ಆ.26: ಕದ್ರಿಯಲ್ಲಿ ರಾಷ್ಟ್ರಮಟ್ಟದ ಮಕ್ಕಳ ಉತ್ಸವ ಶ್ರೀಕೃಷ್ಣ ವೇಷ ಸ್ಪರ್ಧೆ
Published Date: 24-Aug-2024 Link-Copied
ಮಂಗಳೂರು, ಆ.22: ಕಲ್ಕೂರ ಪ್ರತಿಷ್ಠಾನವು ರಾಷ್ಟ್ರ ಮಟ್ಟದ ಮಕ್ಕಳ ಉತ್ಸವ-ಶ್ರೀಕೃಷ್ಣವೇಷ ಸ್ಪರ್ಧೆಯನ್ನು ಆ.26ರಂದು ಕದ್ರಿ ಶ್ರೀ ಮಂಜುನಾಥ ದೇವಸ್ಥಾನದಲ್ಲಿ ಆಯೋಜಿಸಿದೆ. ಬೆಳಗ್ಗೆ 9 ಗಂಟೆಯಿAದ ಶ್ರೀಕೃಷ್ಣವರ್ಣ ವೈಭವ, ಮಧ್ಯಾಹ್ನ 12ರಿಂದ ಸಾಂಸ್ಕೃತಿಕ ಕಾರ್ಯಕ್ರಮ, 1 ಗಂಟೆಗೆ ಶ್ರೀಕೃಷ್ಣ ಜನ್ಮ ಮಹೋತ್ಸವ, ನಂದಗೋಕುಲ ವೇದಿಕೆಯಲ್ಲಿ ಶ್ರೀಕೃಷ್ಣ ವೇಷ ಸ್ಪರ್ಧೆ ಉದ್ಘಾಟನೆಗೊಳ್ಳಲಿದೆ. ರಾತ್ರಿ 12ರವರೆಗೆ ಸ್ಪರ್ಧೆಗಳು ನಡೆಯಲಿದ್ದು ಒಟ್ಟು 42 ವಿಭಾಗದಲ್ಲಿ 9 ವೇದಿಕೆಗಳಲ್ಲಿ ಏಕಕಾಲದಲ್ಲಿ ಸ್ಪರ್ಧೆಗಳು ನಡೆಯಲಿವೆ ಎಂದರು. ಮೂರು ಸಾವಿರಕ್ಕೂ ಹೆಚ್ಚು ಮಕ್ಕಳು ಭಾಗವಹಿಸುವ ನಿರೀಕ್ಷೆ ಇದ್ದು ಸ್ಥಳದಲ್ಲೇ ಹೆಸರು ನೋಂದಣಿಗೆ ಅವಕಾಶವಿದೆ. ಹೆಚ್ಚಿನ ಮಾಹಿತಿಗೆ ಕಲ್ಕೂರ ಪ್ರತಿಷ್ಠಾನ, ಶ್ರೀ ಕೃಷ್ಣ ಸಂಕೀರ್ಣ, ಮಹಾತ್ಮಗಾಂಧಿ ರಸ್ತೆ, ಕೊಡಿಯಾಲಬೈಲು ಮಂಗಳೂರು ಅಥವಾ ಠಿಡಿಚಿಜeeಠಿ.ಞಚಿಟಞuಡಿಚಿ@gmಚಿiಟ.ಛಿom ಮೂಲಕ ಪಡೆಯಬಹುದು ಎಂದು ತಿಳಿಸಿದರು. ಸಮೂಹ ನಂದಗೋಕುಲ ವಿಭಾಗದಲ್ಲಿ ಶ್ರೀ ಕೃಷ್ಣನ ಕಥಾನಕದ ಯಾವುದೇ ಸನ್ನಿವೇಶದ ಪ್ರದರ್ಶನವನ್ನು ಸಾಮೂಹಿಕವಾಗಿ ಪ್ರದರ್ಶಿಸಲು ವಯಸ್ಸಿನ ನಿರ್ಬಂಧವಿಲ್ಲದೆ ಈ ಬಾರಿ ಅವಕಾಶ ಕಲ್ಪಿಸಲಾಗಿದೆ. ಕನಿಷ್ಠ ಐದು ಮಂದಿ ಭಾಗವಹಿಸಬಹುದು. ಗುಂಪಿನಲ್ಲಿ ಸ್ತಬ್ದ ಚಿತ್ರವನ್ನು ದೃಶ್ಯ ಸ್ವರೂಪದೊಂದಿಗೆ ಪ್ರದರ್ಶಿಸಲು ಅವಕಾಶ ನೀಡಲಾಗುತ್ತದೆ ಎಂದರು. ಸ್ಪರ್ಧೆಗಳ ವಿಜೇತರಿಗೆ ಪ್ರಥಮ, ಹಾಗೂ ತೃತೀಯ ದ್ವಿತೀಯ ಬಹುಮಾನ ನೀಡಲಾಗುವುದು. ಎಲ್ಲ ಸ್ಪರ್ಧಾಳುಗಳಿಗೆ ಉಡುಪಿ ಕಡೆಗೋಲು ಕೃಷ್ಣನ ಪಂಚಲೋಹದ ವಿಗ್ರಹ, ಶ್ರೀಕೃಷ್ಣ ಚರಿತ್ರೆ ಪುಸ್ತಕ, ಪ್ರೋತ್ಸಾಹಕ ಬಹುಮಾನ, ಪ್ರಶಂಸ ಪತ್ರ, ಮತ್ತು ಭಗವದ್ಗೀತೆಯ ಪ್ರತಿಯನ್ನು ನೀಡಲಾಗುವುದು ಎಂದು ತಿಳಿಸಿದರು. ಅರ್ಘ್ಯ ಪ್ರದಾನ ಶ್ರೀಕೃಷ್ಣ ಜನ್ಮಾಷ್ಟಮಿ ಹಿನ್ನೆಲೆಯಲ್ಲಿ ರಾತ್ರಿ 12 ಕ್ಕೆ ಶ್ರೀಕೃಷ್ಣನಿಗೆ ಅರ್ಘ್ಯ ಪ್ರದಾನ ನೆರವೇರಲಿದ್ದು ಎಲ್ಲರಿಗೂ ಅರ್ಘ್ಯ ಪ್ರದಾನಕ್ಕೆ ಅವಕಾಶವಿದೆ ಎಂದರು. ಪ್ರಮುಖರಾದ ಪ್ರೊ| ಎಂ.ಬಿ. ಪುರಾಣಿಕ್, ಕದ್ರಿ ನವನೀತ ಶೆಟ್ಟಿ ದಯಾನಂದ ಕಟೀಲು, ರತ್ನಾಕರ ಜೈನ್, ಸಮೀರ್ ಪುರಾಣಿಕ್, ಜಿ.ಕೆ. ಭಟ್ ಸೇರಾಜೆ, ತಾರಾನಾಥ ಶೆಟ್ಟಿ ಬೋಳಾರ, ಪ್ರಭಾಕರ ರಾವ್ ಪೇಜಾವರ, ಪೊಳಲಿ ನಿತ್ಯಾನಂದ ಕಾರಂತ, ಜನಾರ್ದನ ಹಂದೆ, ತಮ್ಮ ಲಕ್ಷ್ಮಣ, ವಿಜಯಲಕ್ಷ್ಮೀ ಶೆಟ್ಟಿ ಮಂಜುಳಾ ಶೆಟ್ಟಿ ಉಪಸ್ಥಿತರಿದ್ದರು.