ಸಿರಿ ವಸ್ತು ಪ್ರದರ್ಶನ


Logo

Published Date: 18-Oct-2024 Link-Copied

ಧಾರವಾಡದ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ವೈದ್ಯಕೀಯ ಮಹಾವಿದ್ಯಾಲಯದ ಆವರಣದಲ್ಲಿ ದಿನಾಂಕ 18 ಅಕ್ಟೋಬರ್, 2024 ರಂದು ಶ್ರೀ ಧರ್ಮಸ್ಥಳ ‘ಸಿರಿ’ ಗ್ರಾಮೋದ್ಯೋಗ ಸಂಸ್ಥೆಯ ವತಿಯಿಂದ ಖಾದಿ ಮತ್ತು ಕಾಟನ್ ಬಟ್ಟೆಗಳ ರಿಯಾಯತಿ ದರದಲ್ಲಿ ವಸ್ತು ಪ್ರದರ್ಶನ ಮಳಿಗೆಯನ್ನು ಎಸ್.ಡಿಎಂ. ವಿಶ್ವವಿದ್ಯಾಲಯದ ಉಪಕುಲಪತಿಗಳಾದ ಡಾ. ನಿರಂಜನಕುಮಾರ, ಕಾರ್ಯನಿರ್ವಾಹಕ ನಿರ್ದೇಶಕಿಯವರಾದ ಪದ್ಮಾಲತಾ ನಿರಂಜನ್, ವೈದ್ಯಕೀಯ ಉಪ ಅಧೀಕ್ಷಕರಾದ ಡಾ. ಮಖ್ದೂಮ ಕಿಲ್ಲೆದ್ದಾರ ಅವರು ದೀಪ ಬೆಳಗಿಸುವ ಮೂಲಕ ಮಳಿಗೆಯನ್ನು ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಡಾ. ನಿರಂಜನಕುಮಾರರವರು ಪೂಜ್ಯ ಶ್ರೀ ಡಿ. ವೀರೇಂದ್ರ ಹೆಗ್ಗಡೆಯವರ ಆಶಯದಂತೆ ಗ್ರಾಮೀಣ ಬಡ ಮಹಿಳೆಯರಿಗೆ ಅನುಕೂಲವಾಗುವಂತೆ ಮತ್ತು ಮಹಿಳಾ ಸಬಲೀಕರಣಗೊಳಿಸಲು ‘ಸಿರಿ’ ಎಂಬ ಸಂಸ್ಥೆಯನ್ನು ಹುಟ್ಟು ಹಾಕಿದರು ಮತ್ತು ಸಾರ್ವಜನಿಕರು ಹೆಚ್ಚು ಖಾದಿ ಮತ್ತು ಕಾಟನ್ ಬಟ್ಟೆಗಳನ್ನು ಉಪಯೋಗಿಸುವುದರಿಂದ ಆರೋಗ್ಯಕ್ಕೂ ಒಳ್ಳೆಯದು ಮತ್ತು ಗ್ರಾಮೀಣ ಬಡ ಮಹಿಳೆಯರಿಗೆ ಉತ್ತೇಜನ ನೀಡಿದಂತೆ ಆಗುತ್ತದೆ ಎಂದು ತಿಳಿಸಿದರು. ಈ ಸಂದರ್ಭದಲ್ಲಿ ವಸ್ತು ಪ್ರದರ್ಶನದ ವ್ಯವಸ್ಥಾಪಕರಾದ ನಾಗಕುಮಾರ ಜೈನರವರು ಮತ್ತು ಮಾರಾಟ ಮಳಿಗೆ ಪ್ರತಿನಿಧಿಯಾದಂತಹ ಮಲ್ಲಿಕಾರ್ಜುನ ಹೊಸಮನಿ ಮತ್ತಿತರರು ಉಪಸ್ಥಿತರಿದ್ದರು. ಈ ಮಾರಾಟ ಮಳಿಗೆಯು 18/10/2024 ರಿಂದ 31/10/2024 ರವರೆಗೆ ರಿಯಾಯಿತಿ ದರದಲ್ಲಿ ಲಭ್ಯವಿರುತ್ತದೆ. ಸಾರ್ವಜನಿಕರು ಇದರ ಸದುಪಯೋಗ ಪಡೆದುಕೊಳ್ಳಬೇಕೆಂದು ಕೇಳಿಕೊಳ್ಳಲಾಗಿದೆ.

Recomendatoion img Recomendatoion img Recomendatoion img Recomendatoion img Recomendatoion img Recomendatoion img Recomendatoion img Recomendatoion img Recomendatoion img Recomendatoion img Recomendatoion img Recomendatoion img Recomendatoion img Recomendatoion img