Fri, May 2, 2025

Fri, May 2, 2025


ರುಡ್ ಸೆಟ್ ಸಂಸ್ಥೆಯ ಶಿಬಿರಾರ್ಥಿಗಳಿಂದ ಸ್ವಚ್ಛತಾ ಹಿ ಸೇವಾ 2024 ಸ್ವಚ್ಛತಾ ಕಾರ್ಯಕ್ರಮ


Logo

Published Date: 21-Sep-2024

ಈ ವರ್ಷ, 'ಸ್ವಭಾವ ಸ್ವಚ್ಛತಾ ಸಂಸ್ಕಾರ ಸ್ವಚ್ಛತಾ' (ಸ್ವಭಾವ ಸ್ವಚ್ಚತಾ ಸಂಸ್ಕಾರ) ಎಂಬ ವಿಷಯದೊಂದಿಗೆ 'ಸ್ವಚ್ಛತಾ ಹಿ ಸೇವಾ' ಪಾಕ್ಷಿಕವನ್ನು ಸೆಪ್ಟೆಂಬರ್ 14 ರಿಂದ ಅಕ್ಟೋಬರ್ 1 ರವರೆಗೆ ಆಚರಿಸಲಾಗುತ್ತದೆ. ಸ್ವಚ್ಛತಾ 2ನೇ ಅಕ್ಟೋಬರ್ 2024 ರಂದು ಸ್ವಚ್ಛ ಭಾರತ್ ದಿವಸ್‌ಗೆ ಪೂರ್ವಭಾವಿಯಾಗಿ. ಉಜಿರೆ ರುಡ್ ಸೆಟ್ ಸಂಸ್ಥೆಯಲ್ಲಿ ತರಬೇತಿ ಪಡೆಯುತ್ತಿರುವ ಶಿಬಿರಾರ್ಥಿಗಳು ಭಾರತ ಸರಕಾರದ ಪ್ರಧಾನಿಯವರ ಅಶಯದಂತೆ ಜನರ ಭಾಗವಹಿಸುವ ಮೂಲಕ ಸ್ವಚ್ಛ ಭಾರತ ನಿರ್ಮಾಣದಲ್ಲಿ ಕೈ ಜೊಡಿಸುವ ಸಲುವಾಗಿ ಹಾಗೂ ಡಾ. ಡಿ. ವೀರೇಂದ್ರ ಹೆಗ್ಗಡೆಯವರ ಯೋಚನೆಯಂತೆ ರುಡ್ ಸೆಟ್ ಸಂಸ್ಥೆಯಿಂದ ಸಿದ್ಧವನದ ಬಸ್ ತಂಗುದಾಣದವರೆಗೆ ಸ್ವಚ್ಚತಾ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು. ಮೊದಲಿಗೆ ಶಿಬಿರಾರ್ಥಿಗಳಿಗೆ ಈ ವರ್ಷ, 'ಸ್ವಭಾವ ಸ್ವಚ್ಛತಾ ಸಂಸ್ಕಾರ ಸ್ವಚ್ಛತಾ’ ಮಹತ್ವದ ಬಗ್ಗೆ ತಿಳಿಸಿ ನಂತರ ರಸ್ತೆಯ ಎರಡು ಬದಿಗಳಲ್ಲಿ ಇದ್ದ ಕಸಗಳನ್ನು ಸ್ವಚ್ಛಗೊಳಿಸಲಾಯಿತು. ಈ ಕಾರ್ಯಕ್ರಮದಲ್ಲಿ ಸಂಸ್ಥೆಯ‌ ನಿರ್ದೇಶಕರಾದ ಅಜೇಯ, ಉಪನ್ಯಾಸಕರುಗಳಾದ ಅಬ್ರಹಾಂ ಜೇಮ್ಸ್, ಅನಸೂಯಾ, ಕರುಣಾಕರ ಜೈನ್, ಲೋಹಿತ್ ಜೈನ್, ಉದ್ಯೋಗಿಗಳಾದ ಕಾಶ್ಮೀರ್ ಡಿ’ ಸೋಜಾ, ಪ್ರಸಾದ್, ರಶ್ಮಿ, ಪ್ರವೀಣ್, ಕೂಸಪ್ಪ, ಸುರೇಶ್ ಗೌಡ ಭಾಗವಹಿಸಿದ್ದರು.

Recomendatoion img Recomendatoion img Recomendatoion img Recomendatoion img Recomendatoion img Recomendatoion img Recomendatoion img Recomendatoion img Recomendatoion img Recomendatoion img Recomendatoion img Recomendatoion img Recomendatoion img Recomendatoion img Recomendatoion img