ಉಚಿತ ಭೌತಿಕ ಚಿಕಿತ್ಸಾ ಶಿಬಿರ
Published Date: 02-Sep-2024 Link-Copied
ವಿಶ್ವ ಭೌತಿಕ ದಿನದ ಪ್ರಯುಕ್ತ ಎಸ್.ಡಿ.ಎಂ. ಭೌತಿಕ ಚಿಕಿತ್ಸಾ ಸಂಸ್ಥೆಯವರು ದಿನಾಂಕ ಸೆಪ್ಟೆಂಬರ್ 5 (ಗುರುವಾರ)ರಂದು ಬೆಳಿಗ್ಗೆ 10 ಗಂಟೆಯಿಂದ ಮಧ್ಯಾಹ್ನ 2ರವರೆಗೆ ಉಚಿತ ಭೌತಿಕ ಚಿಕಿತ್ಸಾ ಮತ್ತು ಸಲಹಾ ಶಿಬಿರವನ್ನು ಹುಬ್ಬಳ್ಳಿಯ ವಿದ್ಯಾನಗರದ ಎಸ್.ಡಿ.ಎಂ. ಪಾಲಿಕ್ಲಿನಿಕ್‌ನಲ್ಲಿ ಆಯೋಜಿಸಲಿದ್ದಾರೆ. ಕೆಳ ಬೆನ್ನು ನೋವು, ಮೂಳೆ ಮತ್ತು ನರಗಳ ಸಂಬಂಧಿತ, ಬೆನ್ನು ಹುರಿ (ಸ್ಪೈನ್) ಸಂಬಂಧಿತ ಸಮಸ್ಯೆಗಳನ್ನು ತಡೆಗಟ್ಟಲು ಮಾಡಬೇಕಾದ ಮತ್ತು ಸಮಸ್ಯೆಗಳಿದ್ದವರು ಮಾಡಬಾರದ ವಿಚಾರಗಳನ್ನು ತಜ್ಞ ಭೌತಿಕ ಚಿಕಿತ್ಸಕರಿಂದ ಚಿಕಿತ್ಸೆ, ಸಲಹೆಗಳನ್ನು ಪಡೆದುಕೊಳ್ಳಬಹುದೆಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.