ರೋಟರಿ ಬೆಳ್ತಂಗಡಿ: ಮುಟ್ಟಿನ ನೈರ್ಮಲ್ಯ ಅರಿವು ಕಾರ್ಯಕ್ರಮ
Published Date: 15-Sep-2024 Link-Copied
ಉಜಿರೆ, ಸೆ.13: ದೇಹದಲ್ಲಾಗುವ ಸಣ್ಣ ಸಣ್ಣ ಬದಲಾವಣೆಗಳ ಗೊಂದಲವನ್ನು ಪೋಷಕರು ಹಾಗು ಹಿರಿಯರಿಂದ ಪರಿಹರಿಸಿಕೊಳ್ಳಿ. ಬೆಳವಣಿಗೆಯ ಹಂತದಲ್ಲಿ ಆರೋಗ್ಯ ಕಾಪಾಡಿಕೊಳ್ಳುವುದು ಬಹುಮುಖ್ಯ ಎಂದು ರೋಟರಿ ಕ್ಲಬ್ ಇಂದಿರಾನಗರ, ಬೆಂಗಳೂರು ಇದರ ರೋ. ಸೌಮ್ಯ ಶ್ರೀಕಾಂತ್ ಅಭಿಪ್ರಾಯಪಟ್ಟರು. ಇವರು ಬೆಳ್ತಂಗಡಿ ರೋಟರಿ ಕ್ಲಬ್ ಬೆಳ್ತಂಗಡಿ, ಅಂಗ ಸಂಸ್ಥೆ ಹ್ಯಾನ್ಸ್ ಕ್ಲಬ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಶಿಶು ಅಭಿವೃದ್ಧಿ ಯೋಜನೆ ಬೆಳ್ತಂಗಡಿ ಹಾಗೂ ರೋಟರಿ ಕ್ಲಬ್ ಇಂದಿರಾನಗರ, ಬೆಂಗಳೂರು ಸಹಯೋಗದಲ್ಲಿ ಬೆಳ್ತಂಗಡಿಯ ಕೊಯ್ಯುರು ಸರ್ಕಾರಿ ಪ್ರೌಢಶಾಲೆಯಲ್ಲಿ ಆಯೋಜಿಸಿದ್ದ ಮುಟ್ಟಿನ ನೈರ್ಮಲ್ಯ ಅರಿವು ಕಾರ್ಯಕ್ರಮದಲ್ಲಿ ಮಾತನಾಡಿದರು. ಸಮಾಜದಲ್ಲಿ ಹೆಣ್ಣಿನ ಪಾತ್ರ ಮಹತ್ತರವಾದದ್ದು,ತನ್ನ ಬದುಕಿನುದ್ದಕ್ಕೂ ಹಲವು ಆಯಾಮಗಳಲ್ಲಿ ಪಾತ್ರ ನಿರ್ವಹಿಸುತ್ತಾಳೆ. ಹಾಗಾಗಿ ವಿದ್ಯಾರ್ಥಿನಿಯರು ಪ್ರೌಢಾವಸ್ಥೆಯಿಂದಲೇ ತಮ್ಮ ದೇಹದ ವಾಸ್ತವಿಕ ಸಂಗತಿಗಳನ್ನು ಅರಿತುಕೊಳ್ಳಬೇಕು. ಪಕೃತಿಯ ನಿಯಮದಂತೆ ನಾವು ಮುಂದೆ ಸಾಗಬೇಕು ಎಂದರು. ಈ ಸಂದರ್ಭದಲ್ಲಿ ಕಾರ್ಯಕ್ರಮದಲ್ಲಿದ ವಿದ್ಯಾರ್ಥಿನಿಯರು ಕೇಳಿದ ಹಲವು ಪ್ರಶ್ನೆ ಮತ್ತು ಸಂಶಯಗಳಿಗೆ ರೋ. ಸೌಮ್ಯ ಶ್ರೀಕಾಂತ್ ಉತ್ತರಿಸಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕೊಯ್ಯುರು ಸರ್ಕಾರಿ ಪ್ರೌಢಶಾಲೆಯ ಮುಖ್ಯ ಶಿಕ್ಷಕ ರಾಧಾಕೃಷ್ಣ ಟಿ. ವಹಿಸಿದರು. ಆನ್ಸ್ ಕ್ಲಬ್ ಸದಸ್ಯೆ ದೀಪ್ತಿ ಹೆಗ್ಡೆ ಬಿ. ಕಾರ್ಯಕ್ರಮದ ಕುರಿತು ಪ್ರಸ್ತಾವಿಕ ಮಾತುಗಳನ್ನಾಡಿದರು. ಈ ಸಂದರ್ಭದಲ್ಲಿ ಬೆಳ್ತಂಗಡಿ ರೋಟರಿ ಕ್ಲಬ್ ಕಾರ್ಯದರ್ಶಿ ಸಂದೇಶ್ ಕುಮಾರ್ ರಾವ್, ಆನ್ಸ್ ಕ್ಲಬ್ ಅಧ್ಯಕ್ಷೆ ಗಾಯತ್ರಿ ಶ್ರೀಧರ್, ಕಾರ್ಯದರ್ಶಿ ಡಾ.ವಿನಯ ಕಿಶೋರ್, ರೋಟರಿ ಕ್ಲಬ್ ಇಂದಿರಾನಗರ, ಬೆಂಗಳೂರು ರೋ. ಡಾ. ಶ್ರಿಕಾಂತ್, ಬೆಳ್ತಂಗಡಿ ಶಿಶು ಅಭಿವೃದ್ಧಿ ಯೋಜನಾಧಿಕಾರಿ ಪ್ರಿಯಾ ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ಎಂಟು, ಒಂಬತ್ತು ಮತ್ತು ಹತ್ತನೇ ತರಗತಿಯ ವಿದ್ಯಾರ್ಥಿನಿಯರು ಹಾಗು ಶಿಕ್ಷಕರು ಭಾಗಿಯಾಗಿದ್ದರು. ಕಾರ್ಯಕ್ರಮವನ್ನು ಶಿಕ್ಷಕ ರಾಮಚಂದ್ರ ಸ್ವಾಗತಿಸಿ, ಶಿಕ್ಷಕಿ ಗೀತಾ ವಂದಿಸಿದರು.