ಮುಳಿಯ ಜುವೆಲ್ಸ್ ನ ಬೆಳ್ತಂಗಡಿ ಶಾಖೆಯಲ್ಲಿ ಕೃಷ್ಣ ವೇಷ ಸ್ಪರ್ಧೆ
Published Date: 17-Aug-2024 Link-Copied
ಬೆಳ್ತಂಗಡಿ: ಶ್ರೀ ಕೃಷ್ಣಾ ಜನ್ಮಾಷ್ಟಮಿ ಪ್ರಯುಕ್ತ ನಾಡಿನ ಪ್ರಸಿದ್ದ ಮತ್ತು ಶುದ್ದತೆಗೆ ಹೆಸರುವಾಸಿದ ಮುಳಿಯ ಜುವೆಲ್ಸ್ ನ ಬೆಳ್ತಂಗಡಿ ಶಾಖೆಯಲ್ಲಿ ಕೃಷ್ಣ ವೇಷ ಸ್ಪರ್ಧೆ ಆ.24 ರಂದು ಮಧ್ಯಾಹ್ನ 2.00 ಕ್ಕೆ ನಡೆಯಲಿದೆ. ಸ್ಪರ್ಧೆಯಲ್ಲಿ ಮುದ್ದು ಕೃಷ್ಣ 0-3 ವರ್ಷ, ಬಾಲ ಕೃಷ್ಣ 4-7 ವರ್ಷ, ರಾಧಾ ಕೃಷ್ಣ 8-12 ವರ್ಷದ ಮಕ್ಕಳಿಗೆ ಮಾತ್ರ ಅವಕಾಶ. ಸ್ಪರ್ಧಾ ನೋಂದಾವಣೆಗೆ ಆಗಸ್ಟ್ 22 ಕೊನೆಯ ದಿನಾಂಕವಾಗಿದೆ. ಸ್ಪರ್ಧೆಯ ನಿಬಂಧನೆಗಳು: *ಬೆಳ್ತಂಗಡಿ ತಾಲೂಕಿನವರಿಗೆ ಮಾತ್ರ ಅವಕಾಶ. *ಸ್ಪರ್ಧಾಳುಗಳು ಸಮಯಕ್ಕೆ ಸರಿಯಾಗಿ ಹಾಜಾರಿರಬೇಕು. *ನೋಂದಾವಣೆ ಸಮಯ ಆಧಾರ್ ಕಾರ್ಡ್ ಕಡ್ಡಾಯ. *ಪ್ರತೀ ವಿಭಾಗದಲ್ಲೂ ಸ್ಪರ್ಧಿಗಳಿಗೆ 1-2 ನಿಮಿಷದ ಸಮಯಾವಕಾಶ ನೀಡಲಾಗುವುದು. *ಸ್ಪರ್ಧೆಗೆ ಬೇಕಾದ ವೇಷಭೂಷಣ ಮತ್ತು ಹಾಡನ್ನು ತಾವೇ ತಯಾರಿ ಮಾಡಿಕೊಂಡು ಬರತಕ್ಕದ್ದು. *ವೇಷಭೂಷಣ, ಹಾವ-ಭಾವಗಳನ್ನು ತೀರ್ಪುಗಾರಿಕೆಗೆ ಪರಿಗಣಿಸಲಾಗುವುದು. *ಸಂಘಟಕರ ಮತ್ತು ತೀರ್ಪುಗಾರರ ತೀರ್ಮಾನವೇ ಅಂತಿಮ. ವಿಜೇತರಿಗೆ ಬಹುಮಾನ ಮತ್ತು ಭಾಗವಹಿಸಿದ ಎಲ್ಲಾ ಸ್ಪರ್ಧಿಗಳಿಗೂ ಪ್ರಮಾಣ ಪತ್ರ ನೀಡಿ ಗೌರವಿಸಲಾಗುವುದು. ಎಲ್ಲಾ ಸ್ಪರ್ಧಿಗಳ ಫೋಟೊ/ ವೀಡಿಯೋವನ್ನು ಮುಳಿಯ ಫೇಸ್‌ಬುಕ್ ಪೇಜ್ ನಲ್ಲಿ ಹಾಕಲಾಗುವುದು. ನೋಂದಾವಣೆಗಾಗಿ - 9343004916 / 87925 30916