41 ಅಗತ್ಯ ಔಷಧಗಳ ಬೆಲೆ ಮತ್ತಷ್ಟು ಇಳಿಕೆ
Published Date: 18-May-2024 Link-Copied
ಹೊಸದಿಲ್ಲಿ: ಸಕ್ಕರೆ, ಹೃದಯ ಹಾಗೂ ಯಕೃತ್ತಿನಕಾಯಿಲೆಗಳಿಗೆ ಸಂಬಂಧಿಸಿದ 41 ಔಷಧಗಳ ಬೆಲೆಯನ್ನು ಕೇಂದ್ರ ಸರಕಾರ ತಗ್ಗಿಸಿದೆ. ಈ ಕುರಿತು ಔಷಧಾಲಯ ಇಲಾಖೆ ಹಾಗೂ ರಾಷ್ಟ್ರೀಯ ಔಷಧಾಲಯ ಬೆಲೆ ಪ್ರಾಧಿಕಾರ ಸೂಚನೆ ನೀಡಿದೆ. ಆ್ಯಂಟಾಸಿಡ್‌ಗಳು, ಮಲ್ಟಿವಿಟಮಿನ್‌ಗಳು, ಆಂಟಿಬಯಾಟಿಕ್‌ಗಳು, ಸೋಂಕು, ಅಲರ್ಜಿ, ಜ್ವರ, ನೋವು ನಿವಾರಣೆ ಸಹಿತ ಅತೀ ಹೆಚ್ಚಾಗಿ ಬಳಸುವ 41 ಮಾತ್ರೆ ಹಾಗೂ ಔಷಧಗಳು ಇನ್ನು ಮುಂದೆ ಇನ್ನಷ್ಟು ಕಡಿಮೆ ಬೆಲೆಗೆ ದೊರೆಯಲಿವೆ. ದೇಶದಲ್ಲಿ ಸುಮಾರು 10 ಕೋಟಿ ಮಧುಮೇಹಿಗಳಿದ್ದು, ಬೆಲೆ ಕಡಿಮೆಯಾಗಿದ್ದರಿಂದ ಅವರಿಗೆ ಅನುಕೂಲವಾಗಲಿದೆ.