ರಜಾದಿನಗಳಲ್ಲೂ ಮೆಸ್ಕಾಂ ಕೌಂಟರ್ ಲಭ್ಯ
Published Date: 23-Mar-2024 Link-Copied
ಮಂಗಳೂರು/ಉಡುಪಿ ಮಾ. 22: ಗ್ರಾಹಕರಿಗೆ ವಿದ್ಯುತ್ ಬಿಲ್ ಪಾವತಿಸಲು ಅನುಕೂಲವಾಗುವಂತೆ ಸಾರ್ವತ್ರಿಕ ರಜಾದಿನಗಳಾದ ಮಾ. 23 (ನಾಲ್ಕನೇ ಶನಿವಾರ), ಮಾ. 24 (ರವಿವಾರ), ಮಾ. 29(ಗುಡ್ ಫ್ರೈಡೆ) ಹಾಗೂ ಮಾ. 31 (ರವಿವಾರ)ರಂದು ದಕ್ಷಿಣ ಕನ್ನಡ, ಉಡುಪಿ, ಶಿವಮೊಗ್ಗ ಮತ್ತು ಚಿಕ್ಕಮಗಳೂರು ಜಿಲ್ಲಾ ವ್ಯಾಪ್ತಿಯ ಮೆಸ್ಕಾಂನ ಎಲ್ಲ ನಗದು ಕೌಂಟರ್‌ಗಳು ತೆರೆದಿರುತ್ತವೆ. ಈ ದಿನಗಳಂದು ಗ್ರಾಹಕರು ಸೌಲಭ್ಯದ ಸದುಪಯೋಗಪಡಿಸಿಕೊಂಡು ವಿದ್ಯುತ್ ಬಿಲ್‌ಗಳನ್ನು ಪಾವತಿಸಬಹುದು ಎಂದು ಮೆಸ್ಕಾಂ ತಿಳಿಸಿದೆ.