ಉಚಿತ ಅಧಿಕ ರಕ್ತದೊತ್ತಡದ ತಪಾಸಣೆ ಮತ್ತು ತಡೆಗಟ್ಟುವ ಶಿಬಿರ
Published Date: 14-May-2024 Link-Copied
ಹುಬ್ಬಳ್ಳಿ (ವಿದ್ಯಾನಗರ)ಯ ಎಸ್.ಡಿ.ಎಂ. ಪಾಲಿಕ್ಲಿನಿಕ್‌ನಲ್ಲಿ ಎಸ್.ಡಿ.ಎಂ. ಫಿಸಿಯೋಥೆರಪಿ ಕಾಲೇಜು ಮತ್ತು ಎಸ್.ಡಿ.ಎಂ. ವೈದ್ಯಕೀಯ ಕಾಲೇಜಿನ ಮೆಡಿಸನ್ ವಿಭಾಗದವರ ಸಹಯೋಗದೊಂದಿಗೆ “ಜಾಗತಿಕ ಅಧಿಕ ರಕ್ತದೊತ್ತಡದ ದಿನ” ದ ಅಂಗವಾಗಿ ಮೇ ತಿಂಗಳ 17 ರಂದು(ಶುಕ್ರವಾರ) ಬೆಳ್ಳಿಗ್ಗೆ 09.00 ರಿಂದ ಮಧ್ಯಾಹ್ನ 01.00 ಗಂಟೆಯವರೆಗೆ ಉಚಿತ ರಕ್ತದೊತ್ತಡ ತಪಾಸಣೆ ಮತ್ತು ತಡೆಗಟ್ಟಲು ಮಾಡಬೇಕಾದ ವ್ಯಾಯಾಮದ ಮಹತ್ವದ ಬಗ್ಗೆ ಶಿಬಿರವನ್ನು ಹಮ್ಮಿಕೊಳ್ಳಲಾಗಿದೆ. ಅಧಿಕ ರಕ್ತದೊತ್ತಡ ಹೊಂದಿದವರು ಮತ್ತು 40 ವರ್ಷ ದಾಟಿದವರು ಈ ಉಚಿತ ಶಿಬಿರಕ್ಕೆ ಬಂದು ಎಸ್.ಡಿ.ಎಂ. ಕಾರ್ಡಿಯೋರೆಸ್ಪರೇಟರಿ ಫಿಸಿಯೋಥೆರಪಿ ಅವರಿಂದ ಸೂಕ್ತ ಮಾಹಿತಿ, ತಪಾಸಣೆ, ಮಾರ್ಗದರ್ಶನ ಪಡೆದುಕೊಂಡು ಶಿಬಿರದ ಸದುಪಯೋಗ ಪಡೆದುಕೊಳ್ಳಬೇಕೆಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.