ಬೋರ್ಡ್ ಪರೀಕ್ಷೆಗೆ ಕೋರ್ಟ್ ಗ್ರೀನ್ ಸಿಗ್ನಲ್
Published Date: 22-Mar-2024 Link-Copied
ಬೆಂಗಳೂರು: ಹೈಕೋರ್ಟ್ ನ ತೀರ್ಪಿನ ಬೆನ್ನಲ್ಲೇ ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯನಿರ್ಣಯ ಮಂಡಳಿ 5,8 ಮತ್ತು 9ನೇ ತರಗತಿಗಳ ಮೌಲ್ಯಂಕನ ಪರೀಕ್ಷೆಯ ವೇಳಾಪಟ್ಟಿ ಪ್ರಕಟಿಸಿದೆ. ಎಸ್ಸೆಸ್ಸೆಲ್ಸಿ ಪರೀಕ್ಷೆ ಜತೆ ಜತೆಗೆ ಮಾ.25ರಿಂದ ಮೌಲ್ಯಂಕನ ಪರೀಕ್ಷೆ ಆರಂಭವಾಗಲಿದ್ದು, 28ರಂದು ಮುಗಿಯಲಿದೆ. ಈ ಮೂಲಕ ಕಳೆದ ಕೆಲ ದಿನಗಳಿಂದ ಪರೀಕ್ಷೆ ನಡೆಯುತ್ತದೋ ಅಥವಾ ಇಲ್ಲವೊ ಎಂಬ ಗೊಂದಲದಲ್ಲಿ ಸಿಲುಕಿದ್ದ ವಿದ್ಯಾಥಿಗಳು ಹಾಗೂ ಪೋಷಕರು ನಿಟ್ಟುಸಿರು ಬಿಡುವಂತಾಗಿದೆ. 5ನೇ ತರಗತಿ : ಮಾ.25-ಪರಿಸರ ಅಧ್ಯಯನ, ಮಾ.26- ಗಣಿತ. 8ನೇ ತರಗತಿ : ಮಾ. 25- ತೃತೀಯ ಭಾಷೆ, ಮಾ.26- ಗಣಿತ, ಮಾ.27- ವಿಜ್ಞಾನ, ಮಾ.28- ಸಮಾಜ ವಿಜ್ಞಾನ. 9ನೇ ತರಗತಿ : ಮಾ.25- ತೃತೀಯ ಭಾಷೆ, ಎನ್‌ಎಸ್‌ಕ್ಯೂಎಫ್, ಮಾ.26- ಗಣಿತ, ಮಾ.27- ವಿಜ್ಞಾನ, ಮಾ.28- ಸಮಾಜ ವಿಜ್ಞಾನ.