ಮೂಡಬಿದಿರೆ: ಇಂಜಿನಿಯರ್ ಕೋರ್ಸ್ ಗಳ ಪ್ರವೇಶ ಪರೀಕ್ಷೆಯಲ್ಲಿ ಎಕ್ಸಲೆಂಟ್ ನ ವಿದ್ಯಾರ್ಥಿಗಳು ರ‍್ಯಾಂಕ್
Published Date: 28-May-2024 Link-Copied
ಕರ್ನಾಟಕ ಖಾಸಗಿ ವೈದ್ಯಕೀಯ, ಇಂಜಿನಿಯರಿಂಗ್ ಹಾಗೂ ದಂತ ವೈದ್ಯಕೀಯ ಕಾಲೇಜುಗಳ ಒಕ್ಕೂಟ(ಕಾಮೆಡ್-ಕೆ) ಇಂಜಿನಿಯರ್ ಕೋರ್ಸ್ ಗಳ ಪ್ರವೇಶಕ್ಕಾಗಿ ರಾಷ್ಟ್ರಮಟ್ಟದಲ್ಲಿ ನಡೆಸಿದ್ದ ಸಾಮಾನ್ಯ ಪ್ರವೇಶ ಪರೀಕ್ಷೆಯ ಫಲಿತಾಂಶದಲ್ಲಿ ಮೂಡಬಿದಿರೆ ಎಕ್ಸಲೆಂಟ್ ಪದವಿ ಪೂರ್ವ ಕಾಲೇಜಿನ 4 ವಿದ್ಯಾರ್ಥಿಗಳು ಅಧಿಕ ಪರ್ಸಂಟೇಜ್‌ನೊಂದಿಗೆ ರ‍್ಯಾಂಕ್ ಗಳಿಸಿದ್ದಾರೆ. ವಿದ್ಯಾರ್ಥಿಗಳಾದ ಪ್ರಾಪ್ತಿ ಬೆಳಕೇರಿ 99.7861210 ಪರ್ಸಂಟೇಜ್‌ನೊಂದಿಗೆ 234ನೇ ರ‍್ಯಾಂಕ್ ಪಡೆದಿದ್ದಾರೆ. ರೋಹನ್ ಎಸ್. 99.4987613 ಪರ್ಸಂಟೇಜ್‌ನೊಂದಿಗೆ 548ನೇ ರ‍್ಯಾಂಕ್, ಅಮೋಘ ಪಾಟೀಲ್ 98.5252788 ಪರ್ಸಂಟೇಜ್‌ನೊಂದಿಗೆ 1559ನೇ ರ‍್ಯಾಂಕ್ ಪಡೆದಿದ್ದಾರೆ. ಇವರ ಸಾಧನೆಗೆ ಎಕ್ಸಲೆಂಟ್ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಯುವರಾಜ ಜೈನ್, ಕಾರ್ಯದರ್ಶಿ ರಶ್ಮಿತಾ ಜೈನ್, ಪ್ರಾಂಶುಪಾಲರು ಅಭಿನಂದಿಸಿದ್ದಾರೆ.