡು ದಿನಗಳ ಕಾಲ ಆಕರ್ಷಕ ಸಂಗೀತ ಸಾಂಸ್ಕೃತಿಕ ಮತ್ತು ಕ್ರೀಡಾ ಕಾರ್ಯಕ್ರಮಗಳು ನಡೆಯಲಿವೆ. ಜ. 11ರಂದು ಸಂಜೆ 6 ಗಂಟೆಗೆ ನೃತ್ಯೋತ್ಸವ, 7.30ಕ್ಕೆ ಕದ್ರಿ ಮಣಿಕಾಂತ್ ಲೈವ್ ನಡೆಯಲಿದೆ. ಜ. 12ರಂದು ಬೆಳಗ್ಗೆ 5.30ಕ್ಕೆ ಯೋಗ, 6.30ಕ್ಕೆ ಉದಯರಾಗ, 9ಕ್ಕೆ ಜಲ ಕ್ರೀಡೆ, 9:30ಕ್ಕೆ ಮರಳು ಶಿಲ್ಪ ಸ್ಪರ್ಧೆ, 5.30ಕ್ಕೆ ನೃತ್ಯೋತ್ಸವ, 6.30ಕ್ಕೆ ಸಮಾರೋಪ ಸಮಾರಂಭ, 7.30 ರಘು ದೀಕ್ಷಿತ್ ಪ್ರಾಜೆಕ್ಟ್ ಲೈವ್ ನಡೆಯಲಿದೆ ಎಂದು ಪ್ರಕಟನೆ ತಿಳಿಸಿದೆ.