ರುಡ್ ಸೆಟ್ ಸಂಸ್ಥೆ: ಸಮಾರೋಪ ಸಮಾರಂಭ
Published Date: 19-Aug-2024 Link-Copied
ಉಜಿರೆ: ಇಂದು ಪ್ರತಿಯೊಂದು ಕೆಲಸದಲ್ಲಿ ಮನೆಯಲ್ಲಿ ವಿವಿಧ ಸಂಸ್ಥೆಗಳಲ್ಲಿ ವಿಶೇಷವಾಗಿ ಅಪರಾಧ ವಿಭಾಗದಲ್ಲಿ ಸಿಸಿ ಕ್ಯಾಮರಗಳ ಪಾತ್ರ ಮಹತ್ವದಾಗಿದೆ. ಈ ನಿಟ್ಟಿನಲ್ಲಿ ರುಡ್ ಸೆಟ್ ಸಂಸ್ಥೆಯಲ್ಲಿ ಸಿಸಿ ಕ್ಯಾಮರಾ ಅಳವಡಿಕೆ ಮತ್ತು ದುರಸ್ತಿಯ ಸ್ವ ಉದ್ಯೋಗ ತರಬೇತಿ ಪಡೆದ ನಿಮಗೆ ಇವತ್ತು ತುಂಬಾ ಅವಕಾಶಗಲಿವೆ, ಏಕೆಂದರೆ ಪ್ರತಿಯೊಂದು ಆಟ, ಪಾಠ, ನೋಟಕ್ಕೆ ಸಿಸಿ ಕ್ಯಾಮರಾಗಳನ್ನು ಅಳವಡಿಸಲೇ ಬೇಕು ಅನ್ನುವ ಅನಿರ್ವಾಯತೆ ಬಂದಿದೆ. ಈ ಹಿನ್ನಲೆಯಲ್ಲಿ ಇಂತಹ ತರಬೇತಿ ಪಡೆದ ನಿಮಗೆ ಮುಂದಿನ ದಿನಗಳಲ್ಲಿ ಬೇರೆ ಬೇರೆ ಉದ್ಯಮ, ವ್ಯವಹಾರ ನಡೆಸಲು ಅನುಕೂಲವಾಗುತ್ತದೆ. ಹಾಗೇನೆ ಉತ್ತಮ ಗುಣಮಟ್ಟದ ವಸ್ತುಗಳನ್ನೇ ಬಳಸಿ, ಉತ್ತಮವಾದ ಸೇವೆ ನೀಡಿ ಎಂದು ಬೆಳ್ತಂಗಡಿ ಗ್ರಾಮಾಂತರ ಪೋಲಿಸ್ ವಿಭಾಗದ ವೃತ್ತ ನಿರೀಕ್ಷರಾದ ನಾಗೇಶ್ ಕದ್ರಿ ಅಭಿಪ್ರಾಯಪಟ್ಟರು. ರುಡ್ ಸೆಟ್ ಸಂಸ್ಥೆಯಲ್ಲಿ 13 ದಿನಗಳ ಕಾಲ ನಡೆದ ಸಿಸಿ ಕ್ಯಾಮರ ಆಳವಡಿಕೆ ಮತ್ತು ದುರಸ್ತಿ ತರಬೇತಿಯ ಸಮಾರೋಪ ಸಮಾರಂಭದಲ್ಲಿ ಪ್ರಮಾಣ ಪತ್ರ ಮತ್ತು ಕೆನರಾ ಬ್ಯಾಂಕಿನಲ್ಲಿ ಹೊಸತಾಗಿ ಆರಂಭಿಸಿದ ಜನಧನ್ ಖಾತೆ ಪುಸ್ತಕ ವಿತ್ತರಿಸಿ ಮಾತನಾಡಿದರು. ಸ್ವ ಉದ್ಯೋಗ ನಮ್ಮ ಹೆಮ್ಮೆಯ ವೃತ್ತಿಯಾಗಬೇಕು. ಪಡೆದ ತರಬೇತಿಯನ್ನು ಉಪಯೋಗಿಸಿಕೊಂಡು ಯಶಸ್ವಿಯಾಗಿ ಉದ್ಯಮ ನಡೆಸಿ ಎಂದು ಶುಭ ಹಾರೈಸಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ರುಡ್ ಸೆಟ್ ಸಂಸ್ಥೆಗಳ ಕಾರ್ಯನಿರ್ವಾಹಕ ನಿರ್ದೇಶಕರಾದ ಬಿ.ಪಿ.ವಿಜಯ ಕುಮಾರ್ ವಹಿಸಿ, ಮಾತನಾಡುತ್ತಾ, ಹೊಸ ಹೊಸ ಅವಿಷ್ಕಾರಗಳ ಜೊತೆಗೆ ವ್ಯವಹಾರವನ್ನು ಉತ್ತಮ ರೀತಿಯಲ್ಲಿ ಬೆಳೆಸಿ ಎಂದು ಶುಭ ಕೋರಿದರು. ಚಂದ್ರಹಾಸ ಪ್ರಾರ್ಥನೆ ಮಾಡಿದರು. ಅತಿಥಿಗಳನ್ನು ರುಡ್ ಸೆಟ್ ಸಂಸ್ಥೆಯ ನಿರ್ದೇಶಕರಾದ ಅಜೇಯರವರು ಸ್ವಾಗತಿಸಿದರು. ಸಂಸ್ಥೆಯ ಹಿರಿಯ ಉಪನ್ಯಾಸಕರಾದ ಅಬ್ರಹಾಂ ಜೇಮ್ ಕಾರ್ಯಕ್ರಮ ನಿರೂಪಿಸಿದರು. ಉಪನ್ಯಾಸಕರಾದ ಕೆ. ಕರುಣಾಕರ ಜೈನ್ ವಂದಿಸಿದರು. ಸುಮಾರು 32 ಜನ ಶಿಬಿರಾರ್ಥಿಗಳು ಭಾಗವಹಿಸಿದ್ದರು, ಹರಿಕೃಷ್ಣ, ಸುಶಿಲ್, ನವೀನ ತರಬೇತಿಯ ಅನುಭವ ಹಂಚಿಕೊಂಡರು.