ವೇಣೂರು: ಶ್ರೀ ಮಹಾಲಿಂಗೇಶ್ವರ ದೇವಾಸ್ಥಾನದ ವರ್ಷಾವಧಿ ಜಾತ್ರಾ ಮಹೋತ್ಸವ
Published Date: 11-Apr-2024 Link-Copied
ಬೆಳ್ತಂಗಡಿ ತಾಲೂಕಿನ ಶ್ರೀ ಮಹಾಲಿಂಗೇಶ್ವರ ದೇವಸ್ಥನದ ವರ್ಷಾವಧಿ ಜಾತ್ರಾ ಮಹೋತ್ಸವವು ಏ. 13ರಿಂದ ಪ್ರಾರಂಭಗೊಂಡು ಏ. 22ರವರೆಗೆ ನೆರವೇರಲಿದ್ದು, ಏ. 25ರಂದು ಶ್ರೀ ಭದ್ರಾಕಾಳಿ ದೇವಿಯ ಪ್ರತಿಷ್ಠಾ ಮಹೋತ್ಸವ ನೆರವೇರಲಿದ್ದು ಈ ಪ್ರಯುಕ್ತ ಚಂಡಿಕಾಯಾಗ ಹಾಗೂ 1008 ಹೂವಿನ ಪೂಜೆ ಜರಗಲಿದೆ. ಸಾಂಸ್ಕೃತಿಕ ಕಾರ್ಯಕ್ರಮ: ಏ. 14ರಂದು ರಾತ್ರಿ 7 ರಿಂದ ಭರತನಾಟ್ಯ ಕಾರ್ಯಕ್ರಮ ‘ನೃತ್ಯಾರ್ಪಣಂ’, ಏ. 16ರಂದು ರಾತ್ರಿ 7ರಿಂದ ‘ಮೀನಾಕ್ಷಿ ಕಲ್ಯಾಣ’ ಯಕ್ಷಗಾನ ತಾಳಮದ್ದಳೆ, ಏ. 17 ರಂದು ರಾತ್ರಿ 7 ರಿಂದ ‘ಶ್ರೀ ರಾಮ ಕಾರುಣ್ಯ’ ಯಕ್ಷಗಾನ ತಾಳಮದ್ದಳೆ, ಏ. 18ರಂದು ರಾತ್ರಿ 7ರಿಂದ ತುಳುನಾಡ ಕಲಾವಿದರು ವೇಣೂರು ಇವರಿಂದ ಮನರಂಜನಾ ಕಾರ್ಯಕ್ರಮ, ಏ. 19ರಂದು ರಾತ್ರಿ 7ರಿಂದ 9.30ರವರೆಗೆ ‘ಯಕ್ಷ-ಗಾನ-ವೈಭವ’, ರಾತ್ರಿ 9.30ರಿಂದ ಶಿವಾಂಜಲಿ ಡಾನ್ಸ್ ಇನ್‌ಸ್ಟಿಟ್ಯೂಟ್, ವೇಣೂರು ಇವರಿಂದ ‘ಹಾಸ್ಯ-ನಾಟ್ಯ-ವೈಭವ’, ಏ.21ರಂದು ಸಂಜೆ 6.30ರಿಂದ ಪಾವಂಜೆ ಮೇಳದ ಯಕ್ಷಗಾನ- ಶ್ರೀ ದೇವಿ ಮಹಾತ್ಮೆ ನಡೆಯಲಿದೆ.