Wed, Apr 30, 2025
2024-25ನೇ ಸಾಲಿನ ನರ್ಸಿಂಗ್ ವಿದ್ಯಾರ್ಥಿಗಳ ಹೊಸ ಬ್ಯಾಚ್‌ನ ಸ್ವಾಗತ ಕಾರ್ಯಕ್ರಮ
ಸತ್ತೂರು, ಧಾರವಾಡ: ಎಸ್.ಡಿ.ಎಂ. ಕಾಲೇಜ್ ಆಫ್ ನರ್ಸಿಂಗ್‌ನಲ್ಲಿ 2024-25 ನೇ ಸಾಲಿನ ನರ್ಸಿಂಗ್ ವಿದ್ಯಾರ್ಥಿಗಳ ಹೊಸ ಬ್ಯಾಚ್‌ನ ಸ್ವಾಗತ ಕಾರ್ಯಕ್ರಮವನ್ನು ಏರ್ಪಡಿಸಲಾಗಿತ್ತು. ಸುಮಾರು 125 ಬಿ.ಎಸ್ಸಿ., ಎಂ.ಎಸ್ಸಿ. ಮತ್ತು ಜನರಲ್ ನರ್ಸಿಂಗ್ ವಿದ್ಯಾರ್ಥಿಗಳು ಪ್ರತಿಜ್ಞೆ ಸ್ವೀಕರಿಸಿದರು. ಎಸ್.ಡಿ.ಎಂ. ವಿಶ್ವವಿದ್ಯಾಲಯದ ಉಪ ಕುಲಪತಿಗಳಾದ ಡಾ. ನಿರಂಜನ ಕುಮಾರ್, ಕಾರ್ಯನಿರ್ವಾಹಕ ನಿರ್ದೇಶಕಿಯವರಾದ ಪದ್ಮಲತಾ ನಿರಂಜನ್ ಅವರು ಸ್ವಾಗತ ಕಾರ್ಯಕ್ರಮವನ್ನು ಉದ್ಘಾಟಿಸಿ, ಮಾತನಾಡುತ್ತಾ: ನರ್ಸಿಂಗ್ ವೃತ್ತಿಯು ರೋಗಿಗಳ ಆರೋಗ್ಯದ ಬಗ್ಗೆ ಕಾಳಜಿ ವಹಿಸುವ ಉದಾತ್ತ ವೃತ್ತಿಯಾಗಿದೆ. ನರ್ಸಿಂಗ್ ಸೇವೆಯು ಪವಿತ್ರ ಮತ್ತು ಮಹತ್ವದ್ದಾಗಿರುವದರಿಂದ ನರ್ಸಿಂಗ್ ಸೇವೆಗೆ ಸೇರುವುದು ಬುದ್ಧಿವಂತ ವಿದ್ಯಾರ್ಥಿಗಳ ನಿರ್ಧಾರವಾಗಿದೆ. ಎಸ್.ಡಿ.ಎಂ. ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯು ವಿದ್ಯಾರ್ಥಿಗಳಿಗೆ ಅತ್ಯುತ್ತಮ ಸೌಲಭ್ಯದೊಂದಿಗೆ ಸಮಗ್ರ ಅನುಭವವನ್ನು ನೀಡುತ್ತದೆ. ಹೊಸ ಜ್ಞಾನವನ್ನು ಪಡೆದುಕೊಳ್ಳುವಾಗ, ವೃತ್ತಿಗೆ ನಮ್ಮ ಬದ್ಧತೆಯು ಅಷ್ಟೇ ಮೌಲ್ಯವನ್ನು ಸೇರಿಸುತ್ತದೆ ಆರೋಗ್ಯ ಸಮಸ್ಯೆಗಳಿಗೆ ಕಾಳಜಿ ಮತ್ತು ಸಹಾನುಭೂತಿಯಿಂದ ಪರಿಹಾರ ನೀಡಲು ರೋಗಿಗಳ ಕರೆಗೆ ತಕ್ಷಣ ಪ್ರತಿಕ್ರೀಯಿಸಬೇಕು. ಯಶಸ್ವಿ ಆರೋಗ್ಯ ವೃತ್ತಿಪರರಾಗಲು ವೃತ್ತಿಯಲ್ಲಿ ಕಠಿಣ ಪರಿಶ್ರಮ ಮತ್ತು ನ್ಯಾಯ ಒದಗಿಸಬೇಕು. ಈ ಸಮಾರಂಭದಲ್ಲಿ ಆಡಳಿತ ನಿರ್ದೇಶಕರಾದ ಸಾಕೇತ್ ಶೆಟ್ಟಿ, ವೈದ್ಯಕೀಯ ಅಧೀಕ್ಷಕರಾದ ಡಾ. ಕಿರಣ್ ಹೆಗ್ಡೆ, ನರ್ಸಿಂಗ್ ಕಾಲೇಜಿನ ಪ್ರಾಂಶುಪಾಲರಾದ ಡಾ. ಪ್ರಸನ್ನ ದೇಶಪಾಂಡೆ, ನರ್ಸಿಂಗ್ ಅಧೀಕ್ಷಕಿಯವರಾದ ಮಂಜುಳಾ ಕೆ.ಬಿ. ಮೊದಲಾದವರು ಉಪಸ್ಥಿತರಿದ್ದರು. ಡಾ. ನಾಗೇಶ ಅಜ್ಜವಾಡಿಮಠ ಅತಿಥಿಗಳನ್ನು ಸ್ವಾಗತಿಸಿದರು. ಡಾ. ತಿಲಕ ಜೋಶಿ ಕಾರ್ಯಕ್ರಮ ನಿರೂಪಿಸಿದರು. ಪ್ರೊ. ಮೆಟಿಲ್ಡಾ ಬಿಜಾಪುರ ವಂದನಾರ್ಪಣೆ ಸಲ್ಲಿಸಿದರು.