ಸತ್ತೂರು, ಧಾರವಾಡ: ಎಸ್.ಡಿ.ಎಂ. ವಿಶ್ವವಿದ್ಯಾಲಯವು 78ನೇ ಸ್ವಾತಂತ್ರ್ಯ ದಿನಾಚರಣೆ
Published Date: 15-Aug-2024 Link-Copied
ಎಸ್.ಡಿ.ಎಂ. ವಿಶ್ವವಿದ್ಯಾಲಯವು 78ನೇ ಸ್ವಾತಂತ್ರ್ಯ ದಿನಾಚರಣೆಯನ್ನು ವೈದ್ಯಕೀಯ ಮಹಾವಿದ್ಯಾಲಯದಲ್ಲಿ ಆಚರಿಸಲಾಯಿತು. ವಿಶ್ವವಿದ್ಯಾಲಯದ ಗೌರವಾನ್ವಿತ ಕುಲಪತಿಗಳಾದ ಪೂಜ್ಯ ಶ್ರೀ ಡಿ. ವೀರೇಂದ್ರ ಹೆಗ್ಗಡೆ ಮುಖ್ಯ ಅತಿಥಿಯವರಾಗಿ ಧ್ವಜಾರೋಹಣ ಮಾಡಿದರು. ಮುಖ್ಯ ಅತಿಥಿಯವರಾದ ಪೂಜ್ಯ ಶ್ರೀ ಡಿ. ವೀರೇಂದ್ರ ಹೆಗ್ಗಡೆ ಅವರು ಮಾತನಾಡುತ್ತಾ: ಅದೆಷ್ಟೊ ಸ್ವಾತಂತ್ರ್ಯ ಹೋರಾಟಗಾರರು ತಮ್ಮ ಸುಖ ನೆಮ್ಮದಿಯನ್ನು ತೊರೆದು ದೇಶಕ್ಕಾಗಿ ದೇಹ ಬಲಿದಾನ ಮಾಡ್ಡಿದ್ದಾರೆ. ಅಂತಹ ತ್ಯಾಗ ಮೂರ್ತಿಗಳ ಬಲಿದಾನದ ಪ್ರತಿಫಲವೇ ಇಂದು ನಾವೆಲ್ಲ ಅನುಭವಿಸುತ್ತಿರುವ ಸ್ವಾತಂತ್ರ್ಯ ದೇಶಕ್ಕೆ ಸ್ವಾತಂತ್ರ್ಯ ಬಂದ ಮೇಲೆ ಹಂತ ಹಂತವಾಗಿ ಅಪಾರ ಬದಲಾವಣೆಯಾಗಿದೆ. ದೇಶದ ಸ್ವಾತಂತ್ರ್ಯದಿಂದ ಹಳ್ಳಿಯಿಂದ ಪಟ್ಟಣದವರೆಗೂ ಜನ ಪ್ರಗತಿಯನ್ನು ಕಂಡಿದ್ದಾರೆ. ಇಂದು ನಾವೆಲ್ಲ ಆಧ್ಯತೆಯಲ್ಲಿ ಮಾಡಬೇಕಾದ ಕೆಲಸ ದೇಶದ ಐಕೈತೆ ಮತ್ತು ಬಲಿಷ್ಠ ಭಾರತದ ನಿರ್ಮಾಣ ಪ್ರಜೆಗಳಾದ ನಾವೆಲ್ಲ ಸರ್ವಧರ್ಮ ಸಮನ್ವಯತೆ, ಬಡತನ ನಿರ್ಮೂಲನೆ, ಸಾಕ್ಷರತೆ ಕಡೆಗೆ ಗಮನ ಹರಿಸಬೇಕು. ಇಂದಿನ ವಿದ್ಯಾರ್ಥಿಗಳು ಭವಿಷ್ಯದಲ್ಲಿ ರೋಗಿಗಳನ್ನು ದೇವರಂತೆ ಕಂಡು ಸೇವೆ ಸಲ್ಲಿಸಿ ಸಂತೃಪ್ತಿ ಪಡೆಯಬೇಕು. ಈ ಸಂದರ್ಭದಲ್ಲಿ ಅಂಗ ಸಂಸ್ಥೆಗಳ ಪ್ರಥಮ ವರ್ಷದ ಒಬ್ಬ ಮತ್ತು ಅಂತಿಮ ವರ್ಷದ ಇಬ್ಬರು ಪ್ರತಿಭಾನ್ವಿತ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು. ವಿದ್ಯಾರ್ಥಿಗಳಿಂದ ಕಿರು ಸಾಂಸ್ಕೃತಿಕ ಕಾರ್ಯಕ್ರಮವನ್ನು ಏರ್ಪಡಿಸಲಾಯಿತು. ಉಪಕುಲಪತಿಗಳಾದ ಡಾ. ನಿರಂಜನ್ ಕುಮಾರ, ಕಾರ್ಯನಿರ್ವಾಹಕ ನಿರ್ದೇಶಕಿಯವರಾದ ಪದ್ಮಲತಾ ನಿರಂಜನ್, ಆಡಳಿತ ನಿರ್ದೇಶಕರಾದ ಸಾಕೇತ್ ಶೆಟ್ಟಿ, ಸಹ ಉಪಕುಲಪತಿಯವರಾದ ವಿ. ಜೀವಂಧರ್ ಕುಮಾರ್, ಹಣಕಾಸು ಅಧಿಕಾರಿಗಳಾದ ವಿ ಜಿ ಪ್ರಭು, ಕುಲಸಚಿವರಾದ ಡಾ. ಚಿದೇಂದ್ರ ಎಂ. ಶೆಟ್ಟರ್, ಸಂಸ್ಥೆಗಳ ಮುಖ್ಯಸ್ಥರು, ಉಪ ಪ್ರಾಂಶುಪಾಲರು, ಅಧ್ಯಾಪಕರು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ವೈದ್ಯಕೀಯ ಕಾಲೇಜಿನ ಪ್ರಾಂಶುಪಾಲರಾದ ಡಾ. ರತ್ನಮಾಲಾ ಎಂ. ದೇಸಾಯಿ ಅತಿಥಿಗಳನ್ನು ಸ್ವಾಗತಿಸಿದರು. ಡಾ. ರಘುನಾಥ್ ಶಾನಭಾಗ್ ಹಾಗೂ ಡಾ. ಅನಿಲ್ ಆರ್. ಕಾರ್ಯಕ್ರಮವನ್ನು ನಿರೂಪಿಸಿದರು. ಉಪ ಪ್ರಾಂಶುಪಾಲರಾದ ಡಾ. ದೀಪಕ ಕಣಬೂರ ವಂದನಾರ್ಪಣೆಯನ್ನು ಮಾಡಿದರು.