ಅಖಿಲ ಭಾರತ ಥಲ್ ಸೈನಿಕ್ ಕ್ಯಾಂಪ್ ನಲ್ಲಿ ಸಾಧನೆ: ಶಿಶಿರ್ ಎಸ್. ಶೆಟ್ಟಿ


Logo

Published Date: 21-Sep-2024 Link-Copied

ಉಜಿರೆ, ಸೆ.17: ಉಜಿರೆಯ ಶ್ರೀ ಧ. ಮಂ. ಕಾಲೇಜಿನ ದ್ವಿತೀಯ ಬಿ.ಬಿ.ಎ. ವಿದ್ಯಾರ್ಥಿ, ಎನ್.ಸಿ.ಸಿ. ಭೂದಳದ ಕೆಡೆಟ್ ಕಾರ್ಪೊರಲ್ ಶಿಶಿರ್ ಎಸ್. ಶೆಟ್ಟಿ (Cpl Shishir S. Shetty) ಎನ್.ಸಿ.ಸಿ. ಥಲ್ ಸೈನಿಕ್ ಕ್ಯಾಂಪ್ (All India Thal Sainik Camp 2024)ನಲ್ಲಿ ಭಾಗವಹಿಸಿದ್ದಾರೆ. ಅಲ್ಲದೆ, ಶಿಬಿರದ ವಿವಿಧ ಸ್ಪರ್ಧೆಗಳಲ್ಲಿ ಕರ್ನಾಟಕ & ಗೋವಾ ನಿರ್ದೇಶನಾಲಯವನ್ನು ಪ್ರತಿನಿಧಿಸಿದ ಶಿಶಿರ್ ಅವರನ್ನೊಳಗೊಂಡ ತಂಡವು ದೆಹಲಿಯಲ್ಲಿ ನಡೆದ ಅಂತಿಮ ಹಂತದ ಶಿಬಿರದಲ್ಲಿ ‘ಮ್ಯಾಪ್ ರೀಡಿಂಗ್’ ಸ್ಪರ್ಧೆಯಲ್ಲಿ ನಾಲ್ಕನೇ ಸ್ಥಾನ ಗಳಿಸಿದೆ. ಎನ್.ಸಿ.ಸಿ. ಭೂದಳದ ರಾಷ್ಟ್ರಮಟ್ಟದ ಶಿಬಿರ ಇದಾಗಿದ್ದು, ದೇಶದ ಹದಿನೇಳು ಎನ್.ಸಿ.ಸಿ. ನಿರ್ದೇಶನಾಲಯಗಳಿಂದ ಸಾವಿರಕ್ಕೂ ಅಧಿಕ ಕೆಡೆಟ್’ಗಳು ಭಾಗವಹಿಸಿದ್ದರು. ಆರಂಭಿಕ ಹಂತದಲ್ಲಿ ತರಬೇತಿ ಮತ್ತು ಆಯ್ಕೆ ಶಿಬಿರಗಳು ಶಿವಮೊಗ್ಗ, ಎನ್.ಐ.ಟಿ.ಕೆ. ಸುರತ್ಕಲ್ ಮತ್ತು ಮೈಸೂರಿನಲ್ಲಿ ನಡೆದಿದ್ದವು. ವಿದ್ಯಾರ್ಥಿಯನ್ನು ಕಾಲೇಜಿನ ಆಡಳಿತ ಮಂಡಳಿ, ಪ್ರಾಂಶುಪಾಲ ಡಾ. ಬಿ.ಎ. ಕುಮಾರ ಹೆಗ್ಡೆ, ಎನ್ ಸಿ ಸಿ ಭೂದಳದ ಮುಖ್ಯಸ್ಥ ಲೆಫ್ಟಿನೆಂಟ್ ಭಾನುಪ್ರಕಾಶ್ ಬಿ.ಇ. ಹಾಗೂ ಆಫೀಸರ್ ಇನ್ ಚಾರ್ಜ್ ಶೋಭಾ ಅಭಿನಂದಿಸಿದ್ದಾರೆ.

Recomendatoion img Recomendatoion img Recomendatoion img Recomendatoion img Recomendatoion img Recomendatoion img Recomendatoion img Recomendatoion img Recomendatoion img Recomendatoion img Recomendatoion img Recomendatoion img Recomendatoion img Recomendatoion img Recomendatoion img