ಬೆಳ್ತಂಗಡಿ ರೋಟರಿ ಕ್ಲಬ್: ಕಂಪ್ಯೂಟರ್ ಕೊಡುಗೆ
Published Date: 17-Aug-2024 Link-Copied
ಬೆಳ್ತಂಗಡಿ: ಶಿಕ್ಷಕರ ಆಡಳಿತಾತ್ಮಕ ಕೆಲಸಗಳನ್ನು ನಿರ್ವಹಿಸಲು ಕಂಪ್ಯುಟರ್ ಗಳ ತುರ್ತು ಅಗತ್ಯತತೆ ಇದ್ದ ಸಾರ್ವಜನಿಕ ಶಿಕ್ಷಣ ಇಲಾಖೆಯ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿಗೆ ಬೆಳ್ತಂಗಡಿ ರೋಟರಿ ಕ್ಲಬ್ ವತಿಯಿಂದ ಕಂಪ್ಯೂಟರ್ ಗಳನ್ನು ನೀಡಲಾಯಿತು. ಸರಿಯಾಗಿ ಅನುದಾನ ಸಿಗದೇ ಕಳೆದ ನಾಲ್ಕು ವರ್ಷಗಳಿಂದ ಕಂಪ್ಯೂಟರ್ ಗಳ ಕೊರತೆ ಅನುಭವಿಸುತ್ತಿದ್ದ ಶಿಕ್ಷಣಾಧಿಕಾರಿಗಳ ಕಚೇರಿ ಇಲಾಖೆಯ ಮುಂದೆ 5 ಕಂಪ್ಯೂಟರ್ ಗಳ ಬೇಡಿಕೆಯನ್ನು ಇರಿಸಿತ್ತು. ಕಂಪ್ಯೂಟರ್ ಗಳು ಈವರೆಗೂ ಲಭಿಸಿದೆ ಇದ್ದುದರಿಂದ, ಬೆಳ್ತಂಗಡಿ ರೋಟರಿ ಕ್ಲಬ್ ಗೆ ಮನವಿ ನೀಡಿದ ಬೆನ್ನಲ್ಲಿ ರೋಟರಿ ಸಂಸ್ಥೆ ಎರಡು ಕಂಪ್ಯೂಟರ್ ಗಳನ್ನು ದಾನವಾಗಿ ನೀಡಿ ಸಹಕರಿಸಿದೆ. ಇಲಾಖೆಯ ಕಚೇರಿಯಲ್ಲಿ ಬೆಳ್ತಂಗಡಿ ರೋಟರಿ ಕ್ಲಬ್ ಅಧ್ಯಕ್ಷ ಪೂರನ್ ವರ್ಮಾ, ಬೆಳ್ತಂಗಡಿ ಕ್ಷೇತ್ರ ಶಿಕ್ಷಣಾಧಿಕಾರಿ ತಾರಕೇಸರಿರವರಿಗೆ ಕಂಪ್ಯೂಟರ್ ಗಳನ್ನು ಹಸ್ತಾಂತರಿಸಿದರು. ಈ ಸಂದರ್ಭದಲ್ಲಿ ರೋಟರಿ ಕ್ಲಬ್ ಕಾರ್ಯದರ್ಶಿ ಸಂದೇಶ್ ಕುಮಾರ್ ರಾವ್, ನಿಕಟ ಪೂರ್ವ ಅಧ್ಯಕ್ಷ ಅನಂತ ಭಟ್, ಶಿಕ್ಷಣಾಧಿಕಾರಿಗಳ ಕಚೇರಿಯ ಸಹಾಯಕರಾದ ಸಂದೇಶ್, ವಜ್ರ ಕುಮಾರ್ ಹಾಗೂ ರಾಜೇಂದ್ರ ಉಪಸ್ಥಿತರಿದ್ದರು.