ಶ್ರೀ ಗುರುದೇವ ವಿವಿಧೋದ್ದೇಶ ಸಹಕಾರ ಸಂಘ ಪ್ರಶಸ್ತಿಗೆ ಆಯ್ಕೆ
Published Date: 14-Aug-2024 Link-Copied
ಬೆಳ್ತಂಗಡಿ: ಶ್ರೀ ಗುರುದೇವ ವಿವಿಧೋದ್ದೇಶ ಸಹಕಾರ ಸಂಘವು ದ.ಕ.ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕಿನಿಂದ ಕೊಡಲ್ಪಡುವ ಸಾಧನ ಪ್ರಶಸ್ತಿಗೆ 9ನೇ ಭಾರಿಗೆ ಆಯ್ಕೆಯಾಗಿರುತ್ತದೆ. 2023-24 ನೇ ಸಾಲಿನಲ್ಲಿ ಸಹಕಾರ ಸಂಘವು 41709 ಸದಸ್ಯತನದೊಂದಿಗೆ, ರೂ. 188.78 ಕೋಟಿ ಠೇವಣಿ, ರೂ.155.63 ಕೋಟಿ ಸಾಲ, ರೂ.212.24 ಕೋಟಿ ದುಡಿಯುವ ಬಂಡವಾಳದೊಂದಿಗೆ ರೂ.3.84ಕೊಟಿ ನಿವ್ವಳ ಲಾಭ ಗಳಿಸಿರುತ್ತದೆ. 2023-24ನೇ ಸಾಲಿನಲ್ಲಿ ರೂ.11.28 ಕೋಟಿ ವ್ಯವಹಾರ ನಡೆಸಿರುತ್ತದೆ. ಬ್ಯಾಂಕಿಂಗ್ ಕ್ಷೇತ್ರದಲ್ಲಿ ಮಾತ್ರವಲ್ಲದೇ ಸಾಮಾಜಿಕ ಚಟುವಟಿಕೆಗಳಲ್ಲಿ ತನ್ನನ್ನು ತಾನು ತೊಡಗಿಸಿಕೊಂಡಿದೆ. ಸ್ವಂತ ಕೇಂದ್ರ ಕಛೇರಿ ಸುಮಾರು 5 ಕೋಟಿ ಮೊತ್ತದ ಶ್ರೀ ಗುರುಸಾನಿಧ್ಯ ವಾಣಿಜ್ಯ ಸಂಕೀರ್ಣ ಜು.13ರಂದು ಲೋಕರ್ಪಣೆಗೊಂಡಿದ್ದು, ಇದರ ಎರಡನೇ ಮಹಡಿಯಲ್ಲಿ ಆಡಳಿತ ಕಛೇರಿಯನ್ನು ಹೊಂದಿರುತ್ತದೆ. 2023-24 ನೇ ಸಾಲಿನಲ್ಲಿ ಸಂಘವು ತನ್ನ ಕಾರ್ಯವ್ಯಾಪ್ತಿಯಲ್ಲಿ ಸಾಧಿಸಿರುವ ವಿಶಿಷ್ಠ ಸಾಧನೆಯನ್ನು ಗಮನಿಸಿ 2023-24 ನೇ ಸಾಲಿನ ದ.ಕ.ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕಿನ ಮಹಾಸಭೆಯಲ್ಲಿ ಬ್ಯಾಂಕಿನ ಅಧ್ಯಕ್ಷರಾದ ಡಾ| ಎಂ.ಎನ್. ರಾಜೇಂದ್ರ ಕುಮಾರ್ ಹಾಗೂ ಆಡಳಿತ ಮಂಡಳಿ ನಿರ್ದೇಶಕರ ಸಮ್ಮುಖದಲ್ಲಿ ಸಾಧನ ಪ್ರಶಸ್ತಿ ನೀಡಿ ಗೌರವಿಸಿದ್ದಾರೆ ಎಂದು ಶ್ರೀ ಗುರುದೇವ ವಿವಿದೋದ್ದೇಶ ಸಹಕಾರ ಸಂಘದ ಅಧ್ಯಕ್ಷರಾದ ಎನ್ ಪದ್ಮನಾಭ ತಿಳಿಸಿರುತ್ತಾರೆ.